More

    ವಾದಿರಾಜ ಮಠದಲ್ಲಿ ಬ್ರಹ್ಮ ರಥೋತ್ಸವ

    ಶಿರಸಿ: ಶ್ರೀವಾದಿರಾಜರ ತಪೋಭೂಮಿಯಾದ ತಾಲೂಕಿನ ಸೋದೆ ವಾದಿರಾಜ ಮಠದಲ್ಲಿ ರಮಾತ್ರಿವಿಕ್ರಮ ದೇವರ ಬ್ರಹ್ಮ ರಥೋತ್ಸವ ಸೋಮವಾರ ರಾತ್ರಿ ನೆರವೇರಿತು. ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡರು.

    ರಥೋತ್ಸವದಲ್ಲಿ ನಾಡಿನ ಬೇರೆಬೇರೆ ಊರುಗಳ ಭಕ್ತರು ಪಾಲ್ಗೊಂಡಿದ್ದರು. ಮಠದ ರಥಬೀದಿಯಲ್ಲಿ ಸಾವಿರಾರು ಭಕ್ತರು ರಥ ಎಳೆದು ಧನ್ಯರಾದರು.

    ಈ ವೇಳೆ ಜರುಗಿದ ಧಾರ್ವಿುಕ ಸಭೆಯಲ್ಲಿ ಆಶೀರ್ವಚನ ನೀಡಿದ ಉಡುಪಿ ಫಲಿಮಾರು ಮಠದ ವಿದ್ಯಾಧೀಶತೀರ್ಥ ಶ್ರೀಪಾದರು, ‘ವಾದಿರಾಜರು ಸೋದೆಯಲ್ಲಿ ಪ್ರತಿಷ್ಠಾಪಿಸಿದ ರಮಾತ್ರಿವಿಕ್ರಮ ದೇವರು ನ್ಯಾಯ ಕೊಡುವ ದೇವರು. ತ್ರಿವಿಕ್ರಮ ಇಡೀ ಜಗತ್ತನ್ನು ವ್ಯಾಪಿಸಿದ್ದಾನೆ. ‘ತ್ರಿ’ ಅಂದರೆ ಮೂರು ಎಂದರ್ಥ. ಮನುಷ್ಯ ಜೀವನದ ಮೂರು ಅವಸ್ಥೆಗಳ ಪ್ರತೀಕ ಈ ದೇವರು. ಎಚ್ಚರ, ಸ್ವಪ್ನ, ನಿದ್ರೆ ಈ ಮೂರು ಅವಸ್ಥೆ ಇಲ್ಲದೆ ಮನುಷ್ಯ ಬದುಕಲಾರ. ಐದು ಶತಮಾನಗಳ ಹಿಂದೆ ಪ್ರತಿಷ್ಠಾಪಿಸಿದ ರಮಾತ್ರಿವಿಕ್ರಮ ದೇವರಿರುವ ಸೋದೆ ಪುಣ್ಯನೆಲವಾಗಿದೆ’ ಎಂದು ನುಡಿದರು.

    ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಹಾಗೂ ಪಲಿಮಾರು ಮಠದ ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರ ತೀರ್ಥರು ಸಾನ್ನಿಧ್ಯ ವಹಿಸಿದ್ದರು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts