More

    ವಚನ ಸಾಹಿತ್ಯದ ರಕ್ಷಕ ಮಾಚಿದೇವರು

    ರಟ್ಟಿಹಳ್ಳಿ: 12ನೇ ಶತಮಾನಾದ ಅನೇಕ ಶಿವ, ಶರಣರು ಮಹಿಮರಲ್ಲಿ ಮಾಚಿದೇವರು ಒಬ್ಬರು. ವಚನ ಸಾಹಿತ್ಯದ ಮೂಲಕ ಸಾಮಾಜಿಕ ಸಮಾನತೆ, ಜಾತೀಯತೆ ವಿರುದ್ಧ ಸಮಾಜಕ್ಕೆ ಸಂದೇಶ ನೀಡಿ, ಅದನ್ನು ರಕ್ಷಿಸಲು ಹೋರಾಡಿದ ಮಹಿಮರು ಮಾಚಿದೇವರು ಎಂದು ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಹೇಳಿದರು.

    ಅವರು ಪಟ್ಟಣದಲ್ಲಿ ಮಡಿವಾಳ ಸಮಾಜದ ವತಿಯಿಂದ ಶನಿವಾರ ಜರುಗಿದ ಶ್ರೀ ಮಡಿವಾಳ ಮಾಚಿದೇವರ ಜಯಂತ್ಯುತ್ಸವದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

    ಸ್ಥಳೀಯ ಮಹಾಲಕ್ಷ್ಮೀ ದೇವಸ್ಥಾನದ ಬಳಿ ಮಾಚಿದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಜಿ.ಪಂ. ಸದಸ್ಯ ಪ್ರಕಾಶ ಬನ್ನಿಕೋಡ, ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಸುರೇಶ ಮಡಿವಾಳರ, ತಾಲೂಕು ಅಧ್ಯಕ್ಷ ಕಣ್ಣಪ್ಪ ಮಡಿವಾಳರ, ಜಿ.ಪಂ. ಮಾಜಿ ಸದಸ್ಯ ಪಿ.ಡಿ. ಬಸಗೌಡ್ರ, ಎಪಿಎಂಸಿ ಅಧ್ಯಕ್ಷ ವಸಂತ್ ದ್ಯಾವಕ್ಕಳವರ, ಧಾರವಾಡ ಹಾಲು ಒಕ್ಕೂಟ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ರಾಮಣ್ಣ ನಾಯಕ, ವೀರನಗೌಡ ಪ್ಯಾಟಿಗೌಡ್ರ, ವೀರಣ್ಣ ಕಟ್ಟೀಮನಿ, ಗ್ರಾ.ಪಂ. ಉಪಾಧ್ಯಕ್ಷ ಗೋಪಾಲ ಮಡಿವಾಳರ, ವಿಜಯ ಮಡಿವಾಳರ, ಎಂ.ಎನ್. ಮಡಿವಾಳರ, ಸಿದ್ದಪ್ಪ ಮಡಿವಾಳರ, ವಿನಯ ಪಾಟೀಲ, ಗ್ರಾ.ಪಂ. ಸದಸ್ಯರಾದ ದೇವರಾಜ ನಾಗಣ್ಣವರ, ಶಂಕ್ರಗೌಡ ಚೆನ್ನಗೌಡ್ರ, ಬಸವರಾಜ ಆಡಿನವರ ಇತರರು ಇದ್ದರು.

    ಗ್ರಾಮ ಪಂಚಾಯಿತಿ: ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ಮಡಿವಾಳ ಮಾಚಿದೇವರ ಮತ್ತು ಶ್ರೀ ಸವಿತಾ ಮಹರ್ಷಿ ಜಯಂತ್ಯುತ್ಸವ ಆಚರಿಸಲಾಯಿತು. ಗ್ರಾ.ಪಂ. ಉಪಾಧ್ಯಕ್ಷ ಗೋಪಾಲ ಮಡಿವಾಳರ ಶ್ರೀ ಮಡಿವಾಳ ಮಾಚಿದೇವರ ಮತ್ತು ಶ್ರೀ ಸವಿತಾ ಮಹರ್ಷಿಯವರ ಜೀವನ ಚರಿತ್ರೆಯ ಕುರಿತು ಮಾಹಿತಿ ನೀಡಿದರು.

    ಗ್ರಾ.ಪಂ. ಅಧ್ಯಕ್ಷೆ ರೇಣುಕಮ್ಮ ಕಮತಳ್ಳಿ, ಸದಸ್ಯರಾದ ಶಶಿಕಲಾ ಬೆಣ್ಣಿ, ಕಮಲಮ್ಮ ಬೆನ್ನೂರ, ನಜಬುನ್ನೀಸಾ ಪಟ್ನಿ, ಜರೀನಾಬಿ ಮಾಳಗಿ, ಪಿಡಿಒ ಪ್ರಕಾಶ ಸುಂಕಾಪುರ, ಸಿಬ್ಬಂದಿ ರಾಜಕುಮಾರ ಹೇಂದ್ರೆ, ಪರಮೇಶಪ್ಪ ಅಂತರವಳ್ಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts