More

    ವನ್ನಳ್ಳಿ ತೀರದ ಮೂಲಸೌಕರ್ಯಗಳಿಗೆ ಹಾನಿ

    ಕುಮಟಾ: ವನ್ನಳ್ಳಿ ಸಮುದ್ರ ತೀರದಲ್ಲಿ ಕಲ್ಪಿಸಲಾಗಿರುವ ಮೂಲಸೌಕರ್ಯಗಳು ಕಿಡಿಗೇಡಿಗಳ ಕುಕೃತ್ಯದಿಂದ ಹಾಳಾಗುತ್ತಿವೆ.

    ಪ್ರವಾಸೋದ್ಯಮ ಇಲಾಖೆ ಹಾಗೂ ಪುರಸಭೆಯಿಂದ ಹೈಮಾಸ್ಟ್ ದೀಪ, ಆಸನ ವ್ಯವಸ್ಥೆ, ಪಾದಚಾರಿ ಮಾರ್ಗ, ಮಕ್ಕಳ ಆಟಿಕೆಗಳು, ಶೌಚಗೃಹ, ಬೀದಿ ದೀಪ, ರಸ್ತೆ ಮೊದಲಾದ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ.

    ಕರೊನಾ ಲಾಕ್​ಡೌನ್ ಬಳಿಕ ಇಲ್ಲಿ ಜನ ಬರುವುದು ಕಡಿಮೆಯಾಗಿದೆ. ಆದರೆ, ಇದೇ ವೇಳೆಯಲ್ಲಿ ಕುಡುಕರು, ಕಿಡಿಗೇಡಿಗಳ ಅಟ್ಟಹಾಸ ಹೆಚ್ಚಾಗಿದ್ದು, ಇದರಿಂದ ಇಲ್ಲಿನ ಹಲವು ಸೌಕರ್ಯಗಳು ಹಾಳಾಗಿವೆ. ಹೈಮಾಸ್ಟ್ ದೀಪ ಹಾಗೂ ಬೀದಿ ದೀಪಗಳನ್ನು ಒಡೆಯಲಾಗಿದೆ. ಕಂಬಕ್ಕೆ ಏಣಿ ಇರುವುದರಿಂದ ಕೆಲವನ್ನು ಕಿತ್ತು ಒಯ್ದಿರುವ ಶಂಕೆಯೂ ಇದೆ. ಆಟಿಕೆಗಳು ತುಕ್ಕು ಹಿಡಿದಿವೆ. ಗಿಡಗಂಟಿಗಳು, ಮುಳ್ಳುಹಿಂಡುಗಳು ಬೇಕಾಬಿಟ್ಟಿ ಬೆಳೆದು ಪಾದಚಾರಿ ಮಾರ್ಗವನ್ನು ಆಕ್ರಮಿಸುತ್ತಿವೆ. ಸಮುದ್ರದಿಂದ ಸಾಕಷ್ಟು ದೂರದಲ್ಲಿರುವ ಶೌಚಗೃಹವೂ ದುರ್ವಾಸನೆಯ ಗೂಡಾಗಿದೆ.

    ಈಗ ಲಾಕ್​ಡೌನ್ ಸಡಿಲಿಕೆಯ ಬಳಿಕ ವನ್ನಳ್ಳಿ ಸಮುದ್ರ ತೀರದ ಶಾಂತ ಪರಿಸರದಲ್ಲಿ ದಿನದ ಕೆಲ ಸಮಯವನ್ನು ಕಳೆಯಲು ಜನ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಎಲ್ಲೆಂದರಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್​ಗಳು ಸಮುದ್ರ ತಡದ ಸೌಂದರ್ಯಕ್ಕೆ ಭಂಗ ತರುತ್ತಿವೆ. ಕಸದ ತೊಟ್ಟಿಗಳು ಅನಾಥವಾಗಿವೆ. ಇಲ್ಲಿ ಸಂಜೆಯಾಗುತ್ತಿದ್ದಂತೆ ಮೋಜಿನ ಪಾರ್ಟಿಗಳು ಹೆಚ್ಚುತ್ತಿರುವ ಲಕ್ಷಣ ಸ್ಪಷ್ಟವಾಗಿ ಗೋಚರಿಸುತ್ತಿದೆ.

    ಪುರಸಭೆಯು ಕೂಡಲೇ ಬೀದಿ ದೀಪಗಳನ್ನು ಸರಿಪಡಿಸಿ ವ್ಯವಸ್ಥೆಗಳ ಸಮರ್ಪಕ ನಿರ್ವಹಣೆ ಮಾಡಬೇಕು. ಇಲ್ಲಿ ಬರುವ ಜನರಿಗೆ ಅನುಕೂಲಕರ ಪರಿಸರ ನಿರ್ವಿುಸಬೇಕು ಎಂದು ಸ್ಥಳೀಯ ಪುರಸಭೆ ಸದಸ್ಯ ಮಹೇಶ ನಾಯ್ಕ ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts