More

    ವನ್ಯಜೀವಿ ಸಪ್ತಾಹ ಅಂಗವಾಗಿ ಮ್ಯಾರಥಾನ್

    ಕೊಳ್ಳೇಗಾಲ: ಪಟ್ಟಣದ ಮರಡಿಗುಡ್ಡದ ವೃಕ್ಷವನದ ಗೇಟ್ ಮುಂಭಾಗದಲ್ಲಿ ಮಲೆ ಮಹದೇಶ್ವರ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ವತಿಯಿಂದ 68ನೇ ವನ್ಯಜೀವಿ ಸಪ್ತಾಹ ಅಂಗವಾಗಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಮ್ಯಾರಥಾನ್ ನಡೆಸಲಾಯಿತು.

    ಮ್ಯಾರಥಾನ್ ಕಾರ್ಯಕ್ರಮಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಆನಂದ್ ಚಾಲನೆ ನೀಡಿದರು. ಬಳಿಕ ಮರಡಿಗುಡ್ಡದ ವೃಕ್ಷವನದ ಗೇಟ್‌ನಿಂದ ಹೊರಟ ಮ್ಯಾರಥಾನ್ ಸ್ಪರ್ಧಾಳುಗಳು ಮಧುವನಹಳ್ಳಿ, ಹೊಂಡರಬಾಳು, ಲಕ್ಕರಸನಪಾಳ್ಯದ ಮೂಲಕ ಪಟ್ಟಣದ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಸಂರಕ್ಷಣಾಧಿಕಾರಿ ಕಚೇರಿ ಆವರಣಕ್ಕೆ ತಲುಪಿದರು.

    ಅಪರ ಸಿವಿಲ್ ನ್ಯಾಯಾಧೀಶ ರಘು ಮಾತನಾಡಿ, ಪ್ರಕೃತಿ ಹಾಗೂ ಮಾನವ ಕುಲಕ್ಕೂ ನೇರ ಸಂಬಂಧವಿರುವುದರಿಂದ ಪ್ರಕೃತಿ ಸಂರಕ್ಷಿಸುವ ಜವಾಬ್ದಾರಿ ನಮ ್ಮಮೇಲಿದೆ. ಮುಂದಿನ ಪೀಳಿಗೆಯ ಅರಣ್ಯ ಹಾಗೂ ವನ್ಯಜೀವಿ ಸಂಪತ್ತನ್ನು ಉಳಿಸುವ ಕರ್ತವ್ಯ ಮುಂದಿದ್ದು, ಈ ನಿಟ್ಟಿನಲ್ಲಿ ಇಡೀ ಮಾನವ ಸಂಕುಲ ಕೆಲಸ ಮಾಡಬೇಕಿದೆ. ಅರಣ್ಯ ರಕ್ಷಣೆ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕಾಗಿದೆ ಎಂದರು.

    ಈ ವೇಳೆ ವಿಜೇತ ಮೂವರು ಸ್ಪರ್ಧಾಳುಗಳಾದ ರಾಜು, ಶಿವಕುಮಾರ್, ಆಕಾಶ್ ಎಂಬುವರಿಗೆ ಬಹುಮಾನ ವಿತರಿಸಿದರು. ಇನ್ನುಳಿದ ಮ್ಯಾರಥಾನ್ ಸ್ಪರ್ಧಾಳುಗಳಿಗೆ ಪ್ರಮಾಣಪತ್ರ ನೀಡಲಾಯಿತು.

    ಮ್ಯಾರಥಾನ್‌ನಲ್ಲಿ ಅಪರ ಸಿವಿಲ್ ನ್ಯಾಯಾಧೀಶರಾದ ಸಿ.ಜೆ. ರಘು, ಕಾವೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಲ್. ನಂದೀಶ್, ಮಲೆ ಮಹದೇಶ್ವರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್, ತಹಸೀಲ್ದಾರ್ ಮಂಜುಳಾ, ಡಿವೈಎಸ್ಪಿ ನಾಗರಾಜ, ವೃತ್ತನಿರೀಕ್ಷಕ ಶಿವರಾಜ್ ಆರ್.ಮುಧೋಳ್, ವಕೀಲರ ಸಂಘದ ಅಧ್ಯಕ್ಷ ಬಸವರಾಜು, ಪಟ್ಟಣ ಠಾಣೆ ಪಿಎಸ್‌ಐ ಚೇತನ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts