More

    ವಾರದಲ್ಲಿ ಆರು ಮಂಗಗಳ ಸಾವು

    ಜೊಯಿಡಾ: ತಾಲೂಕಿನ ನಾಗೊಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗಗಳ ಸಾವು ಮುಂದುವರೆದಿದೆ. ಇವುಗಳ ಸಾವಿಗೆ ಕಾರಣ ತಿಳಿದು ಬರುತ್ತಿಲ್ಲ. ನಾಗೊಡಾ ಗ್ರಾಪಂ ವ್ಯಾಪ್ತಿಯ ಅಂಬರ್ಡಾದಲ್ಲಿ ಸೋಮವಾರ ಬೆಳಗ್ಗೆ ಒಂದು ಮಂಗ ಅಸ್ವಸ್ಥಗೊಂಡ ಸ್ಥಿತಿಯಲ್ಲಿತ್ತು. ಮಧ್ಯಾಹ್ನದ ವೇಳೆಗೆ ಅದು ಮೃತಪಟ್ಟಿರುವ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆ ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ.

    ಜೊಯಿಡಾ ಪಶು ವೈದ್ಯಾಧಿಕಾರಿ ಡಾ. ರವೀಂದ್ರ ಹುಜರತ್ತಿ ಸ್ಥಳಕ್ಕೆ ತೆರಳಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಇದು ಯಾವ ಕಾರಣದಿಂದ ಮೃತಪಟ್ಟಿದೆ ಎಂದು ತಿಳಿಯಲು ಮೃತ ಮಂಗನ ದೇಹದ ಕೆಲ ಅಂಗಾಂಗಗಳನ್ನು ಹೊನ್ನಾವರ ಕೆಎಫ್​ಡಿ ವಿಭಾಗಕ್ಕೆ ಕಳುಹಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅಂಬರ್ಡಾ ದಲ್ಲಿ ಒಂದು ವಾರದಲ್ಲಿ ಒಟ್ಟು 6 ಮಂಗಗಳು ಸಾವನ್ನಪ್ಪಿವೆ. ಪಶು ಇಲಾಖೆ ಸಿಬ್ಬಂದಿ ಒಂದು ಸತ್ತ ಮಂಗನ ಮರಣೋತ್ತರ ಪರಿಕ್ಷೆ ನಡೆಸಿತ್ತು. ಆದರೆ, ಅದು ಸತ್ತು ಒಂದು ದಿನ ಕಳೆದಿದ್ದರಿಂದ ಯಾವ ಕಾರಣದಿಂದ ಮೃತಪಟ್ಟಿತ್ತು ಎಂಬ ಬಗ್ಗೆ ತಿಳಿದು ಬರಲಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಸುಜಾತಾ ಉಕ್ಕಲಿ ಹೇಳಿದ್ದಾರೆ.

    ಈಗ ಮತ್ತೆ 1 ಮಂಗ ಸತ್ತಿರುವುದರಿಂದ ಕೂಡಲೇ ಅದರ ಕಾರಣ ಪತ್ತೆ ಹಚ್ಚಬೇಕಿದೆ. ಅದು ಮಂಗನ ಕಾಯಿಲೆಯಾಗಿದ್ದಲ್ಲಿ (ಕೆಎಫ್​ಡಿ ) ಸಾರ್ವಜನಿಕರಿಗೆ ಅದರಿಂದ ರೋಗ ಭಯ ಇರುವ ಕಾರಣ ತುರ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸುಜಾತಾ ಉಕ್ಕಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts