More

    ವಲಸೆ ಕಾರ್ಮಿಕರಿಗೆ ಖಾತ್ರಿಯಡಿ ಕೆಲಸ

    ಸೇಡಂ: ದೇಶದ ನಾನಾ ಕಡೆ ದುಡಿಯಲು ಹೋಗಿದ್ದ ಕಾರ್ಮಿಕರು ತವರಿಗೆ ವಾಪಸಾಗಿದ್ದು, ಅವರಿಗೆ ಉದ್ಯೋಗ ಖಾತ್ರಿಯಡಿ ಕೆಲಸ ನೀಡಲಾಗುತ್ತಿದೆ ಎಂದು ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಹೇಳಿದರು.
    ಮುದೋಳದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುತ್ತಿರುವ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಖಾತ್ರಿಯಡಿ ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾವಿರ ಕುಟುಂಬಕ್ಕೆ ಕೆಲಸ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
    ಪ್ರತಿ ಪಿಡಿಒ ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಲಕ್ಷ ಮಾನವ ದಿನಗಳನ್ನು ಸೃಷ್ಟಿಸಬೇಕು ಎಂದು ಈಗಾಗಲೇ ಸೂಚನೆ ನೀಡಲಾಗಿದೆ. ಪ್ರತಿಯೊಬ್ಬರಿಗೂ ಜಾಬ್ ಕಾರ್ಡ್​ ವಿತರಿಸಿ, ಕೆಲಸ ಕೊಡಬೇಕು. ಕೆಲಸವಿಲ್ಲದೆ ಖಾಲಿ ಕೂರುವುದು ಬೇಡ. ಕೂಲಿ ಕಾರ್ಮಿಕರಿಗೆ ಕುಡಿಯಲು ನೀರಿನ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
    ಇದೇ ಸಂದರ್ಭದಲ್ಲಿ ರೆಬ್ಬನಪಲ್ಲಿಯಲ್ಲಿನ ಚೆಕ್ಪೋಸ್ಟ್ಗೆ ಭೇಟಿ ನೀಡಿ ಭದ್ರತೆಯನ್ನು ಪರಿಶೀಲಿಸಿದರು. ಅಲ್ಲದೆ ಪ್ರತಿ ವಾಹನವನ್ನು ತಪಾಸಣೆ ಮಾಡಿ ಬಿಡಬೇಕು ಎಂದು ಸೂಚನೆ ಕೊಟ್ಟರು. ಅಲ್ಲದೆ ಸಿಲಾರಕೋಟ ಪರಿತರ ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.ತಾಪಂ ಸದಸ್ಯ ವೆಂಕಟರಾವ ಮಿಸ್ಕಿನ್, ಪ್ರಮುಖರಾದ ನಾಗೇಂದ್ರಪ್ಪ ಸಿಲಾರಕೋಟ, ಡಾ.ಮದುಸೂಧನರೆಡ್ಡಿ ಸಿಲಾರಕೋಟ, ಶ್ರೀಕಾಂತರೆಡ್ಡಿ ಪಾಟೀಲ್, ಲಕ್ಷ್ಮಿಕಾಂತ ಹೊನ್ನಕೇರಿ, ಹರ್ಷವರ್ಧನರೆಡ್ಡಿ ರೆಬ್ಬನಪಲ್ಲಿ, ಓಂಪ್ರಕಾಶ ಪಾಟೀಲ್, ವಿಜಯಕುಮಾರ ಖೇವಜಿ, ನಾಗರೆಡ್ಡಿ ಪಾಟೀಲ್, ಸಂದಪ್ಪ ಮೇದಕ, ಶಿವಶಂಕರಯ್ಯಸ್ವಾಮಿ, ಶ್ರೀನಿವಾಸರೆಡ್ಡಿ ಪಾಟೀಲ್, ನಾಗರಾಜ ಹಾಬಾಳ, ಅನೀಲ ರನ್ನೇಟ್ಲಾ, ಸಾಗರ ಕಲಕಂಭ ಇದ್ದರು.

    ಕರೊನಾ ಸೇನಾನಿಗಳಿಗಾಗಿ ಪ್ರಾರ್ಥಿಸಿ
    ಕರೋನಾ ನಿಯಂತ್ರಣಕ್ಕಾಗಿ ವೈದ್ಯರು, ನಸರ್್ಗಳು, ಪೊಲೀಸ್ ಸಿಬ್ಬಂದಿ, ಪೌರಕಾರ್ಮಿಕರು ಸೇರಿ ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಸಾಕಷ್ಟು ಸೇನಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ತಮ್ಮ ಜೀವದ ಹಂಗು ತೊರೆದು ನಿಮಗಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನಾವೆಲ್ಲರೂ ನಿತ್ಯ ಬೆಳಗ್ಗೆ ಭಗವಂತನಲ್ಲಿ ಕರೊನಾ ಸೇನಾನಿಗಳು ಆರೋಗ್ಯವಾಗಿರಲಿ ಎಂದು ಪ್ರಾಥರ್ಿಸೋಣ ಎಂದು ಶಾಸಕ ರಾಜಕುಮಾರ ಪಾಟೀಲ್ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts