More

    ಲೋಕ ಅದಾಲತ್‌ನಲ್ಲಿ 236 ಪ್ರಕರಣಗಳು ಇತ್ಯರ್ಥ


    ನಾಗಮಂಗಲ: ಲೋಕ ಅದಾಲತ್‌ನಲ್ಲಿ 236 ಪ್ರಕರಣಗಳು ಇತ್ಯರ್ಥಪಟ್ಟಣದ ಹಿರಿಯ ಮತ್ತು ಕಿರಿಯ ವಿಭಾಗದ ಸಿವಿಲ್ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕಾ ಅದಾಲತ್‌ನಲ್ಲಿ 236 ಪ್ರಕರಣಗಳು ನ್ಯಾಯಾಧೀಶರ ಎದುರು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡವು.
    ಪಟ್ಟಣದ ಎರಡು ವಿಭಾಗದ ನ್ಯಾಯಾಲಯಗಳಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ನೂರಾರು ಪ್ರಕರಣಗಳನ್ನು ಇತ್ಯರ್ಥಪಡಿಸುವ ಜತೆಗೆ ನ್ಯಾಯಾಧೀಶರು ಕಾನೂನಿನ ಅರಿವು ಮೂಡಿಸುವ ಮೂಲಕ ನೂರಾರು ಪ್ರಕರಣಗಳನ್ನು ರಾಜಿ ಸಂಧಾನ ಮಾಡುವ ಮೂಲಕ ಇತ್ಯರ್ಥಪಡಿಸಿದರು.
    ಲೋಕ ಅದಾಲತ್‌ನಲ್ಲಿ ವಿಚಾರಣೆ ಬಾಕಿಯಿದ್ದ ಒಟ್ಟು 236 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 159 ಪ್ರಕರಣಗಳು ಹಾಗೂ ಕಿರಿಯ ಸಿವಿಲ್ ನ್ಯಾಯಾಲಯದಲ್ಲಿ 77 ಪ್ರಕರಣಗಳು ಇತ್ಯರ್ಥಗೊಂಡಿವೆ. ಒಟ್ಟು ಪ್ರಕರಣಗಳ ಪೈಕಿ ಒಟ್ಟು 2,77,50,100 ರೂಪಾಯಿ ಪರಿಹಾರ ಸಂಗ್ರಹವಾಗಿದೆ. ಈ ಪೈಕಿ 2,42,100 ರೂ. ಗಳು ಟ್ರಾಫಿಕ್ ಸಂಬಂಧಿತ ಪ್ರಕರಣಗಳಿಗೆ ಸಂಬಂಧಿಸಿದ ಹಣವಾಗಿದ್ದು, ಅದನ್ನು ಸರ್ಕಾರಕ್ಕೆ ಸಂದಾಯ ಮಾಡಲಾಗುವುದು. ರಾಜಿ ಸಂಧಾನದಿಂದ ಸಂಬಂಧಗಳು ಗಟ್ಟಿಯಾಗುತ್ತವೆ. ಹತ್ತಾರು ವರ್ಷಗಳಿಂದ ಸಣ್ಣ ಪುಟ್ಟ ವಿಚಾರಗಳಿಗಾಗಿ ನ್ಯಾಯಾಲಯಕ್ಕೆ ಅಲೆಯುತ್ತಿದ್ದು ರಾಷ್ಟ್ರೀಯ ಲೋಕ ಅದಾಲತ್ ಮೂಲಕ ರಾಜಿ ಸಂಧಾನವಾಗುವ ಮೂಲಕ ಹತ್ತಾರು ಪ್ರಕರಣಗಳು ಇತ್ಯರ್ಥಗೊಳ್ಳುವ ಜತೆಗೆ ಸಂಬಂಧಗಳು ಗಟ್ಟಿಯಾಗಲಿವೆ. ಇಷ್ಟು ಮಾತ್ರವಲ್ಲದೆ ಮಾನಸಿಕವಾಗಿ ಶಾಂತಿ ಸಿಗಲಿದೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಯೋಗೇಶ್ ತಿಳಿಸಿದರು.

    ವಿಶೇಷ ಪ್ರಕರಣಗಳು: 18 ವರ್ಷದಿಂದ ಆಸ್ತಿ ವಿಭಾಗಕ್ಕೆ ದಾವೆ ಹೂಡಿದ್ದ ತಾಲೂಕಿನ ಬೀರೇಶ್ವರಪುರ ಗ್ರಾಮದ ಪುಟ್ಟತಾಯಮ್ಮ ಮತ್ತು ಇನ್ನಿತರರು ನಿವಾರ ನಡೆದ ಅದಾಲತ್‌ನಲ್ಲಿ ರಾಜಿ ಸಂಧಾನ ಮೂಲಕ ಇತ್ಯರ್ಥಪಡಿಸಿಕೊಂಡರು. ಮತ್ತೊಂದು ಪ್ರಕರಣದಲ್ಲಿ ವಿದ್ಯುತ್ ಅವಘಡದಲ್ಲಿ ಕಾರ್ಮಿಕ ಮೃತಪಟ್ಟಿದ್ದು ಕುಟುಂಬಸ್ಥರಿಗೆ ಎಲೆಕ್ಟ್ರಿಕ್ ಏಜೆನ್ಸಿಯ ಮಾಲೀಕನಿಂದ 16 ಲಕ್ಷ ರೂ.ಗಳನ್ನು ಪರಿಹಾರವಾಗಿ ಕೊಡಿಸುವ ಮೂಲಕ ಇತ್ಯರ್ಥ ಮಾಡಲಾಯಿತು. ಮತ್ತೊಂದು ಪ್ರಕರಣದಲ್ಲಿ ಆಸ್ತಿ ವಿಭಾಗಕ್ಕಾಗಿ ದಾವೆ ಹೂಡಿದ್ದು ಆಸ್ತಿ ಬದಲಿಗೆ 30 ಲಕ್ಷ ರೂ.ಗಳನ್ನು ದಾವೆ ಹೂಡಿದವರಿಗೆ ಕೊಡಿಸುವ ಮೂಲಕ ಪ್ರಕರಣವನ್ನು ಇತ್ಯರ್ಥಗೊಳಿಸಲಾಯಿತು. ಅದಾಲತ್‌ನಲ್ಲಿ ಚೆಕ್ ಬೌನ್ಸ್, ಅಪಘಾತ, ಆಸ್ತಿ ಸಂಬಂಧಿತ ಹಾಗೂ ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ಮುಂತಾದವು ಇತ್ಯರ್ಥಗೊಂಡವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts