More

    ವಿದ್ಯಾರ್ಥಿಗಳು ಸಾಧಕರ ಜೀವನ ಚರಿತ್ರೆ ಅಧ್ಯಯನ ಮಾಡಲಿ

    ಹುಣಸೂರು: ಸಾಧಕರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡುವ ಮೂಲಕ ವಿದ್ಯಾರ್ಥಿಗಳು ಸಾಧನೆಯ ಮಾರ್ಗವನ್ನು ಕಾಣಬಹುದಾಗಿದೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಅಭಿಪ್ರಾಯಪಟ್ಟರು.

    ನಗರದ ಸರ್ಕಾರಿ ಮಹಿಳಾ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ತಾಲೂಕಿನ ಮೋದೂರು ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ವಿಶೇಷ ವಾರ್ಷಿಕ ಶಿಬಿರ ಉದ್ಘಾಟಿಸಿ ಮಾತನಾಡಿದರು.

    ದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆಯನ್ನು ರೂಪಿಸುವುದೇ ಎನ್‌ಎಸ್‌ಎಸ್‌ನ ಮೂಲ ಉದ್ದೇಶವಾಗಿದೆ. ವಾರಗಳ ಕಾಲ ಮನೆಯನ್ನು ತೊರೆದು ಶಿಬಿರಾರ್ಥಿಗಳು ಹೊಸ ವಾತಾವರಣದಲ್ಲಿ ಎಲ್ಲರೊಂದಿಗೆ ಕಲೆತು ಬೆರೆತು ವಿವಿಧ ಅನುಭವಗಳನ್ನು ಪಡೆಯುತ್ತಾರೆ. ಶಿಕ್ಷಣದಲ್ಲಿ ಇಂತಹ ಪಠ್ಯೇತರ ಚಟುವಟಿಕೆಗಳ ಅವಶ್ಯಕತೆ ಹೆಚ್ಚಿರುತ್ತದೆ. ವಿದ್ಯಾರ್ಥಿಗಳು ಸಾಧಕರ ಜೀವನ ಚರಿತ್ರೆಯನ್ನು ಅಭ್ಯಸಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು. ಈ ನೆಲದಲ್ಲೇ ಹುಟ್ಟಿದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಉತ್ತಮ ಆಡಳಿತ ಮತ್ತು ಕ್ರಾಂತಿಕಾರಿ ಆಡಳಿತಗಾರರಾಗಿ ದೇಶದಲ್ಲೇ ಮನೆಮಾತಾದರು. ಅಂತಹ ಮಹನೀಯರ ಜೀವನಚರಿತ್ರೆ ನಿಮ್ಮ ಬಾಳಿಗೂ ಸ್ಫೂರ್ತಿಯಾಗಬಲ್ಲದು. ಶಿಬಿರದ ಉತ್ತಮ ಅನುಭವಗಳನ್ನು ದಾಖಲಿಸಿಕೊಳ್ಳಿ. ಬದುಕಿನ ಪಾಠ ಇಲ್ಲಿಂದಲೇ ಆರಂಭವಾಗಲಿ ಎಂದು ಹಾರೈಸಿದರು.

    ಭೂಮಿ ಉಳುಮೆ ಮಾಡುವ ನೇಗಿಲಿಗೆ ಪೂಜೆ ಸಲ್ಲಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಲಾಯಿತು. ಸಿಡಿಸಿ ಉಪಾಧ್ಯಕ್ಷ ಮೋದೂರು ಮಹೇಶ್ ಆರಾಧ್ಯ ಮಾತನಾಡಿದರು. ಎನ್‌ಎಸ್‌ಎಸ್ ಸಂಚಾಲಕ ಡಾ.ಕೆ.ಪಿ.ಪ್ರಸನ್ನ, ಮುಖಂಡ ಹರವೆ ಶ್ರೀಧರ್, ಗ್ರಾ.ಪಂ. ಅಧ್ಯಕ್ಷ ರಾಮಚಂದ್ರ, ಬಸವಣ್ಣ, ಸಣ್ಣನಿಂಗೇಗೌಡ, ಕಾಳೇಗೌಡ, ರೋಟರಿ ಅಧ್ಯಕ್ಷ ಚನ್ನಕೇಶವ, ದೇವರಾಜ ಒಡೆಯರ್, ಗ್ರಾಮಸ್ಥರು ಮತ್ತು ಶಿಬಿರಾರ್ಥಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts