More

    ವಾರದಲ್ಲಿ ವೋಟರ್ ಐಡಿಗೆ ಆಧಾರ್ ಜೋಡಿಸಿ

    ಗಜೇಂದ್ರಗಡ: ಮತದಾನದ ಗುರುತಿನ ಚೀಟಿಗೆ ಆಧಾರ್ ನೋಂದಣಿ ಮಾಡಿಸಲು ಒಂದು ಇಲಾಖೆಗೆ ಮಾತ್ರ ಸೀಮಿತವಲ್ಲ. ಇದು ಟೀಂ ವರ್ಕ್ ಆಗಿದ್ದು ವೇಗವಾಗಿ ಎಲ್ಲರೂ ಆಧಾರ್ ಜೋಡಣೆ ಮಾಡಿಕೊಳ್ಳುವ ಹಾಗೆ ಮಾಡಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ. ಹೇಳಿದರು.

    ಪಟ್ಟಣದ ಪುರಸಭಾ ಸಭಾ ಭವನದಲ್ಲಿ ವಿವಿಧ ಇಲಾಖೆಯ ತಾಲೂಕಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

    ತಾಲೂಕಿನಲ್ಲಿ ವೋಟರ್ ಕಾರ್ಡ್​ಗೆ ಆಧಾರ್ ನೋಂದಣಿ ಮಾಡಿಸುವುದು ನಿಧಾನ ಗತಿಯಲ್ಲಿದೆ. ಗ್ರಾಮೀಣ ಭಾಗದಲ್ಲಿ ಈ ಕಾರ್ಯ ಮಾಡಲು ಪಿಡಿಒಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಇಒ ಗಳ ನಿರ್ಲಕ್ಷ್ಯಂದ ಈ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ. ಇಒಗಳಿಂದಲೇ ಈ ಕಾರ್ಯ ಹಾಳಾಗುತ್ತಿವೆ ಎಂದರು.

    ಇಒ ಸಂತೋಷಕುಮಾರ ಪಾಟೀಲ ಪ್ರತಿಕ್ರಿಯಿಸಿ, ‘ಪಿಡಿಒಗಳು ಆಧಾರ್ ನೋಂದಣಿ ಕಾರ್ಯ ಮಾಡಲು ಆಗುವುದಿಲ್ಲ ಎಂದು ಸಿಇಒ ಅವರಿಗೆ ಮನವಿ ನೀಡಿದ್ದಾರೆ’ ಎಂದರು ಇದರಿಂದ ಅಸಮಾಧಾನಗೊಂಡ ಜಿಲ್ಲಾಧಿಕಾರಿ, ಕೆಲಸ ಮಾಡಲು ಆಗುವುದಿಲ್ಲ ಎಂದರೆ ಹೇಗೆ. ಈ ಪ್ಲಾನ್ ಅನ್ನು ನೀವೆ ಅವರಿಗೆ ಕೊಟ್ಟಿರುತ್ತೀತಿ. ಅವರಿಗೆ ಕೆಲಸ ಮಾಡಲು ಆಗುವುದಿಲ್ಲ ಎಂದು ಹೇಳಲು ನಿಮ್ಮಿಂದಲೇ ಧೈರ್ಯ ಬಂದಿರಬೇಕು. ತಾಲೂಕಿನಲ್ಲಿ ಒಂದು ವಾರದೊಳಗೆ ಆಧಾರ್ ಜೋಡಣೆಯಾಗಬೇಕು ಎಂದು ಕಟ್ಟಪ್ಪಣೆ ಮಾಡಿದರು.

    ಶಾಲಾ ಮಕ್ಕಳಿಗೆ ಆರೋಗ್ಯ ತಪಾಸಣೆ, ಸಕಾಲಕ್ಕೆ ಕಬ್ಬಿಣಾಂಶದ ಮಾತ್ರೆಗಳು ನೀಡಬೇಕು ಎಂದು ಆರೋಗ್ಯ ಇಲಾಖೆಯವರಿಗೆ ಸಲಹೆ ನೀಡಿದರು. ಗುಳಗುಳಿ ಗ್ರಾಮದ ಸ್ಮಶಾನದ ಜಾಗಕ್ಕೆ ಸಂಬಂಧಿಸಿದ ವಿಷಯ ಸರ್ಕಾರದ ಮಟ್ಟದಲ್ಲಿದೆ. ತಾಲೂಕಿನ ರಾಮಾಪುರ ಗ್ರಾಮದ ಸ್ಮಶಾನವನ್ನು ಯಾವ ಜಾತಿಗೂ ಸೀಮಿತಗೊಳಿಸಬಾರದು. ಇಲ್ಲಿ ಹಿಂದು ಧರ್ಮದ ಯಾವ ಜಾತಿಯಾವರಾದರೂ ಇದನ್ನು ಬಳಸಬಹುದು ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

    ಗಜೇಂದ್ರಗಡ ಹಾಗೂ ನರೇಗಲ್ಲ ಪಟ್ಟಣದ ಪಟ್ಟಣಗಳು ಕೊಳವೆ ಬಾವಿ ಆ್ರಶಿತವಾಗಿದ್ದರಿಂದ ಕಾಲಕಾಲಕ್ಕೆ ನೀರನ್ನು ಪರೀಕ್ಷೆಗೆ ಒಳಪಡಿಸಬೇಕು. ಸರಿಯಾಗಿ ಕಸ ಸಂಗ್ರಹಣೆ, ಚರಂಡಿ ಸ್ವಚ್ಛತೆ ಮಾಡಿ ರೋಗ ಮಕ್ತ ಪಟ್ಟಣವನ್ನಾಗಿಸಲು ಶ್ರಮಿಸಬೇಕು ಎಂದರು.

    ಉಣಚಗೇರಿ ಸರಹದ್ದಿನ ರೈತರು ನಮಗೆ ನಿರಂತರ ವಿದ್ಯುತ್ ನೀಡದಿದ್ದರೆ ನಮ್ಮನ್ನು ಗ್ರಾಮೀಣ ಭಾಗಕ್ಕೆ ಸೇರಿಸಿ ಎಂದು ಮನವಿ ಸಲ್ಲಿಸಿದರು. ಪಟ್ಟಣದ ಭಜಂತ್ರಿ ಓಣಿಯಲ್ಲಿ ನಿರ್ವಿುಸಿದ ಶೌಚಗೃಹಗಳು ಸಮರ್ಪಕ ನಿರ್ವಹಣೆ ಲ್ಲದ ದುರ್ನಾತ ಬೀರುತ್ತಿದ್ದು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ನಿವಾಸಿಗಳು ಮನವಿ ಸಲ್ಲಿಸಿದರು. ಪಟ್ಟಣದಲ್ಲಿ ನೂತನವಾಗಿ ನಿರ್ವಣವಾಗುತ್ತಿರುವ ಒಳಾಂಗಣ ಕ್ರೀಡಾಂಗಣ ವೀಕ್ಷಿಸಿದರು.

    ಉಪ ವಿಭಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ, ಜಿಲ್ಲಾ ತೋಟಗಾರಿಕೆ ಇಲಾಖೆ ನಿರ್ದೇಶಕ ಶಶಿಕಾಂತ ಕೋಟಿಮನಿ, ತಹಸೀಲ್ದಾರ್ ಹಸೇನಸಾಬ ಎಂ.ಟಿ, ಗಜೇಂದ್ರಗಡ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಕಂದಾಯ ನಿರೀಕ್ಷ ಗೌರಮ್ಮ ಆನಂದಪ್ಪನವರ, ಉಪ ತಹಸೀಲ್ದಾರ್ ವೀರಣ್ಣ ಅಡಗತ್ತಿ, ಸಿಡಿಪಿಒ ಬೆಟದೇಶ ಮಾಳೆಕೊಪ್ಪ, ಬಿಇಒ ಗಾಯಿತ್ರಿ ಸಜ್ಜನ, ಅಕ್ಷರ ದಾಸೋಹ ಅಧಿಕಾರಿ ಬಸವರಾಜ ಅಂಗಡಿ ಸೇರಿದಂತೆ ಇತರರು ಇದ್ದರು.

    ಬೆಳೆ ಹಾನಿ ಪರಿಶೀಲನೆ: ಜಿಲ್ಲಾಧಿಕಾರಿ ವೈಶಾಲಿ ಎಂ. ಅವರು ಅಧಿಕಾರಗಳ ತಂಡದೊಂದಿಗೆ ಗಜೇಂದ್ರಗಡ ತಾಲೂಕಿನ ಕೊಡಗಾನೂರ ಭಾಗದಲ್ಲಿ ಮಳೆಯಿಂದ ಬೆಳೆ ಹಾನಿಯಾದ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ತಹಸೀಲ್ದಾರ್ ಕಚೇರಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಜೊತೆ ರ್ಚಚಿಸಿ ಮಳೆ ಹಾಗೂ ಬೆಳೆಹಾನಿ ಕುರಿತು ಮಾಹಿತಿ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts