More

    ವಿಜೃಂಭಣೆಯ ಶ್ರೀ ಗುಡ್ಡದಮಲ್ಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

    ಹೊಳೆಹೊನ್ನೂರು: ಭದ್ರಾವತಿ ತಾಲೂಕು ಮಲ್ಲಾಪುರದ ಪುರಾಣ ಪ್ರಸಿದ್ಧ ಶ್ರೀ ಗುಡ್ಡದಮಲ್ಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
    ಮಧ್ಯಾಹ್ನದ ಸುಡು ಬಿಸಿಲನ್ನೂ ಲೆಕ್ಕಿಸದೆ ಮಹಿಳೆಯರು, ಮಕ್ಕಳೂ ಸೇರಿದಂತೆ ಭಕ್ತರು ಕೆಂಡ ಹಾಯ್ದು ಮಲ್ಲೇಶ್ವರ ಸ್ವಾಮಿಗೆ ಭಕ್ತಿ ಸಮರ್ಪಿಸಿದರು. ಮಹಿಳೆಯರು ಬಾಯಿಗೆ ಬೀಗ ಚುಚ್ಚಿಕೊಂಡು ಹರಕೆ ತೀರಿಸಿದರು. ಹರಕೆ ಮಾಡಿಕೊಂಡವರು ಸ್ವಾಮಿಯ ಸನ್ನಿಧಾನದಲ್ಲಿ ಮಕ್ಕಳ ಜವಳ ತೆಗೆಸಿದರು.
    ಕೆಂಡಾರ್ಚನೆ ನಂತರ ನಡೆದ ಪ್ರಸಾದ ವಿನಿಯೋಗದಲ್ಲಿ ಗೋದಿ ಪಾಯಸ, ಅವರೆಕಾಳು ಪಲ್ಯ, ಅನ್ನ-ಸಂಬಾರ್ ನೀಡಲಾಯಿತು. ಸಾವಿರಾರು ಭಕ್ತಾದಿಗಳು ಪ್ರಸಾದ ವಿನಿಯೋಗದಲ್ಲಿ ಭಾಗಿಯಾದರು.
    ರಾತ್ರಿ ಭವ್ಯ ರಥೋತ್ಸವ ಜರುಗಿತು. ವಿವಿಧ  ಪುಷ್ಪಗಳಿಂದ ವಿಶೇಷವಾಗಿ ಸಿಂಗರಿಸಿದ್ದ ರಥದಲ್ಲಿ ವಿರಾಜಮಾನವಾಗಿ ಕುಳಿತಿದ್ದ ಗುಡ್ಡದಮಲ್ಲೇಶ್ವರ ಸ್ವಾಮಿಯನ್ನು ಜನರು ಕಣ್ತುಂಬಿಕೊಂಡರು. ತಮ್ಮ ಕೋರಿಕೆಯನ್ನು ಬಾಳೆ ಹಣ್ಣಿನ ಮೇಲೆ ಬರೆದು ರಥದ ಕಳಸಕ್ಕೆ ಏಸೆದರಲ್ಲದೇ ರಥ ಎಳೆದು ಪುನೀತರಾದರು. ಮಹಿಳೆಯರು ಪಾರ್ವತಿ ದೇವಿಗೆ ಮಡಿಲಕ್ಕಿ ತುಂಬಿಸಿ ಹಣ್ಣುಕಾಯಿ ಮಾಡಿಸಿದರು. ಜಾತ್ರಾ ಮಹೋತ್ಸವಕ್ಕೆ ಅಕ್ಕಪಕ್ಕದ ಹಳ್ಳಿಗಳಿಂದ ಪಾನಕದ ಗಾಡಿಗಳನ್ನು ಕಟ್ಟಿಕೊಂಡು ಆಗಮಿಸಿದ ಭಕ್ತರು ಬಿಸಿಲ ಬೇಗೆಯನ್ನು ತಣಿಸಲು ಇತರ ಭಕ್ತರಿಗೆ ಬೆಲ್ಲದ ಪಾನಕ, ಮಜ್ಜಿಗೆ, ಕೊಸಂಬರಿ ಹಂಚಿದರು.
    ಪ್ರಸಾದ ವಿನಿಯೋಗ ಸೇರಿದಂತೆ ಜÁತ್ರಾಮಹೋತ್ಸವವನ್ನು ಶ್ರೀ ಗುಡ್ಡದಮಲ್ಲೇಶ್ವರ ಸೇವಾ ಸಮಿತಿ ಪದಾ„ಕಾರಿಗಳು ಹಾಗೂ ಗ್ರಾಮಸ್ಥರು ಅಚ್ಚುಕಟ್ಟಾಗಿ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts