More

    ವಚನ ಆಧರಿಸಿ ನೈತಿಕ ಶಿಕ್ಷಣ ಚಿಂತನೆ

    ಔರಾದ್: ಭಗವದ್ಗೀತೆ ಪಠಣದಂತೆ ಮಹಾತ್ಮ ಬಸವಣ್ಣ ಸೇರಿ ಇತರ ಶರಣರ ವಚನಗಳನ್ನು ಆಧರಿಸಿಯೂ ಮಕ್ಕಳಿಗೆ ನೈತಿಕ ಶಿಕ್ಷಣ ಕೊಡುವ ಅಗತ್ಯವಿದೆ. ಈ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

    ಜಿಪಂ, ತಾಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಕಾರಿ ಕಚೇರಿ ವತಿಯಿಂದ ಪಟ್ಟಣದ ಅಮರೇಶ್ವರ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಶಿಕ್ಷಕರ ಸನ್ಮಾನ ಸಮಾರಂಭಕ್ಕೆ  ಚಾಲನೆ ನೀಡಿ ಮಾತನಾಡಿ, ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಸಲಹೆ ಮೇಲೆ ವಚನ ಸಾರವನ್ನು ಶಿಕ್ಷಣದಲ್ಲಿ ತರುವ ಚಿಂತನೆ ಮಾಡಲಾಗುವುದು ಎಂದು ತಿಳಿಸಿದರು.

    ಶಿಕ್ಷಣ ಇಲಾಖೆಯಲ್ಲಿ ಹಲವಾರು ಸಮಸ್ಯೆಗಳಿದ್ದು, ಎಲ್ಲದಕ್ಕೂ ಒಂದೇ ಸಲಕ್ಕೆ ಪರಿಹಾರ ಸಿಗುವುದಿಲ್ಲ. ಹಿಂದಿನ ಶಿಕ್ಷಕರಿಗೆ ಮತ್ತು ಇಂದಿನ ಶಿಕ್ಷಕರಿಗೆ ಹೋಲಿಸಿದರೆ ಪ್ರಸ್ತುತ ನಾನಾ ಸೌಲಭ್ಯಗಳನ್ನು ಶಿಕ್ಷಕರು ಪಡೆಯುತ್ತಿದ್ದಾರೆ. ಹೀಗಾಗಿ ಮಕ್ಕಳಿಗೆ ಉತ್ತಮ ರೀತಿಯಲ್ಲಿ   ಭೋದನೆ ಮಾಡುವ ಮೂಲಕ ಭವಿಷ್ಯದ ಭಾರತ ನಿರ್ಮಿಸಬೇಕು ಎಂದು ಸಲಹೆ ನೀಡಿದರು.

    ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿದರು. ಶ್ರೀ ಶಿವಲಿಂಗ ಶಿವಾಚಾರ್ಯ ಹೆಡಗಾಪುರ, ಶ್ರೀ ಡಾ.ಶಂಭುಲಿಂಗ ಶಿವಾಚಾರ್ಯ ಡೋಣಗಾಂವ (ಎಂ), ಶ್ರೀ ಶಂಕರಲಿಂಗ ಶಿವಾಚಾರ್ಯ ಹಣೆಗಾಂವ, ಶ್ರೀ ಮುರುಳಿ ಮಹಾರಾಜರು ರಕ್ಷಾಳ (ಕೆ), ಪೂಜ್ಯ ಮಹಾದೇವಮ್ಮ ತಾಯಿ ಸಂಗಮ, ಭಂತೆ ಬೋರತ್ನ ಹಿಪ್ಪಳಗಾಂವ ನೇತೃತ್ವ ವಹಿಸಿದ್ದರು.ವಿಧಾನ ಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಅರವಿಂದಕುಮಾರ ಅರಳಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ಕೇರಬಾ ಪವಾರ್, ಉಪಾಧ್ಯಕ್ಷ ಸಂತೋಷ ಪೋಕಲವಾರ್, ಎಪಿಎಂಸಿ ಅಧ್ಯಕ್ಷ ರಂಗರಾವ ಜಾಧವ್, ಪ್ರಮುಖರಾದ ವಸಂತ ವಕೀಲ, ರಘುನಾಥ ಬಿರಾದಾರ, ನರಸಗೊಂಡ ಬೀರಗೊಂಡ, ಪ್ರತೀಕ್ ಚವ್ಹಾಣ್, ಡಿಡಿಪಿಯು ಚಂದ್ರಕಾಂತ ಶಾಬಾದಕರ್, ಡಿಡಿಪಿಐ ಗಣಪತಿ ಬಾರಾಟಕ್ಕೆ, ಅಕಾರಿಗಳಾದ ಅರುಣಕುಮಾರ ಕುಲಕರ್ಣಿ, ರಮೇಶಕುಮಾರ ಪೆದ್ದೆ, ಬೀರೇಂದ್ರಸಿಂಗ್ ಠಾಕೂರ್, ಮಹ್ಮದ್ ಮಕ್ಸೂದ್, ಅಬ್ದುಲ್ ಫಜಲ್, ಶಿವಕುಮಾರ ಘಾಟೆ, ಮಲ್ಲಿಕಾರ್ಜುನ ಇಕ್ಕಳಕಿ, ಲಿಂಗಾನಂದ ಮಹಾಜನ್, ವಿಶ್ವನಾಥ ಬಿರಾದಾರ್, ಸೂರ್ಯಕಾಂತ ಬಿರಾದಾರ್, ಗಜಾನನ ಮಳ್ಳಾ, ಬಸವರಾಜ ಪಾಟೀಲ್ ಇತರರಿದ್ದರು. ಬಲಭೀಮ ಕಾಂಬ್ಳೆ ಸ್ವಾಗತಿಸಿದರು.

    ಕಾರ್ಯಕ್ರಮದಲ್ಲಿ ಪದವಿಪೂರ್ವ, ಪದವಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ 2900 ಶಿಕ್ಷಕರು ಹಾಗೂ ಉಪನ್ಯಾಸಕ ದಂಪತಿಗೆ  ಸನ್ಮಾನಿಸಲಾಯಿತು. ಸಚಿವ ಚವ್ಹಾಣ್ ಸ್ವತಃ ಎಲ್ಲರಿಗೂ ಗೌರವಿಸಿದರು. ಔರಾದ್ ಹಾಗೂ ಕಲಮನಗರ ತಾಲೂಕಿನ 26 ವಲಯಗಳ ಶಿಕ್ಷಕರು ಮತ್ತು ಉಪನ್ಯಾಸಕ ದಂಪತಿಗೆ ವೇದಿಕೆಗೆ ಆಹ್ವಾನಿಸಿ ಶಾಲು ಹೊದಿಸಿ, ಹೂಗುಚ್ಛ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಅಂಗವಿಕಲ ಶಿಕ್ಷಕರು, ಸೇವಾ ನಿವೃತ್ತ ಶಿಕ್ಷಕ ದಂಪತಿ, ಸೇವೆಯಲ್ಲಿದ್ದಾಗ ಮರಣ ಹೊಂದಿದ ಶಿಕ್ಷಕರ ಕುಟುಂಬಸ್ಥರಿಗೆ ಗೌರವಿಸಲಾಯಿತು.

    ಔರಾದ್ ಶಿಕ್ಷಣ ಸಾಕಷ್ಟು ಪ್ರಗತಿಎಲ್ಲ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಶಿಕ್ಷಣ ಪಾತ್ರ ಬಹುಮುಖ್ಯವಾಗಿದೆ. ಔರಾದ್ ತಾಲೂಕು ಶಿಕ್ಷಣ ಕ್ಷೇತ್ರದಲ್ಲಿ ಕ್ರಮೇಣ ಸಾಕಷ್ಟು ಪ್ರಗತಿ ಸಾಸಿದೆ ಎಂದು ಕ್ಷೇತ್ರದ ಶಾಸಕರೂ ಆದ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಹೇಳಿದರು. ಮೊದಲ ಬಾರಿ ಶಾಸಕನಾದಾಗ(2008ರಲ್ಲಿ) ಎಸ್ಸೆಸ್ಸೆಲ್ಸಿ ಫಲಿತಾಂಶ ಕೇವಲ ಶೇ.30 ರಷ್ಟು ಮಾತ್ರ ಇತ್ತು. ಎಲ್ಲ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರನ್ನು ಪ್ರೋತ್ಸಾಹಿಸುವುದು ಮತ್ತು ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವ ಕೆಲಸ ಮಾಡುತ್ತಾ ಬಂದಿದ್ದೇನೆ. ಶಿಕ್ಷಕರು ಸಹ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇದರ ಪರಿಣಾಮ ಪ್ರಸ್ತುತ ಸಾಲಿನಲ್ಲಿ ಶೇ.85 ರಷ್ಟು ಫಲಿತಾಂಶ ದಾಖಲಾಗಿದೆ ಎಂದು ಹೇಳಿದರು.ಎಲ್ಲ ರಂಗಗಳ ಅಭಿವೃದ್ಧಿಗೆ ಶಿಕ್ಷಣ ಬುನಾದಿ. ಹೀಗಾಗಿ ಕ್ಷೇತ್ರದ ಎಲ್ಲ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಅಗತ್ಯ ಪಠ್ಯ ಮತ್ತು ಪೀಠೋಪಕರಣಗಳನ್ನು ಒದಗಿಸುವುದು, ಗ್ರಂಥಾಲಯ, ಕಾಂಪೌಂಡ್ ನಿರ್ಮಾಣ ಹೀಗೆ ಗುಣಮಟ್ಟದ ಶಿಕ್ಷಣ ನೀಡಲು ಬೇಕಿರುವ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.

    ಸಾರೋಟಿನಲ್ಲಿ ಭವ್ಯ ಮೆರವಣಿಗೆ

    ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಔರಾದ್ ಗೆ ಆಗಮಿಸಿದ ಸಚಿವ ಬಿ.ಸಿ.ನಾಗೇಶ್ ಅವರಿಗೆ ಅದ್ದೂರಿ ಸ್ವಾಗತಿಸಲಾಯಿತು. ಇಲ್ಲಿನ ಐತಿಹಾಸಿಕ ಶ್ರೀ ಅಮರೇಶ್ವರ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ಬಳಿಕ ಅಲಂಕೃತ ಸಾರೋಟಿನಲ್ಲಿ ಭವ್ಯ ಮೆರವಣಿಗೆ ನಡೆಯಿತು. ಡೊಳ್ಳು ಕುಣಿತ, ತಮಟೆ ವಾದನ, ಬಂಜಾರಾ ನೃತ್ಯ, ಕೋಲಾಟ ಸೇರಿ ವಿವಿಧ ಕಲಾ ತಂಡಗಳೊಂದಿಗೆ ಪಟ್ಟಣದ ಎಪಿಎಂಸಿ ಆವರಣದಿಂದ ಅಮರೇಶ್ವರ ಕಾಲೇಜಿನವರೆಗೆ ಮೆರವಣಿಗೆ ನಡೆಯಿತು. ಸಚಿವರಾದ ನಾಗೇಶ್, ಪ್ರಭು ಚವ್ಹಾಣ್, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಅವರು ಸಾರೋಟಿನಲ್ಲಿದ್ದರು.

    ರಂಗೋಲಿಯಲ್ಲಿ ಮಸ್ತ್ ಅರಳಿದ ಸರಸ್ವತಿ, ಸರ್ವಪಲ್ಲಿ, ಪುಲೆ ಚಿತ್ರ

    ಕಾರ್ಯಕ್ರಮಕ್ಕೆ ಆಗಮಿಸಿದಂಥ ಶಿಕ್ಷಕರಿಗೆಲ್ಲ ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಲಡ್ಡು, ಚಪಾತಿ, ಮುದ್ದಿ ಪಲ್ಲೆ, ಮಿಕ್ಸ್ ಸಬ್ಜಿ, ಅನ್ನ, ಸಾಂಬಾರ ವ್ಯವಸ್ಥೆ ಮಾಡಲಾಗಿತ್ತು. ವ್ಯವಸ್ಥಿತ ಊಟ ಮಾಡಲು ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ಕೌಂಟರ್ ಗಳನ್ನು ತೆರೆಯಲಾಗಿತ್ತು. ಕಾರ್ಯಕ್ರಮದ ಆವರಣದಲ್ಲಿ ಅಲ್ಲೂರ(ಕೆ) ಗ್ರಾಮದ ಚಿತ್ರ ಕಲಾವಿದೆ ಸಂಗೀತಾ ಅವರು ರಂಗೋಲಿಯಲ್ಲಿ ಬಿಡಿಸಿದ ಸರಸ್ವತಿ, ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಸಾವಿತ್ರಿಬಾಯಿ ಫುಲೆ ಅವರ ಆಕರ್ಷಕ ಚಿತ್ರ ಸಭಿಕರ ಗಮನ ಸೆಳೆದವು.ಇಲ್ಲಿ ಅಳವಡಿಸಿದ್ದ ಶಿಕ್ಷಕರನ್ನು ಅಭಿನಂದಿಸಿರುವ ಸೆಲ್ಫಿ ಪಾಯಿಂಟ್ ನಲ್ಲಿ ಶಿಕ್ಷಕರು ಮುಗಿಬಿದ್ದು ಸೆಲಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

    ಶಿಕ್ಷಕರ ನೇಮಕಾತಿ ಅಂತಿಮ ಪಟ್ಟಿ ಶೀಘ್ರ

    ಔರಾದ್: ರಾಜ್ಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಅಂತಿಮ ಪಟ್ಟಿಯನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು. ಒಂದೂವರೆ ತಿಂಗಳಲ್ಲಿ ಪರಿಶೀಲನೆ ಪ್ರಕ್ರಿಯೆ ಮುಗಿಸಿ ನೇಮಕಾತಿ ಆದೇಶ ಹೊರಡಿಸಲಾಗುವುದು. 2014ರ ಮುನ್ನ ಶಾಲಾ ಕೋಣೆಗಳ ನಿರ್ಮಾಣಕ್ಕೆ ಪ್ರಾಮುಖ್ಯ ನೀಡದ ಕಾರಣ ಈಗ ಕೊರತೆ ಎದುರಾಗಿದೆ. ರಾಜ್ಯದಲ್ಲಿ ಹೊಸದಾಗಿ 8100 ಕೋಣೆ ನಿರ್ಮಿಸಲಾಗುತ್ತಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಕಾಂಗ್ರೆಸ್ ಆಡಳಿತದಲ್ಲಿ ಮಾಡಿದ್ದೇನೆ ಎಂದು ಹೇಳಿಕೊಳ್ಳಲು ಮತ್ತು ಅಭಿವೃದ್ಧಿ ಬಗ್ಗೆ ಮಾತಾಡಲು ವಿಷಯಗಳಿಲ್ಲ. ಹೀಗಾಗಿ ಕಾಂಗ್ರೆಸಿಗರು ಇಲ್ಲಸಲ್ಲದ ಮಾತನಾಡುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಮತ್ತು ಪರ ಯಾರಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಸ್ಥಾನ ಸಿಗದಿದ್ದಾಗ ಸ್ಥಾನದ ಮರ್ಯಾದೆ ಹಾಳು ಮಾಡಲು ಕಾಂಗ್ರೆಸ್ ಹೊರಟಿದೆ ಎಂದು ಹರಿಹಾಯ್ದರು.

    ಕರೊನಾದಿಂದ ಎರಡು ವರ್ಷ ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮ ಆಯೋಜನೆ ಮಾಡಿರಲಿಲ್ಲ. ಮಹಾಮಾರಿ ಕಮ್ಮಿಯಾಗಿದೆ. ಹೀಗಾಗಿ ಅದ್ದೂರಿ ಕಾರ್ಯಕ್ರಮ ಆಯೋಜಿಸಿ ಔರಾದ್, ಕಮಲನಗರ ತಾಲೂಕಿನ ಎಲ್ಲ ಶಿಕ್ಷಕರು, ಉಪನ್ಯಾಸಕರನ್ನು ಗೌರವಿಸಲಾಗಿದೆ. ಕಳೆದೊಂದು ದಶಕದಿಂದ ಈ ಪರಂಪರೆ ಅರ್ಥಪೂರ್ಣವಾಗಿ ಮುಂದುವರಿಸಿಕೊಂಡು ಬರಲಾಗುತ್ತಿದೆ.

    |ಪ್ರಭು ಚವ್ಹಾಣ್ಪಶು ಸಂಗೋಪನೆ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts