More

    ವಸುದೈವ ಕುಟುಂಬಕಂ ಪುಸ್ತಕ ವಿತರಣೆ

    ಬೀದರ್: ಬಿಜೆಪಿ ನಗರ ಮಂಡಲ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ನಿಮಿತ್ತ ಸೇವಾ ಪಾಕ್ಷಿಕ ಅಡಿಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಚರಿತ್ರೆ ಕುರಿತ ಪ್ರದರ್ಶನ ಹಾಗೂ ವಿಚಾರ ಸಂಕಿರಣದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಅವರು ಸಿದ್ಧಪಡಿಸಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಕುರಿತಾದ ವಸುದೈವ ಕುಟುಂಬಕಂ ಪುಸ್ತಕ ವಿತರಿಸಲಾಯಿತು.

    ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಪುಸ್ತಕ ಒಳಗೊಂಡಿದೆ. ಅರ್ಜಿ ಸಲ್ಲಿಸುವ ವಿಧಾನ, ದಾಖಲಾತಿ ಅಪ್ ಲೋಡ್ ಮಾಡುವುದರ ಮಾಹಿತಿಯೂ ಇದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಸಂಬಂಧಿಸಿದ ಇಲಾಖೆಯ ವೆಬ್ ಸೈಟ್ ನೋಡಬಹುದು. ಯೋಜನೆಗಳ ಮಾಹಿತಿ ಪಡೆಯಬಹುದು.

    ನಗರದ ಸಿದ್ಧಾರೂಢ ಗುಂಪಾ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಹಿರಿಯ ಸಮಾಜ ಸೇವಕ ಶಿವಾನಂದ ದಾಡಿಗೆ ಅವರು ಯುವಕರನ್ನು ಉದ್ದೇಶಿಸಿ ಮಾತಾಡಿದರು. ಭಾರತದ ಇತಿಹಾಸ ಹಾಗೂ ಪ್ರಧಾನಿಯವರ ಜನಪರ ಕಾಳಜಿಯುಳ್ಳ ತೀರ್ಮಾನಗಳ ಕುರಿತು ಮಾಹಿತಿ ನೀಡಿದರು.

    ಬಿಜೆಪಿ ಬೀದರ್ ನಗರ ಮಂಡಲ ಅಧ್ಯಕ್ಷ ಶಶಿಧರ ಹೊಸಳ್ಳಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರಿಹಂತ ಸಾವಳೆ, ಕಾರ್ಯದರ್ಶಿ ಕಿರಣ ಪಾಟೀಲ್, ನಗರಸಭೆ ಸದಸ್ಯ ರಾಜಾರಾಮ ಚಿಟ್ಟಾ, ಗುಣವಂತ ಭಾವಿಕಟ್ಟೆ, ಉದಯ ಹಲವಾಯಿ, ಸುಭಾಷ ಮಡಿವಾಳ, ಗಣೇಶ ಭೋಸಲೆ, ಶಶಿಕಾಂತ ಮೋದಿ, ವೀರೇಶ ಸ್ವಾಮಿ, ನರೇಶ ಗೌಳಿ, ರೋಶನ್ ವರ್ಮಾ, ನವೀನ ಚಿಟ್ಟಾ, ಮಹಾನಂದಾ ಪಾಟೀಲ್, ಸುನೀಲ ಗೌಳಿ, ನಿತೀನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts