More

    ವರುಣನ ಕೃಪೆಯಿಂದ ಕೆರೆಯಲ್ಲಿ ಜೀವಜಲ, ಬಿದಲಪುರದಲ್ಲಿ ಕೆರೆ ಬಾಗಿನ ಅರ್ಪಣೆ 

    ಚನ್ನರಾಯಪಟ್ಟಣ: ಇತ್ತೀಚೆಗೆ ಮಳೆ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಕೆರೆಗಳಲ್ಲಿ ನೀರಿ ಸಂಗ್ರಹ ಹೆಚ್ಚುತ್ತಿದ್ದು, ಇದರಿಂದ ಅಂತರ್ಜಲಮಟ್ಟ ವೃದ್ಧಿಸಲಿದೆ ಎಂದು ಮಾಜಿ ಸಂಸದ ವೀರಪ್ಪ ಮೊಯ್ಲಿ ಹೇಳಿದರು.

    ಹೋಬಳಿಯ ಬಿದಲಪುರದಲ್ಲಿ ಕೆರೆ ಕೋಡಿ ಹರಿದ ಹಿನ್ನೆಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಈ ಭಾಗಕ್ಕೆ ಎಚ್‌ಎನ್ ವ್ಯಾಲಿ ಯೋಜನೆ ಮೂಲಕ ನೀರು ಹರಿಸಲು ಚಾಲನೆ ನೀಡಲಾಗಿತ್ತು. ಸದ್ಯ ಗ್ರಾಮೀಣ ಭಾಗದಲ್ಲಿ ಕೆರೆಗಳು ತುಂಬಿದ್ದು, ಈ ಬಾರಿ ಬೆಟ್ಟಕೋಟೆ ಕೆರೆ ತುಂಬಿ ಬಿದಲಪುರ ಕೆರೆ ಕೋಡಿ ಹರಿದಿರುವುರಿಂದ ಈ ಭಾಗದ ರೈತರಿಗೆ ಸಂತಸ ತಂದಿದೆ ಎಂದರು.

    ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ದೇವನಹಳ್ಳಿ ತಾಲೂಕಿನಲ್ಲಿ ಕೆರೆಗಳು ತುಂಬುತ್ತಿರುವುದರಿಂದ ಅಂತರ್ಜಲಮಟ್ಟ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗಿ ಇನ್ನೂ ಹೆಚ್ಚಿನ ಕೆರೆಗಳು ತುಂಬಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಜಿಪಂ ಮಾಜಿ ಸದಸ್ಯ ಲಕ್ಷ್ಮೀನಾರಾಯಣ್ ಮಾತನಾಡಿ, ಬಿದಲಪುರ ಕೆರೆ ಹೂಳೆತ್ತಿದ್ದರಿಂದ ಕೆರೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಸುಮಾರು 2 ವರ್ಷಕ್ಕಾಗುವಷ್ಟು ನೀರು ಶೇಖರಣೆಯಾಗಿದೆ ಎಂದರು.

    ಗ್ರಾಪಂ ಮಾಜಿ ಅಧ್ಯಕ್ಷೆ ಮಹಾಲಕ್ಷ್ಮೀ ಲಲಿತೇಶ್, ಜಿಪಂ ಮಾಜಿ ಸದಸ್ಯ ಅನಂತಕುಮಾರಿ ಚಿನ್ನಪ್ಪ, ಹಿಂದುಳಿದ ವರ್ಗದ ಕಾಂಗ್ರೆಸ್ ಮುಖಂಡ ಜಗನ್ನಾಥ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ. ಶ್ರೀನಿವಾಸ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜ್, ಹೋಬಳಿ ಜೆಡಿಎಸ್ ಅಧ್ಯಕ್ಷ ಮುನಿರಾಜ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಂಪಂಗಿಯಪ್ಪ, ಕೆಪಿಸಿಸಿ ಸದಸ್ಯ ಚೇತನ್‌ಗೌಡ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts