More

    ವಾಲ್ಮೀಕಿ ಗುರುಪೀಠ ಸೂಪರ್‌ಸೀಡ್‌ಗೆ ಅರ್ಜಿ

    ದಾವಣಗೆರೆ: ಹರಿಹರ ತಾಲೂಕು ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್ ಸೂಪರ್‌ಸೀಡ್ ಮಾಡಲು ಕೋರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ವಕೀಲ ಕೆ.ಎಂ. ಮಲ್ಲಿಕಾರ್ಜುನಪ್ಪ ಗುಮ್ಮನೂರು ತಿಳಿಸಿದರು.
    ವಾಲ್ಮೀಕಿ ನಾಯಕ ಸಮಾಜದ ಅಭಿವೃದ್ಧಿಗಾಗಿ ರಚಿಸಿರುವ ವಾಲ್ಮೀಕಿ ಗುರುಪೀಠ ಟ್ರಸ್ಟ್‌ನ್ನು 2016ರಲ್ಲಿ ಪುನಾರಚನೆ ಮಾಡಲಾಗಿದ್ದು, ಟ್ರಸ್ಟಿನ ನಿಬಂಧನೆಗಳಿಗೆ ಬದ್ಧರಾಗಿ ನಡೆದುಕೊಂಡಿಲ್ಲ. ಶಿಕ್ಷಣ ಹಾಗೂ ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
    ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆ ಇರುವ ಹಣವನ್ನು ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿಗಳ ಸಮ್ಮತಿಯಿಂದ ವಾಲ್ಮೀಕಿ ಜಾತ್ರೆಗೆ ಬಳಸಿಕೊಳ್ಳಲಾಗಿದ್ದು ಇದರಿಂದ ಸಮುದಾಯ ಹಿನ್ನಡೆ ಅನುಭವಿಸುವಂತಾಗಿದೆ ಎಂದು ದೂರಿದರು.
    ಹೀಗಾಗಿ, ಟ್ರಸ್ಟ್ ಸೂಪರ್‌ಸೀಡ್ ಮಾಡಿ ಆಡಳಿತಾಧಿಕಾರಿ ನೇಮಕ ಮಾಡಬೇಕು ಹಾಗೂ ಹಣಕಾಸು ವ್ಯವಹಾರ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.
    ಬುಡಕಟ್ಟು ಹಿತರಕ್ಷಣಾ ಸಂಘದ ರಾಜ್ಯಾಧ್ಯಕ್ಷ ಎಸ್.ಎಚ್. ಸುಭಾಷ್, ಚಿತ್ರ ನಿರ್ದೇಶಕ ಪಿ. ರಾಧಕೃಷ್ಣ ಪಲ್ಲಕ್ಕಿ, ಪ್ರಶಾಂತ ರಾಮಪ್ಪ ದಳವಾಯಿ, ಆಂಜನೇಯ ಕೋಟೆಕಲ್, ಮಾರಣ್ಣ ಪಾಳೇಗಾರ, ಟಿ. ಮನೋಹರ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts