More

    ಲೈವ್‌ಲೇಸರ್ ಪ್ರೋಕ್ಟಾಲಜಿ ಕಾರ್ಯಾಗಾರ

    ಬೆಳಗಾವಿ: ವಿಶ್ವ ಪ್ರೋಕ್ಟಾಲಜಿ ದಿನದ ಹಿನ್ನೆಲೆಯಲ್ಲಿ ಬೆಳಗಾವಿಯ ವೇಣುಗ್ರಾಮ ಆಸ್ಪತ್ರೆಯಲ್ಲಿ ಈಚೆಗೆ ಲೈವ್‌ಲೇಸರ್ ಪ್ರೋಕ್ಟಾಲಜಿ ಕಾರ್ಯಾಗಾರ ಜರುಗಿತು.

    ಕೆಎಸ್‌ಸಿ ಎಎಸ್‌ಐ ಬೆಳಗಾವಿ (ಕರ್ನಾಟಕ ರಾಜ್ಯ ಶಸ್ತ್ರಚಿಕಿತ್ಸಕರ ಸಂಘದ ಕರ್ನಾಟಕ ರಾಜ್ಯ ವಿಭಾಗ, ಬೆಳಗಾವಿ ಅಧ್ಯಾಯ) ಮತ್ತು ವೇಣುಗ್ರಾಮ ಫೌಂಡೇಷನ್ ಸಹಯೋಗದಲ್ಲಿ ಲೇಸರ್ ಸರ್ಜರಿ ಕಾರ್ಯಾಗಾರ ನಡೆಯಿತು.

    ಕ್ಯಾಲಿಕಟ್‌ನ ಖ್ಯಾತ ಲೇಸರ್ ಸರ್ಜನ್ ಡಾ. ಆಂಟನಿ ಚಾಕೋ ಉದ್ಘಾಟಿಸಿದರು. ಡಾ. ಶ್ರೀಪತಿ ಪೈಸೆ, ಡಾ. ಗೋಮಟೇಶ ಕುಸ್ನಾಳೆ, ಡಾ. ಕಿಶೋರ ಬಂಡಗಾರ, ಡಾ. ಸಮಿತಿ ಕಾರ್ಯಾಗಾರ ನಡೆಸಿಕೊಟ್ಟರು. ಡಾ. ಆಂಟೋನಿ ಚಾಕೋ ಅವರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಎಲ್ಲ ವೈದ್ಯರಿಗೆ ಲೇಸರ್ ತಂತ್ರಜ್ಞಾನ ಮತ್ತು ಸಲಕರಣೆಗಳ ಬಗ್ಗೆ ಸಂಕ್ಷಿಪ್ತ ಪರಿಚಯ ನೀಡಿದರು. ಅಧ್ಯಾಪಕರು 9 ಫೈಲ್ಸ್ ರೋಗಿಗಳಿಗೆ ಸಂಕೀರ್ಣವಾದ ಲೇಸರ್ ಶಸ್ತ್ರಚಿಕಿತ್ಸೆಗಳನ್ನು ಆಸ್ಪತ್ರೆಯ ಮಾಡ್ಯುಲರ್ ಆಪರೇಷನ್ ಥಿಯೇಟರ್‌ಗಳಲ್ಲಿ ನಡೆಸಿದರು. ವೇಣುಗ್ರಾಮ ಆಸ್ಪತ್ರೆಯು ಮೂರು ವರ್ಷಗಳಿಂದ ಲೇಸರ್ ೈಲ್ಸ್ ಕೇಂದ್ರ ಹೊಂದಿದೆ. ಈ ಶಸ್ತ್ರಚಿಕಿತ್ಸೆಗಳನ್ನು ಬೆಳಗಾವಿಯ ಹೊರಗೆ ನಡೆಸಿದರೆ, ರೋಗಿಗಳಿಗೆ ಬಹಳಷ್ಟು ಹಣ ಖರ್ಚಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts