More

    ವಾತಾವರಣ ಶುದ್ಧಿಗೆ ‘ಅಭಯ’ ಹೋಮ


    ಬೆಳಗಾವಿ: ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾತಾವರಣ ಶುದ್ಧಿಗಾಗಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಅವರು ಹೋಮ, ಹವನದ ಮೊರೆ ಹೋಗಿದ್ದಾರೆ.

    ಕರೊನಾ ನಿಯಂತ್ರಣಕ್ಕೆ ಸರ್ಕಾರ ಲಾಕ್‌ಡೌನ್ ಹೇರಿದ್ದರೆ ಇತ್ತ ತನ್ನ ಮತಕ್ಷೇತ್ರ ವ್ಯಾಪ್ತಿಯ ಪ್ರತಿ ಗಲ್ಲಿ, ಬಡಾವಣೆಯಲ್ಲಿ ವಾತಾವರಣ ಶುದ್ಧಿಗೊಳಿಸಲು ಹೋಮ-ಹವನ ಕೈಗೊಂಡಿದ್ದಾರೆ.

    ಬಡಾವಣೆಗಳ ಮುಂದೆ ಅಗ್ನಿಕುಂಡ ಸ್ಥಾಪಿಸಿ, ಅದರಲ್ಲಿ ಕುಳ್ಳು, ಕರ್ಪೂರ, ತುಪ್ಪ, ಗುಗ್ಗಳ, ಬೇವಿನ ಎಲೆ, ಅಕ್ಕಿ, ಕವಡಿ, ಧೂಪ ಹಾಗೂ ಲವಂಗ ಹಾಕಿ ಒಂದೇ ದಿನ 50 ಕಡೆ ಹೋಮ ಮಾಡಿದ್ದಾರೆ. ಜೂ.15ರ ವರೆಗೆ ಕ್ಷೇತ್ರದ ಎಲ್ಲ ಕಡೆ ರೀತಿ ಹೋಮ ಮಾಡಲಾಗುವುದು. ಇದರಿಂದ ಕಲುಷಿತ ವಾತಾವರಣ ಶುದ್ಧಿ ಆಗಲಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.

    ಹೋಮ ಮಾಡಿದ ಸ್ಥಳದಲ್ಲಿ ಸ್ಯಾನಿಟೈಸರ್!

    ವಾತಾವರಣ ಶುದ್ಧಿಗೆ ಶಾಸಕ ಅಭಯ ಪಾಟೀಲ ಹೋಮ, ಹವನ ನಡೆಸಿದರೆ, ಅದಕ್ಕೆ ಪ್ರತಿಯಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅಭಿಮಾನಿಗಳು ಹೋಮ-ಹವನ ನಡೆದ ಬಡಾವಣೆಗಳಲ್ಲಿ ಸ್ಯಾನಿಟೈಸರ್, ರಾಸಾಯನಿಕ ದ್ರಾವಣ ಸಿಂಪಡಿಸಿದ್ದಾರೆ. ನಗರದ ಹೊಸೂರ, ಬಸವಣ್ಣಗಲ್ಲಿ, ಶಿವಾಜಿ ಗಾರ್ಡನ್ ಸೇರಿ ಕೆಲವು ಕಡೆಗಳಲ್ಲಿ ಸ್ಯಾನಿಟೈಸೇಷನ್ ಮಾಡಿದ್ದಾರೆ.

    ‘ದೇವರ ಹೆಸರಿನಲ್ಲಿ ಹೋಮ-ಹವನ ಮಾಡಿದರೆ ಕರೊನಾ ಓಡಿ ಹೋಗುವುದಿಲ್ಲ. ಜನರಲ್ಲಿ ಮೂಢನಂಬಿಕೆ ಬಿತ್ತುವ ಬದಲು ಜನರಲ್ಲಿ ಕರೊನಾ ಜಾಗೃತಿ ಮೂಡಿಸಬೇಕಿದೆ’ ಎಂದು ಸತೀಶ ಅಭಿಮಾನಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts