More

    ವಾಜುಪೇಯಿ ಅಪರೂಪದ ರಾಜಕಾರಣಿ

    ಯಾದಗಿರಿ: ಅಟಲ್ ಬಿಹಾರಿ ವಾಜಪೇಯಿ ಈ ದೇಶ ಕಂಡ ಅಪರೂಪದ ಜನನಾಯಕ, ಮಂತ ರಾಜಕಾರಣಿ. ಅವರ ಬದುಕು ಹಾಗೂ ಜನಪರ ಕಾಳಜಿ ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಬೇಕಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ ಹೇಳಿದರು.


    ಭಾನುವಾರ ಇಲ್ಲಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ವಾಜಪೇಯಿ ಅವರ 89ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದ ಒಳಿತಾಗಾಗಿ ದುಡಿಯಬೇಕೆಂಬ ಕೆಲವೇ ರಾಜಕೀಯ ಧುರೀಣರಲ್ಲಿ ಮಾಜಿ ಪ್ರಧಾನಿ ಅಟಲ್ಜಿ ಪ್ರಮುಖರು. ದೇಶವನ್ನು ಪ್ರಗತಿಯ ಪಥದಲ್ಲಿ ಕೊಂಡೊಯ್ದ ಮಂತ ನಾಯಕ ಅವರಾಗಿದ್ದಾರೆ ಎಂದು ಎಂದು ಬಣ್ಣಿಸಿದರು.

    ಶಾಸಕ ವೆಂಕಟರಡ್ಡಿ ಮುದ್ನಾಳ್ ಮಾತನಾಡಿ, ವಾಜಪೇಯಿ ಅವರು ದೇಶ ಕಂಡ ಅಪೂರ್ವ ಚಿಂತಕ, ಕವಿ ಹಾಗೂ ಹೆಮ್ಮೆಯ ಪ್ರಧಾನಿ. ಅವರ ಆದರ್ಶಗಳು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ದೇಶದ ನಾಲ್ಕೂ ಮೂಲೆಗಳಿಗೂ ಸಂಪರ್ಕ ಕಲ್ಪಿಸುವ 15 ಸಾವಿರ ಕಿ.ಮೀಟರ್ ಉದ್ದದ ಸುವರ್ಣ ಚತುಷ್ಪಥ ಹೆದ್ದಾರಿಯನ್ನು ದಾಖಲೆಯ ಸಮಯದಲ್ಲಿ ಪೂರ್ಣಗೊಳಿಸಿದ ಕೀತರ್ಿ ವಾಜಪೇಯಿ ಅವರಿಗೆ ಸಲ್ಲುತ್ತದೆ ಎಂದರು.

    ವೆಂಕಟರೆಡ್ಡಿ ಅಬ್ಬೆತುಮಕೂರ, ನಾಗರತ್ನ ಕುಪ್ಪಿ, ಬಂಡೆಪ್ಪ ಆಕಳ, ನಗರ ಮಂಡಲ ಅಧ್ಯಕ್ಷ ಮಂಜುನಾಥ್ ಜಡಿ, ಹನುಮಂತ ವಲ್ಲಾಪುರೆ, ಯುವ ಮೋಚರ್ಾ ಜಿಲ್ಲಾಧ್ಯಕ್ಷ ಮೌನೇಶ್ ಬೆಳಗೇರಾ, ಜಿಲ್ಲಾ ಉಪಾಧ್ಯಕ್ಷ ಮಲ್ಲು ಕೋಲಿವಾಡ, ಶ್ರೀಧರ ರಾಯಚೂರು, ಅಜಯ್ ಮಡ್ಡಿ, ಸಿದ್ದಲಿಂಗರೆಡ್ಡಿ ಅಡಕ್ಕಿ, ನಗರಸಭೆ ಸದಸ್ಯ ಸ್ವಾಮಿ ದೇವದಾಸನಕೇರಿ, ಮಹಾದೇವಪ್ಪ ಗಣಪೂರ, ಸುನಿತಾ ಚವಾಣ್, ಚಂದ್ರಕಲಾ ಮಸಿಮಠ, ಭಿಮಾಬಾಯಿ ಶೆಂಡಿಗಿ, ಕಲ್ಪನಾ ಜೈನ್, ಚಂದ್ರು ಕಡೆಚೂರು, ಸಾಯಿಬಣ್ಣ ಮಡಿವಾಳ, ನಾಗಪ್ಪ ಗಚಿನಮನಿ, ಶರಣು, ಬಸವರಾಜ, ವೆಂಕಟೇಶ ಇದ್ದರು.
    | ಡಾ.ಶರಣಭೂಪಾಲರಡ್ಡಿ ಬಿಜೆಪಿ ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts