More

    ವಿಜಯಪುರ ತಾಲೂಕು ಹೋರಾಟ ಪುನರಾರಂಭ, ಶಾಸಕರ ಬೆಂಬಲ ಕೋರಲು ಹೋರಾಟ ಸಮಿತಿ ನಿರ್ಧಾರ

    ವಿಜಯಪುರ: ಕರೊನಾ ಪಿಡುಗಿನ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ವಿಜಯಪುರ ತಾಲೂಕು ಹೋರಾಟ ಪುನರಾರಂಭಿಸಲು ವಿಜಯಪುರ ತಾಲೂಕು ಹೋರಾಟ ಸಮಿತಿ ನಿರ್ಧರಿಸಿದೆ. ಹೋರಾಟಕ್ಕೆ ಶಾಸಕರ ಬೆಂಬಲ ಪಡೆಯಲು ಸಮಿತಿ ನಿರ್ಧರಿಸಿದೆ.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಬಿ.ಕೆ. ಶಿವಪ್ಪ ಅವರ ನೇತೃತ್ವದಲ್ಲಿ ಭಾನುವಾರ ಏರ್ಪಡಿಸಿದ್ದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

    ವಿಜಯಪುರವನ್ನು ತಾಲೂಕು ಕೇಂದ್ರವಾಗಲು ಅವಶ್ಯಕವಿರುವ ಎಲ್ಲ ಅರ್ಹತೆಗಳು ಇವೆ. ಇದನ್ನು ತಾಲೂಕು ಮಾಡಿದರೆ, ಹೆಚ್ಚಿನ ಅಭಿವೃದ್ಧಿಗೊಂಡು, ಮೂಲಸೌಕರ್ಯಗಳ ಲಭ್ಯತೆಯೂ ಹೆಚ್ಚಾಗುತ್ತದೆ. ವಿಧಾನಸಭಾ ಕ್ಷೇತ್ರ ಮಾತ್ರ ದೇವನಹಳ್ಳಿಯೇ ಇರಲಿದೆ ಎಂದು ಬಿ.ಕೆ.ಶಿವಪ್ಪ ತಿಳಿಸಿದರು.

    ಪಟ್ಟಣದಲ್ಲಿ ನಾಡಕಚೇರಿ ಇದ್ದರೂ ಸಂಬಂಧಪಟ್ಟ ದಾಖಲೆಗಳು ಇರುವುದಿಲ್ಲ. ಯಾವುದೇ ವಿಚಾರಣೆ ಮಾಡಬೇಕೆಂದರೆ ದೇವನಹಳ್ಳಿಗೆ ಹೋಗಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

    ವಿಜಯಪುರವನ್ನು ತಾಲೂಕು ಕೇಂದ್ರವಾಗಿಸಲು ಸಹಕರಿಸುವುದಾಗಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತು ಕೊಟ್ಟಿದ್ದರು. ಕಂದಾಯ ಸಚಿವ ಆರ್. ಅಶೋಕ್ ಮತ್ತಿತರ ಬಿಜೆಪಿ ಮುಖಂಡರು ಕೂಡ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

    ಶಾಸಕರ ಜತೆ ಮಾತುಕತೆ ಭರವಸೆ: ಬಮುಲ್ ಮಾಜಿ ನಿರ್ದೇಶಕ ದಂಡಿಗಾನಹಳ್ಳಿ ನಾರಾಯಣಸ್ವಾಮಿ ಮಾತನಾಡಿ, ಎಲ್ಲರೂ ಪಕ್ಷಭೇದ ಮರೆತು, ಒಮ್ಮತದಿಂದ ವಿಜಯಪುರ ತಾಲೂಕು ಹೋರಾಟಕ್ಕೆ ಕೈಜೋಡಿಸಬೇಕು. ಈ ಕುರಿತು ಶಾಸಕ ನಿಸರ್ಗ ನಾರಾಯಣಸ್ವಾಮಿ ಜತೆಗೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.

    ಪುರಸಭೆ ಠರಾವಿಗೆ ಆಗ್ರಹ: ದೇವನಹಳ್ಳಿ ಭೂ ಅಭಿವೃದ್ಧಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ವೀರಭದ್ರಪ್ಪ ಮಾತನಾಡಿ, ಪುರಸಭೆಯ ಮುಂದಿನ ಸಭೆಯಲ್ಲಿ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ೋಷಿಸುವಂತೆ ಠರಾವು ಮಾಡಬೇಕು. ಬಳಿಕ ನಂತರ ಶಾಸಕರ ಸಹಕಾರದಲ್ಲಿ ಸರ್ಕಾರದ ಮಟ್ಟದಲ್ಲಿ ತಾಲೂಕು ಹೋರಾಟ ಮುಂದುವರಿಸಬೇಕು ಎಂದು ಸಲಹೆ ನೀಡಿದರು.

    ಹಾರೋಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಚಿಕ್ಕನಹಳ್ಳಿ ಸುಬ್ಬಣ್ಣ, ಕೆಪಿಸಿಸಿ ಸದಸ್ಯ ಚೀಮಾಚನಹಳ್ಳಿ ರಾಮಚಂದ್ರಪ್ಪ, ಬಿಎಸ್‌ಎನ್‌ಎಲ್ ನಾಮಿನಿ ನಿರ್ದೇಶಕ ಕನಕರಾಜು, ಎಸ್‌ಸಿ ಘಟಕದ ಮಾಚಪ್ಪ, ಎಂಪಿಸಿಎಸ್ ಮಾಜಿ ಅಧ್ಯಕ್ಷ ಮುನಿರಾಜು, ಪುರಸಭೆ ಮಾಜಿ ಉಪಾಧ್ಯಕ್ಷ ರಾಮಚಂದ್ರಪ್ಪ, ಟೌನ್ ಕಸಾಪ ಮಾಜಿ ಅಧ್ಯಕ್ಷ ಜೆ.ಆರ್. ಮುನಿವೀರಣ್ಣ, ಜಿಪಂ ಮಾಜಿ ಸದಸ್ಯರಾದ ಬಸವರಾಜು, ಚಂದೇನಹಳ್ಳಿ ಮುನಿಯಪ್ಪ, ಮಹಬೂಬ್ ಸಾಬ್, ಟೌನ್ ಬಿಜೆಪಿ ಮಾಜಿ ಉಪಾಧ್ಯಕ್ಷ ದೇವರಾಜು, ಜಗದೀಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts