More

    ವಿಜಯದಶಮಿ ಸರಳ ಆಚರಣೆ

    ಕಲಬುರಗಿ: ದುಷ್ಟ ಶಕ್ತಿ ನಾಶಪಡಿಸಿ ಜ್ಞಾನದ ಬೆಳಕು ನೀಡುವ ಸಂಕೇತವಾಗಿರುವ ದಸರಾ ನವರಾತ್ರೋತ್ಸವ ಹಾಗೂ ವಿಜಯದಶಮಿ ಹಬ್ಬ ನಗರದಲ್ಲಿ ಭಾನುವಾರ ಆಚರಿಸಲಾಯಿತು.
    ವಿವಿಧ ಮಠ ಮಂದಿರಗಳಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಆಯೋಜಿಸಲಾಗಿತ್ತು. ನಗರದ ನ್ಯೂ ರಾಘವೇಂದ್ರ ಕಾಲನಿ ವೆಂಕಟೇಶ್ವರ ಮಂದಿರದಲ್ಲಿ ಪ್ರತಿಯೊಬ್ಬ ಭಕ್ತರು ಮಾಸ್ಕ್ ಧರಿಸಿ ಸ್ವಾಮಿಯ ದರ್ಶನ ಪಡೆದುಕೊಂಡರು. ದೇವಸ್ಥಾನದ ದ್ವಾರದಲ್ಲಿಯೇ ಸ್ಯಾನಿಟೈಸರ್ ಇಡಲಾಗಿತ್ತು. ಪಂ. ಗೋಪಾಲಾಚಾರ್ಯ ಅಕಮಂಚಿಯವರು ನಡೆಸಿಕೊಟ್ಟ ಶ್ರೀನಿವಾಸ ಕಲ್ಯಾಣೋತ್ಸವ ಮಂಗಲಗೊಂಡಿತು.
    ಬ್ರಹ್ಮಪುರದ ಉತ್ತರಾದಿ ಮಠ ಶ್ರೀ ವಿಠ್ಠಲ ರುಕ್ಮಿಣಿ ಮಂದಿರದಲ್ಲಿ ಪಂ. ವಿನೋದಾಚಾರ್ಯ ಗಲಗಲಿ ನೇತೃತ್ವದಲ್ಲಿ ಭಾನುವಾರ ಸಂಜೆ ಶ್ರೀನಿವಾಸ ಕಲ್ಯಾಣೋತ್ಸವ ಜರುಗಿತು. ಹತ್ತು ದಿನಗಳವರೆಗೆ ನಡೆದ ವೆಂಕಟೇಶ ಪಾರಿಜಾತ ಪುರಾಣ ಮಂಗಳಗೊಂಡಿತು. ಪಂ.ಅಭಯಾಚಾರ್ಯ, ಉತ್ತರಾದಿ ಮಠದ ಮಠಾಧಿಕಾರಿ ರಾಮಾಚಾರ್ಯ ಘಂಟಿ, ವಿಶ್ವ ಮಧ್ವ ಮಹಾ ಪರಿಷತ್ ಅಧ್ಯಕ್ಷ ರಾಮಾಚಾರ್ಯ ಮೋಘರೆ, ನರಸಿಂಹಾಚಾರ್ಯ ಕೊಲ್ಹಾರ, ಆನಂದತೀಥರ್ಾಚಾರ್ಯ ಪಾಲ್ಗೊಂಡಿದ್ದರು.
    ಹಳೆಯ ಜೇವರ್ಗಿ ರಸ್ತೆಯಲ್ಲಿ ಜೈ ಭವಾನಿ ತರುಣ ಸಂಘದಿಂದ 20 ವರ್ಷಗಳಿಂದ ದೇವಿ ಮೂರ್ತಿ ಪ್ರತಿಷ್ಠಾಪಿಸಿ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಜೇವರ್ಗಿ ಕಾಲನಿಯಲ್ಲಿ ಗೆಳೆಯರ ಬಳಗದವರು ನವರಾತ್ರಿ ನಿಮಿತ್ತ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
    ಶಹಾಬಜಾರದ ಜಗದಂಬಾ ಮಂದಿರದಲ್ಲಿ ಸೋಮವಂಶಿ ಸಹಸ್ರಾರು ಕ್ಷತ್ರೀಯ ಸಮಾಜದಿಂದ ದೇವಿಗೆ ಪ್ರತಿ ದಿನ ಒಂದೊಂದು ರೂಪದಿಂದ ಅಲಂಕಾರ ಮಾಡಿ ಪೂಜಿಸಲಾಯಿತು. ಎಂಎಸ್ಕೆ ಮಿಲ್ನಲ್ಲಿರುವ ವ್ಯಾಸರಾಜರು ಪ್ರತಿಷ್ಠಾಪಿಸಿದ ಸಿದ್ಧಿ ಮಾರುತಿ ಮಂದಿರದಲ್ಲಿ 9 ದಿನ ದೀಪೋತ್ಸವ ಸೇರಿ ಹಲವಾರು ಕಾರ್ಯಕ್ರಮಗಳು ಅರ್ಚಕ ನಾರಾಯಣಾಚಾರ್ಯರ ನೇತೃತ್ವದಲ್ಲಿ ನಡೆಯಿತು.
    ಚಿತ್ತಾಪುರ ತಾಲೂಕಿನ ಬಳವಡಗಿ ಗ್ರಾಮದಲ್ಲಿ ಯಲ್ಲಮ್ಮದೇವಿಗೆ ವಿಶೇಷ ಅಲಂಕಾರ ಮಾಡಲಾಯಿತು. ಸನ್ನತಿಯ ಶ್ರೀಪಾದ ಭಟ್ಟರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ಜರುಗಿದವು. ಗ್ರಾಮದ ಮಲ್ಲಣ್ಣಗೌಡ ಪೊಲೀಸ್ ಪಾಟೀಲ್, ಬಾಬುರಾವ ಕುಲಕರ್ಣಿ , ದಂಡಯ್ಯ ಸ್ವಾಮಿ, ಬಸವರಾಜ ಸಜ್ಜನ್ ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts