More

    ವಸ್ತು ಪ್ರದರ್ಶನದ ಲಾಭ ಪಡೆಯಿರಿ

    ಬೆಳಗಾವಿ: ನಗರದ ಖಾನಾಪುರ ರಸ್ತೆಯ ಮಂಗಲ ಮೆಟಲ್ಸ್ ಬಳಿ ಮೈದಾನದಲ್ಲಿ ಗೃಹಶೋಭಾ ವತಿಯಿಂದ ವಿಶೇಷ ವಸ್ತು ಪ್ರದರ್ಶನಕ್ಕೆ ಇತ್ತೀಚೆಗೆ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿ ಎಂ.ಅಷ್ಟಗಿ ಮತ್ತು ಬೆಳಗಾವಿ ವಾಣಿಜ್ಯ ಮತ್ತು ಉದ್ಯಮ ಸಂಘದ ಅಧ್ಯಕ್ಷ ಹೇಮೇಂದ್ರ ಪೋರವಾಲ್ ಉದ್ಘಾಟಿಸಿದರು.

    ಮಾರುತಿ ಅಷ್ಟಗಿ ಮಾತನಾಡಿ, ವಸ್ತು ಪ್ರದರ್ಶನದಿಂದ ಜನರಿಗೆ ಬಹಳ ಅನುಕೂಲವಾಗಿದೆ. ಈ ರೀತಿಯ ಪ್ರದರ್ಶನಗಳು ಮೇಲಿಂದ ಮೇಲೆ ಜರುಗುತ್ತಿರಬೇಕು. ಸಾರ್ವಜನಿಕರು ಪ್ರದರ್ಶನದಲ್ಲಿ ಭಾಗವಹಿಸುವ ಮೂಲಕ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ವಸ್ತು ಪ್ರದರ್ಶನದ ಆಯೋಜಕರಾದ ಸೀಮನ್ ಎಕ್ಸಿಬಿಟರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ನಾಗಚಂದ್ರ ಎಂ.ಎಸ್. ಮಾತನಾಡಿ, ಅ. 19 ರಿಂದ ಅ.30ರ ವರೆಗೆ ನಡೆಯಲಿರುವ ಪ್ರದರ್ಶನದಲ್ಲಿ 70ಕ್ಕೂ ಹೆಚ್ಚು ವಿವಿಧ ರೀತಿಯ ದೊಡ್ಡ ಮಳಿಗೆಗಳು ಭಾಗವಹಿಸಿದ್ದು, ನಾಗರಿಕರು ಶಾಪಿಂಗ್ ಮಾಡಲು ಒಳ್ಳೆಯ ಅವಕಾಶವಿದೆ ಎಂದರು. ಗೃಹಶೋಭೆ ಅಂದರೆ ಮನೆಯನ್ನು ಅಲಂಕರಿಸುವುದು.

    ಪೀಠೋಪಕರಣಗಳು, ಸೋಾ ಸೆಟ್‌ಗಳು, ಕುರ್ಚಿಗಳು, ಕರ್ಟನ್‌ಗಳು, 3ಡಿ ೆಟೋಗಳು, ಆಭರಣಗಳು, ಗ್ಯಾಸ್ ಸ್ಟೌವ್, ರಾಜಸ್ಥಾನಿ ಚುರನ್, ಉಪ್ಪಿನಕಾಯಿ, ಲೇಡೀಸ್ ಡ್ರೆಸ್ ಮೆಟಿರಿಯಲ್, ಕುರ್ತಾ ಪೈಜಾಮಾ, ಮಕ್ಕಳ ಉಡುಪುಗಳು, ಆಟಿಕೆಗಳು, ಸ್ವೆಟರ್‌ಗಳು, ಬ್ಯಾಗ್‌ಗಳು, ಇಲೆಕ್ಟ್ರಿಕಲ್ ಸ್ಕೂಟರ್‌ಗಳು, ಟಿವಿ, ಫ್ರಿಡ್ಜ್, ವಾಷಿಂಗ್ ಮಷಿನ್, ಕೇರಳ ಆಯುರ್ವೇದ ಎಣ್ಣೆ, ಮೈಸೂರು ಉಪ್ಪು, ಪಾದರಕ್ಷೆಗಳು, ಇಲೆಕ್ಟ್ರಿಕ್ ಸ್ಕೂಟರ್‌ಗಳಂತಹ ವಿವಿಧ ವಸ್ತುಗಳಿರುವ ಪ್ರದರ್ಶನವನ್ನು ಬೆಳಗಾವಿ ನಿವಾಸಿಗಳು ಖಂಡಿತವಾಗಿಯೂಇಷ್ಟಪಡುತ್ತಾರೆ ಎಂದು ತಿಳಿಸಿದರು. ವಿನಯ್ ಕದಂ, ವಿಕಾಸ ಕಲಘಟಗಿ, ಅನಂತ್ ಲಾಡ್, ಯಶ್ ಸಂಸ್ಥೆಯ ಪ್ರಕಾಶ್ ಕಲ್ಕುಂದ್ರಿಕರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts