More

    ವಸತಿ ಶಾಲೆ ಅವ್ಯವಸ್ಥೆಗೆ ಗರಂ

    ಕೊಲ್ಹಾರ: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಗುರುವಾರ ಬೆಳಗ್ಗೆ ಪಟ್ಟಣದ ಹೊರವಲಯದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ದಿಢೀರನೇ ಭೇಟಿ ನೀಡಿ ಪರಿಶೀಲಿಸಿದರು.

    ಮಕ್ಕಳಿಗೆ ಸ್ನಾನ ಮಾಡಲು ತನ್ನೀರೇ ಗತಿ, ಕಿಡಕು ಬಾಗಿಲುಗಳಿಗೆ ಬೋಲ್ಟ್‌ಗಳಿಲ್ಲದ ಸಮಸ್ಯೆಯಿಂದ ಮಕ್ಕಳಿಗೆ ನಿತ್ಯ ಜಾಗರಣೆ ಎನ್ನುವ ಮಾತು ಕೇಳಿ ಆಶ್ಚರ್ಯಚಕಿತರಾದರು. ಶಾಲೆಗೆ ಸಂಬಂಧಪಟ್ಟ ಸರ್ಕಾರಿ ದಾಖಲೆಗಳು ವಾರ್ಡ್‌ನ ಮನೆಯಲ್ಲಿವೆ ಎಂಬ ವಿಷಯ ಸೇರಿದಂತೆ ಹೀನಾಯ ಸ್ಥಿತಿಯಲ್ಲಿರುವ ಮಕ್ಕಳ ಪರಿಸ್ಥಿತಿ ಕಂಡು ಮಮ್ಮಲ ಮರುಗಿದರು.

    ಶೌಚಗೃಹ ಹಾಗೂ ಕೊಠಡಿಗಳ ಕಿಟಕಿ ಗ್ಲಾಸ್‌ಗಳು ಒಡೆದಿರುವುದರಿಂದ ಮಳೆ ಬಂದರೆ ನೀರೆಲ್ಲ ಕೋಣೆ ಒಳಗೆ ನುಗ್ಗುತ್ತದೆ. ಸೊಳ್ಳೆಗಳ ಕಾಟ, ಕೆಟ್ಟಿರುವ ಫ್ಯಾನ್‌ಗಳಿಂದಾಗಿ ಕೋಣೆಯಲ್ಲಿ ಮಲಗಲು ಆಗುವುದಿಲ್ಲ. ಸಕಾಲಕ್ಕೆ ಸ್ಕೂಲ್ ಬ್ಯಾಗ್, ಕಿಟ್, ಸ್ವೆಟರ್, ನೈಟ್ ಡ್ರೆಸ್, ಕೊಟ್ಟಿಲ್ಲ ಎಂದು ಮಕ್ಕಳು ಗೋಳು ಹೇಳಿಕೊಂಡರು.

    ಕಳಪೆ ಮಟ್ಟದ ಆಹಾರ ಧಾನ್ಯಗಳು, ಕೊಳೆತ ತರಕಾರಿ ಬೇಸರ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ವಾರ್ಡನ್‌ಗೆ ಆಹಾರ ದಾಸ್ತಾನು ವಹಿ ಕೇಳಿದಾಗ ನಮ್ಮ ಮನೆಯಲ್ಲಿದೆ ಎಂದು ಹೇಳಿ ಜಾರಿಕೊಂಡರು. ಅಡುಗೆ ಸಿಬ್ಬಂದಿಗೆ ಶುಚಿತ್ವ ಕಾಪಾಡಿಕೊಂಡು ಹೋಗಲು ತಿಳಿಸಿದರು.

    ಶಾಲಾ ಆಡಳಿತ ಕಚೇರಿಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದಾಗ ಕಳೆದ ವರ್ಷದ ಮಕ್ಕಳ ದಾಖಲಾತಿ ಬರೆಯದೆ ಇರುವುದು ಕಂಡು ಬಂದಿತು. ಆಯವ್ಯಯದ ಬಗ್ಗೆ ಪ್ರಾಂಶುಪಾಲರಿಗೆ ಸದಸ್ಯರು ಮಾಹಿತಿ ಕೇಳಿದಾಗ ಅವರ ಹತ್ತಿರ ಉತ್ತರವೇ ಇರಲಿಲ್ಲ. 248 ಮಕ್ಕಳ ದಾಖಲಾತಿ ಇದ್ದು, 191 ಮಕ್ಕಳಿದ್ದಾರೆ ? ಎಂಬ ಪ್ರಶ್ನೆಗೆ ಉತ್ತರ ಕೊಡದ ಪ್ರಾಂಶುಪಾಲರ ನಡವಳಿಕೆಗೆ ಬೇಸರ ವ್ಯಕ್ತಪಡಿಸಿದರು.
    ಆಟದ ಮೈದಾನ ನಿರ್ವಹಣೆ ಮಾಡದಿರುವುದು ಹಾಗೂ ದೈಹಿಕ ಶಿಕ್ಷಕರು ಮಕ್ಕಳಿಗೆ ಯಾವುದೇ ಆಟ ಆಡಿಸದೇ ಇರುವ ಕುರಿತು ಗಮನಕ್ಕೆ ಬಂದಾಗ ತರಾಟೆಗೆ ತೆಗೆದುಕೊಂಡರು. ಮಕ್ಕಳಿಗೆ ಸಮಸ್ಯೆಗಳ ಕುರಿತು ಬರೆದು ಹಾಕಲು ದೂರು ಪೆಟ್ಟಿಗೆ ಹಾಕಬೇಕು ಎಂದು ಸೂಚಿಸಿದರು.
    ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಾವಿತ್ರಿ ಗುಗ್ಗರಿ, ವಾಣಿಶ್ರೀ ನಿಂಬಾಳ, ಮೌನೇಶ ಪೋದ್ದಾರ, ಸತೀಶ ಜಳಕಿ, ಗುರುರಾಜ ಇಟಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts