More

    ವಿಜ್ಞಾನದಿಂದ ಸಮಸ್ಯೆಗೆ ಪರಿಹಾರ

    ಬೆಳಗಾವಿ: ವಿಜ್ಞಾನವು ವಿದ್ಯಾರ್ಥಿಗಳಲ್ಲಿ ಸಮಸ್ಯೆ ಪರಿಹಾರಕ್ಕೆ ಸಹಾಯ ಮಾಡುವಲ್ಲಿ ತಾರ್ಕಿಕತೆ, ಸೃಜನಶೀಲತೆ ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಾರ್ಯದರ್ಶಿ, ಬೆಳಗಾವಿ ವಿಭಾಗದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ವಾಲ್ಟರ್ ಎಚ್.ಡಿ.ಮೆಲ್ಲೊ ತಿಳಿಸಿದರು.

    ಮಹಾಂತೇಶ ನಗರದ ಮಹಾಂತ ಭವನದಲ್ಲಿ ಸ್ಥಳೀಯ ಸೇವಕ ಸಂಸ್ಥೆ, ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಪರಿಷತ್ತು ಸಹಯೋಗದೊಂದಿಗೆ ವಿಜ್ಞಾನ ಶಿಕ್ಷಕರು ಹಾಗೂ ಶಿಕ್ಷಣ ಪ್ರಶಿಕ್ಷಕರಿಗೆ ಮಂಗಳವಾರ ಆಯೋಜಿಸಿದ್ದ ಮೂರು ದಿನಗಳ ಕಡಿಮೆ ವೆಚ್ಚದ ಶಿಕ್ಷಣ ಸಾಮಗ್ರಿಗಳ ತಯಾರಿಕೆ ಮೂಲಕ ವಿಜ್ಞಾನ ಸಂವಹನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಸಾಂಪ್ರದಾಯಿಕ ಪದ್ಧತಿಯಿಂದ ಅಥವಾ ಕೇವಲ ಬೋಧನಾ ವಿಧಾನದಿಂದ ವಿಜ್ಞಾನ ಬೋಧಿಸುವುದರಿಂದ ವಿದ್ಯಾರ್ಥಿಗಳಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು
    ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಯಾವುದೇ ವೈಜ್ಞಾನಿಕ ಪರಿಕಲ್ಪನೆಯನ್ನು ಸುಲಭವಾಗಿ ಅರ್ಥಮಾಡಿಸಿಕೊಳ್ಳಲು ಶಿಕ್ಷಕರಿಗೆ ಬೋಧನಾ ಸಾಮಗ್ರಿಗಳು ಬಹಳ ಉಪಯೋಗಕ್ಕೆ ಬರುತ್ತವೆ ಎಂದರು.

    ಸಾಂಪ್ರದಾಯಿಕ ಬೋಧನೆ ಹಾಗೂ ಕಲಿಕಾ ವಿಧಾನಗಳು ನವೀನ, ಸೃಜನಶೀಲ ಹಾಗೂ ಸಮರ್ಥ ಶಿಕ್ಷಣ ವಿಧಾನಗಳಿಗೆ ವೇಗವಾಗಿ ದಾರಿ ಮಾಡಿಕೊಡುತ್ತಿವೆ ಎಂದು ತಿಳಿಸಿದರು.
    ರಾಣಿ ಚನ್ನಮ್ಮವಿವಿ ಶೈಕ್ಷಣಿಕ ಪರಿಷತ್ತಿನ ಸದಸ್ಯ ಡಾ. ಎಸ್.ಬಿ. ಸೋಮಣ್ಣವರ, ಡಾ. ನಿರ್ಮಲಾ ಬಟ್ಟಲ, ಆನಂದ ಲೋಬೊ, ಪ್ರತಿಮಾ ಜೋಶಿ, ಭರ್ಮಾ ಗುಂಡುಕೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts