More

    ವಿಕೃತಿ ಮೆರೆಯುತ್ತಿದ್ದ ದುಷ್ಕರ್ಮಿಗಳ ಬಂಧನ, ಜಾಲತಾಣಗಳಲ್ಲಿ ಅಶ್ಲೀಲ ಸಂದೇಶ ರವಾನೆ, ಚನ್ನರಾಯಪಟ್ಟಣ ಠಾಣೆ ಪೊಲೀಸರ ಕಾರ್ಯಾಚರಣೆ

    ಚನ್ನರಾಯಪಟ್ಟಣ: ಅಶ್ಲೀಲ ಸಂದೇಶಗಳೊಂದಿಗೆ ಯುವಕ, ಯುವತಿಯರ ೆಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದ ಆರೋಪದಲ್ಲಿ ಮೂವರನ್ನು ಚನ್ನರಾಯಪಟ್ಟಣ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

    ಹೋಬಳಿ ಚೀಮಾಚನಹಳ್ಳಿಯ ನಿತಿನ್(22), ಮುನಿರಾಜು (36) ಹಾಗೂ ನಲ್ಲಪನಹಳ್ಳಿಯ ಆಕಾಶ್ (22) ಬಂಧಿತರು.
    ಆರೋಪಿಗಳಾದ ನಿತಿನ್ ಹಾಗೂ ಮುನಿರಾಜು ಮೊಬೈಲ್ ಮೂಲಕ ಗೌಪ್ಯವಾಗಿ ಯುವಕ-ಯುವತಿಯರ ಪೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಅಲ್ಲದೆ ವಾಟ್ಸ್‌ಆ್ಯಪ್, ೇಸ್‌ಬುಕ್‌ಗಳಲ್ಲಿ ಪೋಟೋಗಳನ್ನು ಸಂಗ್ರಹಿಸುತ್ತಿದ್ದರು. ಇದನ್ನು ಹಾಸನದಲ್ಲಿ ನೆಲೆಸಿದ್ದ ಮತ್ತೊಬ್ಬ ಆರೋಪಿ ಆಕಾಶ್ ಎಂಬುವನಿಗೆ ಕಳುಹಿಸುತ್ತಿದ್ದರು. ಆಕಾಶ್, ೇಕ್ ಸಿಮ್ ನೆರವಿನಿಂದ ಇನ್‌ಸ್ಟ್ರಾಗ್ರಾಂನಲ್ಲಿ ಖಾತೆ ತೆರೆದು ಅಲ್ಲಿಂದಲೇ ಅಶ್ಲೀಲವಾಗಿ ಪೋಸ್ಟ್ ಮಾಡುತ್ತಿದ್ದ. 1 ವರ್ಷದಿಂದ ಇಂಥ ವಿಕೃತಿಯಲ್ಲಿ ತೊಡಗಿಸಿಕೊಂಡಿದ್ದರು.

    ಸೆಕ್ಸಿ ಗರ್ಲ್ ಬೇಕಾ?: ಸೆಕ್ಸಿ ಗರ್ಲ್ಸ್ ಬೇಕಾ ಇವರನ್ನು ಸಂಪರ್ಕಿಸಿ ಎಂದು ಪೋಸ್ಟ್ ಮಾಡುವುದು, ಕಮೆಂಟ್‌ಗಳು ಬಂದ ಬಳಿಕ, ಪುನಃ ರೇಟ್ ಪಿಕ್ಸ್ ಮಾಡಿ ಎಂದು ಪೋಸ್ಟ್ ಮಾಡಿ ವಿಕೃತಿ ಮೆರೆಯುತ್ತಿದ್ದರು. ಈ ಮೂವರು, ಬೇರೆ ಬೇರೆ ಅಕೌಂಟ್‌ಗಳನ್ನು ತೆರೆದು ಇಂಥ ಪೋಸ್ಟ್ ಹರಿಬಿಡುತ್ತಿದ್ದರು. ಮರ್ಯಾದೆಗೆ ಅಂಜಿ ಕೆಲವೊಂದು ಯುವತಿಯರ ಕುಟುಂಬದವರು ಇದುವರೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿರಲಿಲ್ಲ. ಇತ್ತೀಚೆಗೆ ಇವರ ಹಾವಳಿ ಮಿತಿಮೀರಿತ್ತು. ಇದರಿಂದ ನೊಂದ ಯುವತಿಯರ ಕುಟುಂಬದವರು ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಸೈಬರ್ ಕ್ರೈಂ ಪೊಲೀಸರ ಕಾರ್ಯಾಚರಣೆ: ಈ ಪ್ರಕರಣ ಸ್ಥಳೀಯ ಪೊಲೀಸರಿಂದ ಸೈಬರ್‌ಕ್ರೈಂ ಪೊಲೀಸರಿಗೆ ವರ್ಗಾವಣೆಯಾಗಿತ್ತು. ಟವರ್ ಲೊಕೇಷನ್ ಜಾಡು ಹಿಡಿದ ಪೊಲೀಸರು ಇದೆಲ್ಲವೂ ಹಾಸನದಿಂದ ಪೋಸ್ಟ್ ಆಗುತ್ತಿರುವುದನ್ನು ಪತ್ತೆ ಮಾಡಿದ್ದರು. ಆರೋಪಿ ಆಕಾಶ್‌ನನ್ನು ವಶಕ್ಕೆ ಪಡೆದ ಪೊಲೀಸರ ವಿಚಾರಣೆಯಲ್ಲಿ ಇನ್ನಿಬ್ಬರು ಸಹಚರರು ಬಲೆಗೆ ಬಿದ್ದಿದ್ದಾರೆ.

    ಹೌಹಾರಿದ ಗ್ರಾಮಸ್ಥರು: ಸ್ಥಳೀಯ ಯುವಕ ಯುವತಿಯರ ಪೊಟೋಗಳೊಂದಿಗೆ ಅಶ್ಲೀಲ ಸಂದೇಶ ಹರಿದಾಡುತ್ತಿರುವ ಬಗ್ಗೆ ಗ್ರಾಮಸ್ಥರು ತೀವ್ರ ಆತಂಕಗೊಂಡಿದ್ದರು. ಯಾರು ಎಲ್ಲಿಂದ ಈ ಕೃತ್ಯ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ತಲೆಕೆಡಿಸಿಕೊಂಡಿದ್ದರು. ಸ್ಥಳೀಯರೇ ಈ ಕೃತ್ಯ ಎಸಗುತ್ತಿರುವುದು ಎಂಬುದು ತಿಳಿದ ಬಳಿಕ ಗ್ರಾಮಸ್ಥರೇ ಹೌಹಾರಿದ್ದಾರೆ. ಸ್ಥಳೀಯವಾಗಿ ಮುಗ್ಧರಂತೆ ವರ್ತಿಸುತ್ತಿದ್ದ ದುಷ್ಕರ್ಮಿಗಳು ಇಂಥ ಕೃತ್ಯ ಎಸಗುತ್ತಿರುವ ಬಗ್ಗೆ ಸಣ್ಣ ಅನುಮಾನವೂ ಬಂದಿರಲಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿಗಳ ಬಂಧನದಿಂದ ಸ್ಥಳೀಯ ಯುವತಿಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

    ಶಾಸಕರ ಬಗ್ಗೆಯೂ ಪೋಸ್ಟ್!: ಸ್ಥಳೀಯ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರ ಬಗ್ಗೆಯೂ ಅವಹೇಳನಕಾರಿ ಪೋಸ್ಟ್ ಹರಿಬಿಟ್ಟಿದ್ದರು. ಅಲ್ಲದೆ ಸ್ಥಳೀಯ ಜಿಲ್ಲಾ ಪಂಚಾಯಿತಿ ಸೇರಿ ಜನಪ್ರತಿನಿಧಿಗಳು ವಿವಿಧ ಮುಖಂಡರ ಪೊಟೋಗಳನ್ನು ಬಳಸಿ ವಿಕೃತಿ ಮೆರೆಯುತ್ತಿದ್ದರು ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಬಸವನಗೌಡ.ಕೆ.ಪಾಟೀಲ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts