More

    ಲೋಕೋತ್ಸವಕ್ಕೆ 4 ಲಕ್ಷ ರೊಟ್ಟಿ

    ಸಂಕೇಶ್ವರ: ನೆರೆಯ ಮಹಾರಾಷ್ಟ್ರದ ಕನ್ಹೇರಿ ಮಠದಲ್ಲಿ ೆ.20 ರಿಂದ 6 ದಿನ ಹಮ್ಮಿಕೊಂಡಿರುವ ಪಂಚ ಮಹಾಭೂತ ಲೋಕೋತ್ಸವ ಕಾರ್ಯಕ್ರಮದಲ್ಲಿ ಪ್ರತಿದಿನ 5 ಲಕ್ಷ ಜನ ಸೇರಲಿದ್ದು, ಕಾರ್ಯಕ್ರಮಕ್ಕೆ ಹುಕ್ಕೇರಿ ತಾಲೂಕಿನಿಂದ 4 ಲಕ್ಷ ರೊಟ್ಟಿ ಕಳುಹಿಸಲು ತಾಲೂಕಿನ ಭಕ್ತ ಮಂಡಳಿ ನಿರ್ಧರಿಸಿದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ತಿಳಿಸಿದರು.

    ಇಲ್ಲಿನ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಶ್ರೀಮಠಕ್ಕೆ 21ರ ಒಳಗೆ ರೊಟ್ಟಿ ತಲುಪಿಸಬೇಕು ಎಂದರು.

    ಕಾರ್ಯಕ್ರಮದಲ್ಲಿ ದೇಶದ ವಿವಿಧೆಡೆಯಿಂದ ಸಾವಿರಕ್ಕೂ ಹೆಚ್ಚು ಸಾಧು-ಸಂತರು ಸೇರಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಗಹ ಸಚಿವ ಅಮಿತ ಷಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ವಿವಿಧ ಸಚಿವರು ಹಾಗೂ ಗಣ್ಯರು ಆಗಮಿಸಲಿದ್ದಾರೆ ಎಂದರು.

    ಮೈಸೂರು ರಂಗಾಯಣ ಸ್ಥಾಪನೆ ಸಂದರ್ಭದಲ್ಲಿ ದಿ.ಉಮೇಶ ಕತ್ತಿ ಉತ್ತರ ಕರ್ನಾಟಕದಲ್ಲಿಯೂ ರಂಗಾಯಣ ಸ್ಥಾಪಿಸುವಂತೆ ಒತ್ತಾಯಿಸಿದ ಪರಿಣಾಮ ಧಾರವಾಡದಲ್ಲಿ ರಂಗಾಯಣ ಸ್ಥಾಪನೆಯಾಯಿತು. ರಂಗಾಯಣದ ವತಿಯಿಂದ ಹುಕ್ಕೇರಿಯ ಎಸ್.ಕೆ.ಹೈಸ್ಕೂಲ್ ಮೈದಾನದಲ್ಲಿ ಮಾ.1 ಮತ್ತು 2ರಂದು ಕಿತ್ತೂರು ಚನ್ನಮ್ಮ ನಾಟಕ ಆಯೋಜಿಸಲಾಗಿದೆ ಎಂದು ತಿಳಿಸಿದರು. ಸಹೋದರ ದಿ.ಉಮೇಶ ಕತ್ತಿ ಅವರ ಜನ್ಮದಿನವನ್ನು ಪ್ರತಿವರ್ಷದಂತೆ ಈ ವರ್ಷವೂ ಆಚರಿಸಲಾಗುತ್ತದೆ. ವಿಶ್ವರಾಜ ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಿದ್ಧ ವೈದ್ಯರಿಂದ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

    ಹಿರಾಶುಗರ್ಸ್‌ ಅಧ್ಯಕ್ಷ ನಿಖಿಲ್ ಕತ್ತಿ, ನಿರ್ದೇಶಕರಾದ ಅಪ್ಪಾಸಾಹೇಬ ಶಿರಕೋಳಿ, ಪ್ರಭುದೇವ ಪಾಟೀಲ, ಸುರೇಶ ಬೆಲ್ಲದ, ಬಸವರಾಜ ಮರಡಿ, ಅಶೋಕ ಪಟ್ಟಣಶೆಟ್ಟಿ, ಬಸವರಾಜ ಕಲ್ಲಟ್ಟಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಗಜಾನನ ಕೊಳ್ಳಿ, ಹುಕ್ಕೇರಿ ಪುರಸಭೆ ಅಧ್ಯಕ್ಷ ಅಣ್ಣಪ್ಪ ಪಾಟೀಲ, ಕಲ್ಲಣ್ಣ ಚೌಗಲಾ, ಸುಭಾಷ ಪಾಟೀಲ, ಮಹಾವೀರ ನಿಲಜಗಿ, ಸತ್ಯಪ್ಪ ನಾಯಿಕ, ಸುನೀಲ ಪರ್ವತರಾವ, ಸಂಜಯ ಶಿರಕೋಳಿ, ಡಾ. ಅಶೋಕ ಪಾಟೀಲ ಇತರರಿದ್ದರು.

    ಮಾಜಿ ಸಚಿವ ಉಮೇಶ ಜೀವನ ಚರಿತ್ರೆ

    ಶಾಸಕರಾಗಿ, ಸಚಿವರಾಗಿ, ಗಡಿಜಿಲ್ಲೆಯ ಸಹಕಾರ ಸಂಘಗಳ ಮಾರ್ಗದರ್ಶಕರಾಗಿ ನಿರಂತರ ಹೋರಾಟದ ಮೂಲಕ ಉತ್ತರ ಕರ್ನಾಟಕದ ಅಭಿವದ್ಧಿಗೆ ಧ್ವನಿ ಎತ್ತುತ್ತಿದ್ದ ಉಮೇಶ ಕತ್ತಿ ಅವರ ಬಾಲ್ಯದಿಂದ ಹಿಡಿದು ಅವರ ಅಗಲಿಕೆವರೆಗಿನ ಎಲ್ಲ ಘಟನೆಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಅವರ ಆಪ್ತ ವಲಯದ ಎಲ್ಲರನ್ನು ಸಂಪರ್ಕಿಸಿ, ಅದಕ್ಕೊಂದು ಕತಿಯ ರೂಪ ನೀಡಿ ಉಮೇಶ ಕತ್ತಿ ಜೀವನದ ಏಳು-ಬೀಳುಗಳನ್ನು ಜನರಿಗೆ ಪರಿಚಯಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ 21 ಜನರ ಸಮಿತಿ ಸ್ಥಾಪಿಸಿದ್ದು, ಬರುವ ದಿನಗಳಲ್ಲಿ ಈ ಕತಿ ಲೋಕಾರ್ಪಣೆಗೊಳ್ಳಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts