More

    ವಾರದೊಳಗೆ ನರೇಗಾ ಕೂಲಿ ಪಾವತಿ

    ಶಿವಮೊಗ್ಗ: ನನ್ನದು ಸವಾಲಿನ ಇಲಾಖೆ. ಇಲ್ಲಿ ಅಭಿವೃದ್ಧಿ ಜತೆಗೆ ಉದ್ಯೋಗ ಸೃಷ್ಟಿಸುವ ಅನಿವಾರ್ಯತೆಯಿದೆ. ಈ ಸಂದರ್ಭದಲ್ಲಿ ಉದ್ಯೋಗಖಾತ್ರಿ ಯೋಜನೆ ಅಪದ್ಬಾಂಧವನಂತಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟರು.

    ನಾನು ಇಲಾಖೆ ಜವಾಬ್ದಾರಿ ವಹಿಸಿಕೊಂಡ ನಂತರ ಕೇಂದ್ರ ಸರ್ಕಾರ ಉದ್ಯೋಗಖಾತ್ರಿಗೆ 1,800 ಕೋಟಿ ರೂ. ಅನುದಾನ ನೀಡಿದೆ. ಬಾಕಿ ಉಳಿಸಿಕೊಂಡಿದ್ದ 800 ಕೋಟಿ ರೂ. ಕೂಲಿಯನ್ನೂ ಪಾವತಿಸಲಾಗಿದೆ. ಇನ್ನು ಮುಂದೆ ವಾರದೊಳಗೆ ನೇರವಾಗಿ ಬ್ಯಾಂಕ್ ಖಾತೆಗೆ ಕೂಲಿ ಪಾವತಿ ಮಾಡಲಾಗುವುದು ಎಂದು ಬುಧವಾರ ಪ್ರೆಸ್​ಟ್ರಸ್ಟ್​ನಲ್ಲಿ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ತಿಳಿಸಿದರು.

    ಉದ್ಯೋಗ ಖಾತ್ರಿ ಮೂಲಕ ಪ್ರತಿ ದಿನ 9.26 ಲಕ್ಷ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೂಲಿಯನ್ನು 249 ರೂ.ನಿಂದ 275 ರೂ.ಗೆ ಏರಿಕೆ ಮಾಡಲಾಗಿದೆ. ವೈಯಕ್ತಿಕ ಹಾಗೂ ಸಾಮೂಹಿಕ ಕಾಮಗಾರಿಗಳಿಗೆ ಇದರಲ್ಲಿ ಅವಕಾಶವಿದೆ. ಆರ್ಟ್ ಆಫ್ ಲಿವಿಂಗ್​ನೊಂದಿಗೆ ಒಡಂಬಡಿಕೆ ಮಾಡಿಕೊಂಡು ಅಂತರ್ಜಲ ಚೇತನ ಯೋಜನೆ ಮೂಲಕ ಅಂತರ್ಜಲ ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

    ಸ್ಮಾರ್ಟ್ ಸಿಟಿಗೆ ವೇಗ: ಜೂನ್ 1ರಿಂದ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಎರಡು ದಿನ ಶಿವಮೊಗ್ಗ ನಗರದಲ್ಲಿ ಪ್ರವಾಸ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗೆ ವೇಗ ನೀಡುವುದೂ ಸೇರಿ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸರ್ಕಾರದಿಂದ ಅಗತ್ಯವಿರುವ ನೆರವಿನ ಬಗ್ಗೆ ಸಚಿವರ ಗಮನಸೆಳೆಯಲಾಗುವುದು ಎಂದು ಈಶ್ವರಪ್ಪ ತಿಳಿಸಿದರು.

    ಲಾಕ್​ಡೌನ್ ಹಿನ್ನೆಲೆಯಲ್ಲಿ ಕಾರ್ವಿುಕರು ಸ್ವಂತ ಊರಿಗೆ ತೆರಳಿರುವ ಪರಿಣಾಮ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಹಿನ್ನಡೆಯಾಗಿತ್ತು. ಈಗ ಯೋಜನೆಗೆ ವೇಗ ನೀಡುವ ಕೆಲಸ ಮಾಡಲಾಗುತ್ತದೆ. ನಗರದ ವಿವಿಧ ಬಡಾವಣೆಗಳಲ್ಲಿ ಯುಜಿಡಿ ಕಾಮಗಾರಿ ಮುಗಿದಿದೆ. ಈ ಭಾಗದಲ್ಲಿ ನಾಗರಿಕರು ಇದರ ಸಂಪರ್ಕ ಪಡೆದು ಸಹಕರಿಸಬೇಕೆಂದು ಹೇಳಿದರು.

    ಪ್ರೆಸ್​ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts