More

    ವಂಚನೆಗೆ ಒಳಗಾದರೆ ತಕ್ಷಣ ದೂರು ನೀಡಿ

    ಬೆಳಗಾವಿ: ನಗರ ಪೊಲೀಸ್ ಆಯುಕ್ತರ ಕಚೇರಿ ವ್ಯಾಪ್ತಿಯಲ್ಲಿ ಆನ್‌ಲೈನ್ ವಂಚನೆ ಪ್ರಕರಣ ಹೆಚ್ಚಾಗಿದ್ದು, ಸಾರ್ವಜನಿಕರು ಜಾಗ್ರತೆ ವಹಿಸಬೇಕು. ವೆಬ್‌ಸೈಟ್ ಲಿಂಕ್‌ಬಳಸುವಾಗ ಎಚ್ಚರ ವಹಿಸಬೇಕು. ಒಟಿಪಿ ಹಾಗೂ ಕೆವೈಸಿ ಹಂಚಿಕೊಳ್ಳಬಾರದು ಎಂದು ಡಿಸಿಪಿ ವಿಕ್ರಂ ಆಮ್ಟೆ ಹೇಳಿದ್ದಾರೆ. ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಂಚನೆಗೊಳಗಾದ ಸಾರ್ವಜನಿಕರು ತಮ್ಮ ಖಾತೆಯಲ್ಲಿನ ಹಣ ವರ್ಗಾವಣೆಗೊಂಡ ಒಂದು ಗಂಟೆಯೊಳಗೆ ದೂರು ನೀಡಿದಲ್ಲಿ ಕಾರ್ಯಾಚರಣೆಗೆ ಸಹಕಾರಿಯಾಗಲಿದೆ ಎಂದರು. 2020ರ ಮಾರ್ಚ್ ನಿಂದ ಈವರೆಗೆ ಆನ್‌ಲೈನ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ
    29.13 ಲಕ್ಷ ರೂ. ವಶಪಡಿಸಿಕೊಂಡು, ಮಾಲೀಕರಿಗೆ ಹಿಂದಿರುಗಿಸಲಾಗಿದೆ ಎಂದು ತಿಳಿಸಿದರು.

    ಕೂಡಲೇ ಸಂಪರ್ಕಿಸಿ: ನಗರ ವ್ಯಾಪ್ತಿಯಲ್ಲಿ ವಂಚನೆಗೊಳಗಾದವರು, ಬೆಳಗಾವಿ ಸಿಇಎನ್ ಪೊಲೀಸ್ ಠಾಣೆ ಮೊ; 9480804084, ಕಂಟ್ರೋಲ್ರೂಂ : 112 ಹಾಗೂ ದೂರವಾಣಿ ಸಂಖ್ಯೆ 0831-2405233 ಸಂಪರ್ಕಿಸಿ, ಮಾಹಿತಿ ನೀಡಬೇಕು ಎಂದು ವಿಕ್ರಂ ಅಮ್ಟೆ ಸಲಹೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts