More

    ವಾಣಿಜ್ಯ ನಗರಿಯದ್ದೇ ಸಿಂಹಪಾಲು

    ಧಾರವಾಡ: ಜಿಲ್ಲೆಯಲ್ಲಿ ಶುಕ್ರವಾರ 38 ಜನರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಕರೊನಾ ಪೀಡಿತರ ಸಂಖ್ಯೆ 465ಕ್ಕೆ ಏರಿಕೆಯಾಗಿದೆ. ಇದುವರೆಗೆ 216 ಜನ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 241 ಸಕ್ರಿಯ ಪ್ರಕರಣಗಳಿವೆ.

    ಶುಕ್ರವಾರ ಚೀನಿ ವೈರಸ್ ಪ್ರಕರಣದಲ್ಲಿ ಹುಬ್ಬಳ್ಳಿಯದ್ದೇ ಸಿಂಹಪಾಲು ಇದ್ದು, ವಾಣಿಜ್ಯ ನಗರಿ ಅಪಾಯ ಪರಿಸ್ಥಿತಿ ಎದುರಿಸುತ್ತಿರುವುದು ಸಾಬೀತಾಗಿದೆ.

    ಸೋಂಕು ದೃಢಪಟ್ಟವರ ವಿವರ: ಜೂ. 27ರಂದು ಸೋಂಕು ದೃಢಪಟ್ಟ 35 ವರ್ಷದ ವ್ಯಕ್ತಿಯ ಸಂಪರ್ಕ ಹೊಂದಿದ ನವನಗರದ 25 ವರ್ಷದ ಮಹಿಳೆ, ಜೂ. 28ರಂದು ಸೋಂಕು ದೃಢಪಟ್ಟಿದ್ದ ರ್ಕ ಬಸವೇಶ್ವರ ನಗರದ 45 ವರ್ಷದ ಮಹಿಳೆ ಸಂಪರ್ಕ ಹೊಂದಿದ್ದ ಅದೇ ಪ್ರದೇಶದ 58 ವರ್ಷದ ಪುರುಷ, 57 ವರ್ಷದ ಮಹಿಳೆ, ಕಲಘಟಗಿ ತಾಲೂಕು ಹಿರೇಹೊನ್ನಳ್ಳಿ ಗಣೇಶ ನಗರದ 62 ವರ್ಷದ ಪುರುಷ, ಹಾವೇರಿ ಜಿಲ್ಲೆಯ 47 ವರ್ಷದ ಪುರುಷನೊಂದಿಗೆ ಸಂಪರ್ಕ ಹೊಂದಿದ್ದ ಹುಬ್ಬಳ್ಳಿ ಗಣೇಶಪೇಟೆಯ 26 ವರ್ಷದ ಯುವಕನಲ್ಲಿ ಸೋಂಕು ಕಾಣಿಸಿಕೊಂಡಿದೆ.

    ನೆಗಡಿ ಹಾಗೂ ತೀವ್ರ ಜ್ವರ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಹುಬ್ಬಳ್ಳಿ ಮೂರುಸಾವಿರ ಮಠ ಬಳಿಯ ಗುರುಸಿದ್ಧೇಶ್ವರ ನಗರದ 38 ವರ್ಷದ ಪುರುಷ, ಇಸ್ಲಾಂಪುರ ರಸ್ತೆಯ 23 ವರ್ಷದ ಯುವಕ, ಮಂಟೂರ ರಸ್ತೆಯ ಗ್ಯಾಲಕ್ಸಿ ಅಪಾರ್ಟ್​ವೆುಂಟ್​ನ 45 ವರ್ಷದ ಮಹಿಳೆ, ಅಂಚಟಗೇರಿ ಓಣಿಯ 42 ವರ್ಷದ ಪುರುಷ, ಗೋಪನಕೊಪ್ಪ ಸಿದ್ಧೇಶ್ವರ ಕಾಲನಿಯ 8 ತಿಂಗಳ ಮಗುವಿಗೆ ಸೋಂಕು ದೃಢಪಟ್ಟಿದೆ.

    ಹುಬ್ಬಳ್ಳಿ ಭಂಡಿವಾಡದ 45 ವರ್ಷದ ಪುರುಷ, ವಿಜಯನಗರ ವಡ್ಡರ ಓಣಿಯ 83 ವರ್ಷದ ಪುರುಷ, ಮಿಲ್ಲತ್​ನಗರದ 39 ವರ್ಷದ ಪುರುಷ, ಈಶ್ವರ ನಗರ 4ನೇ ಕ್ರಾಸ್​ನ 30 ವರ್ಷದ ಪುರುಷ, ಯಲ್ಲಾಪುರ ಓಣಿ ಎಂ.ಡಿ. ಕಾಲನಿಯ 38 ವರ್ಷದ ಪುರುಷ, ದೊಡ್ಮನಿ ಕಾಲನಿಯ 30 ವರ್ಷದ ಮಹಿಳೆ, ಪಿಂಜಾರ ಓಣಿಯ 43 ವರ್ಷದ ಪುರುಷ, ನೇಕಾರ ಓಣಿಯ 56 ವರ್ಷದ ಪುರುಷ, ಪಿಂಜಾರ ಓಣಿ ಅಕ್ಕಿಹೊಂಡದ 40 ವರ್ಷದ ಪುರುಷ, ದೇವರಗುಡಿಹಾಳದ 49 ವರ್ಷದ ಮಹಿಳೆ, ನಾರಾಯಣಸೋಫಾದ 50 ವರ್ಷದ ಪುರುಷ, ದೇಸಾಯಿ ಓಣಿಯ 42 ವರ್ಷದ ಪುರುಷ, ಕೌಲಪೇಟ್ ಮೋಬಿನ್ ಪ್ಲಾಟ್​ನ 48 ವರ್ಷದ ಪುರುಷ, ಯಲ್ಲಾಪುರ ಓಣಿಯ 22 ವರ್ಷದ ಯುವಕ, ದೇಸಾಯಿ ಓಣಿಯ 18 ವರ್ಷದ ಯುವಕ, ಗಣೇಶಪೇಟ ಬಿಂದರಗಿ ಓಣಿಯ 28 ವರ್ಷದ ಯುವಕ, ಅರಳಿಕಟ್ಟಿ ಓಣಿಯ 35 ವರ್ಷದ ಮಹಿಳೆ, ಕಲ್ಲಾಪುರ ಓಣಿಯ 22 ವರ್ಷದ ಪುರುಷ ಹಾಗೂ ಅದರಗುಂಚಿಯ 1 ವರ್ಷದ ಮಗುವಿಗೆ ಸೋಂಕು ಕಾಣಿಸಿಕೊಂಡಿದ್ದು, ಇವರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

    ದಾವಣಗೆರೆ ಹಾಗೂ ಗುಲ್ಬರ್ಗಾ ಪ್ರವಾಸದ ಹಿನ್ನೆಲೆ ಹೊಂದಿರುವ ಹುಬ್ಬಳ್ಳಿ ವಿದ್ಯಾನಗರದ 25 ವರ್ಷದ ಪುರುಷ, ಜೂ. 29ರಂದು ಸೋಂಕು ಪತ್ತೆಯಾದ ಆದಿಶಕ್ತಿ ಕಾಲನಿಯ 46 ವರ್ಷದ ಪುರುಷನೊಂದಿಗೆ ಸಂಪರ್ಕ ಹೊಂದಿದ್ದ ಹುಬ್ಬಳ್ಳಿಯ 27 ವರ್ಷದ ಪುರುಷ ಹಾಗೂ ಜೂ. 27ರಂದು ಸೋಂಕು ದೃಢಪಟ್ಟಿದ್ದ 73 ವರ್ಷದ ವೃದ್ಧನ ಸಂಪರ್ಕದಿಂದ ಹುಬ್ಬಳ್ಳಿ ತಾಲೂಕು ಛಬ್ಬಿ ಗ್ರಾಮದ 40 ವರ್ಷದ ಪುರುಷನಿಗೆ ಸೋಂಕು ತಗುಲಿದೆ.

    ಧಾರವಾಡ ನವಲೂರ ಭಟ್ಟರ ಓಣಿಯ 2 ವರ್ಷದ ಗಂಡು ಮಗು, ಬಾಗಲಕೋಟೆ ಪ್ರವಾಸದ ಹಿನ್ನೆಲೆ ಹೊಂದಿರುವ ಧಾರವಾಡ ಶಿವಗಿರಿಯ 22 ವರ್ಷದ ಯುವಕ, ನವಲಗುಂದ ತಾಲೂಕು ಮೊರಬ ಗ್ರಾಮದ 50 ವರ್ಷದ ಪುರುಷ, ಶಿರಕೋಳ ಗ್ರಾಮದ 34 ವರ್ಷದ ಪುರುಷ, ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಯಡಹಳ್ಳಿ ಗ್ರಾಮದ 49 ವರ್ಷದ ಪುರುಷ, ಹಾವೇರಿ ಜಿಲ್ಲೆ ಸವಣೂರ ತಾಲೂಕು ಮಾದಾಪುರ ಗ್ರಾಮದ 55 ವರ್ಷದ ಪುರುಷನಲ್ಲಿ ಕರೊನಾ ವೈರಸ್ ಕಂಡುಬಂದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಚಿಕಿತ್ಸೆಗೆ ಬಂದವರಿಗೆ ವೈರಾಣು ದೃಢ: ಹುಬ್ಬಳ್ಳಿ ಕಿಮ್ಸ್​ನ ಕ್ಯಾಥಲಾಬ್​ನಲ್ಲಿ ಚಿಕಿತ್ಸೆ ಪಡೆಯಲು ಆಗಮಿಸಿದ್ದ ಕೆಲ ರೋಗಿಗಳಿಗೆ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ. 202ರಲ್ಲಿ ಈಗಾಗಲೇ ಸೋಂಕಿತರು ಪತ್ತೆಯಾಗಿದ್ದು, 303ರಲ್ಲೂ ಇದೇ ಸ್ಥಿತಿ ಇದೆ. ಹಾಗಾಗಿ ಎರಡೂ ವಾರ್ಡ್​ಗಳಲ್ಲಿ ಸ್ಯಾನಿಟೈಜೇಷನ್ ಮಾಡಲಾಗಿದೆ. ಒಳ ಹಾಗೂ ಹೊರ ರೋಗಿಗಳು ಚಿಕಿತ್ಸೆಗೆ ದಾಖಲಾಗುತ್ತಿದ್ದು, ಇದರಿಂದ ವೈದ್ಯಕೀಯ ಸಿಬ್ಬಂದಿ ಭೀತಿಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಲ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ ಎಂದು ತಿಳಿದುಬಂದಿದೆ.

    ಮದುವೆಗೆ 50ಕ್ಕೂ ಹೆಚ್ಚು ಜನ ಸೇರಬೇಡಿ: ಕರೊನಾ ವೈರಾಣು ಹರಡದಂತೆ ಮುಂಜಾಗ್ರತೆ ವಹಿಸಲು ಕೇಂದ್ರ ಸರ್ಕಾರ ಮಾರ್ಗಸೂಚಿ ನೀಡಿದ್ದು, ಮದುವೆಗಳಿಗೆ 50 ಜನ ಮಾತ್ರ ಸೇರಲು ಅವಕಾಶ ನೀಡಿದೆ. ನಿಯಮ ಮೀರಿದರೆ ವಿರುದ್ಧ ಪ್ರಕರಣ ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು. ತಮ್ಮ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಜರುಗಿದ ಧಾರವಾಡ ಜಿಲ್ಲಾ ಆರೋಗ್ಯ ಪಡೆ ಹಾಗೂ ತಹಸೀಲ್ದಾರರ ಸಭೆಯಲ್ಲಿ ಅವರು ಮಾತನಾಡಿದರು. ಮದುವೆ ಕಾರ್ಯಕ್ರಮಗಳಲ್ಲಿ 50ಕ್ಕಿಂತ ಹೆಚ್ಚು ಜನ ಸೇರುವುದು, ಪರಸ್ಪರ ಅಂತರ ಕಾಪಾಡದಿರುವುದು, ಸ್ಯಾನಿಟೈಸರ್, ಮಾಸ್ಕ್ ಬಳಸದಿರುವುದು ಕಂಡುಬಂದರೆ ಸಂಘಟಕರ ಮೇಲೆ ಪ್ರಕರಣ ದಾಖಲಿಸಲಾಗುವುದು. 50ಕ್ಕಿಂತ ಹೆಚ್ಚು ಜನ ಸೇರಿದರೆ ಸಾರ್ವಜನಿಕರು ಜಿಲ್ಲಾಡಳಿತದ ಸಹಾಯವಾಣಿ 1077 ಸಂಖ್ಯೆ ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts