More

    ವಕೀಲರ ಸಂಘದ ಸಮಸ್ಯೆಗೆ ಶೀಘ್ರ ಸ್ಪಂದನೆ

    ಹಾವೇರಿ: ಜಿಲ್ಲೆಯ ವಕೀಲರ ಸಂಘದ ಬಹುದಿನದ ಬೇಡಿಕೆಯಾಗಿದ್ದ ಕಟ್ಟಡ ನಿರ್ವಣದ ಕನಸು ಕೈಗೂಡುತ್ತಿದ್ದು, ಈ ಕಟ್ಟಡ ವೃತ್ತಿಗೆ ಸ್ಪೂರ್ತಿ ನೀಡುವ ಜೊತೆಗೆ ಜನರಿಗೆ ಅನುಕೂಲ ಕಲ್ಪಿಸಲಿ ಎಂದು ಹೈಕೋರ್ಟ್ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಆರ್. ದೇವದಾಸ ಹೇಳಿದರು.

    ನಗರದ ಜಿಲ್ಲಾ ಸತ್ರ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ನ್ಯಾಯಾಲಯ, ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾ ವಕೀಲರ ಸಂಘದ ಕಟ್ಟಡ ನಿರ್ವಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಕಟ್ಟಡ ನಿರ್ವಣಗೊಂಡ ನಂತರ ವಕೀಲರಿಗೆ ಕೆಲಸಕ್ಕೆ ಬೇಕಾದಂತಹ ಎಲ್ಲ ವ್ಯವಸ್ಥೆಯನ್ನು ಸರ್ಕಾರ ಒದಗಿಸುವ ಭರವಸೆಯಿದೆ. ಒಂದು ವರ್ಷದಲ್ಲಿ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳಲಿದೆ. ಹೈಕೋರ್ಟ್ ಕಡೆಯಿಂದ ಜಿಲ್ಲೆಯ ನ್ಯಾಯಾಲಯಕ್ಕೆ ಆಗಬೇಕಾದ ಕೆಲಸಗಳನ್ನು ತಡ ಮಾಡದೇ ಎಲ್ಲ ಸೌಲಭ್ಯಗಳನ್ನು ಒದಗಿಸಲು ಬದ್ಧನಾಗಿದ್ದೇನೆ. ಜಿಲ್ಲೆಯ ನ್ಯಾಯಾಲಯ ಹಾಗೂ ವಕೀಲರ ಸಂಘದ ಕುಂದು ಕೊರತೆಗಳನ್ನು ನಮ್ಮ ಗಮನಕ್ಕೆ ತಂದರೆ ಸರಿಪಡಿಸುತ್ತೇನೆ ಎಂದರು.

    ವಕೀಲರ ಸಂಘದ ಜಿಲ್ಲಾಧ್ಯಕ್ಷ ಕೆ.ಸಿ. ಪಾವಲಿ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ವಕೀಲರ ಸಂಘಕ್ಕೆ ಕಟ್ಟಡವಿಲ್ಲ ಎಂಬ ಕೊರಗಿತ್ತು. ಅದು ಈಗ ಸಾಕಾರಗೊಳ್ಳುತ್ತಿದೆ. ಮುಂಬರುವ ದಿನಗಳಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘವನ್ನು ಮುನ್ನಡೆಸಲಾಗುವುದು. ಈ ಕಟ್ಟಡದಲ್ಲಿ ಎರಡು ಲಿಫ್ಟ್, ಹವಾನಿಯಂತ್ರಿತ ಕೊಠಡಿಗಳು, ವಾಹನಗಳಿಗೆ ರ್ಪಾಂಗ್ ವ್ಯವಸ್ಥೆ ಹಾಗೂ ಅಂಗಡಿಗಳನ್ನು ತೆರೆಯಲು ಕಾಂಪ್ಲೆಕ್ಸ್ ನಿರ್ವಿುಸಲಾಗುವುದು ಎಂದರು.

    ಸಂಘದ ಕಾರ್ಯದರ್ಶಿ ಪಿ.ಎಂ. ಬೆನ್ನೂರು, ಲೋಕೋಪಯೋಗಿ ಇಲಾಖೆ ಇಇ ವಿ.ಇ. ಭಾವನಮೂರ್ತಿ, ನ್ಯಾಯಾಧೀಶರು, ವಕೀಲರ ಸಂಘದ ಸದಸ್ಯರು, ನ್ಯಾಯಾಲಯದ ಸಿಬ್ಬಂದಿ ಇದ್ದರು. ವಿಜಯಕುಮಾರ ಸೊಪ್ಪಿನ ನಿರೂಪಿಸಿದರು. ಕೆ.ವಿ. ನಡುವಿನಮಠ ಸ್ವಾಗತಿಸಿದರು.

    ವಕೀಲರ ಸಂಘದಲ್ಲಿನ ಭಿನ್ನಾಭಿಪ್ರಾಯ ಮರೆತು ಪರಸ್ಪರ ಸಹಕಾರ ನೀಡುವ ಮೂಲಕ ಕಟ್ಟಡ ನಿರ್ವಣಕ್ಕೆ ಶ್ರಮಿಸಬೇಕು. ನ್ಯಾಯಾಲಯಕ್ಕೆ ಬರುವ ಪ್ರಕರಣಗಳನ್ನು ಬಹಳಷ್ಟು ದಿನ ಮುಂದೂಡದೇ ಸಾಧ್ಯವಾದಷ್ಟು ಬೇಗನೆ ಪರಿಹರಿಸಲು ಶ್ರಮಿಸಬೇಕು.
    | ಎಸ್.ಎಚ್. ರೇಣುಕಾದೇವಿ, ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts