More

    ಲೈನ್​ಮನ್​ಗಳ ಸೇವೆಗೆ ವ್ಯಾಪಕ ಪ್ರಶಂಸೆ

    ಕಲಬುರಗಿ: ಕರೊನಾ ವಿರುದ್ಧದ ಹೋರಾಟದಲ್ಲಿ ವೈದ್ಯರು, ಪೊಲೀಸರು, ಆಶಾ-ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಧಿಕಾರಿಗಳು ಮುಂಚೂಣಿಯಲ್ಲಿದ್ದರೆ, ಲಾಕ್ಡೌನ್ನಿಂದ ಮನೆಯಲ್ಲಿರುವ ಜನರಿಗೆ ನಿರಂತರ ವಿದ್ಯುತ್ ಪೂರೈಸುವ ಮೂಲಕ ಜೆಸ್ಕಾಂ ಸಂಸ್ಥೆ ಪರದೆ ಹಿಂದೆ ತನ್ನ ಜನಸೇವೆ ಮುಂದುವರಿಸಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
    ಕೋವಿಡ್-19 ಹೋರಾಟದಲ್ಲಿ ಜಿಲ್ಲಾಡಳಿತ, ಆರೋಗ್ಯ, ಪೊಲೀಸ್, ಕಂದಾಯ, ಗ್ರಾಮೀಣಾಭಿವೃದ್ಧಿ, ಸ್ಥಳೀಯ ಸಂಸ್ಥೆಗಳು ಹೀಗೆ ಅವಶ್ಯಕ ಸೇವೆ ಪೂರೈಸುವ ನೌಕರರು ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿದ್ದಾರೆ. ಇಂಧನ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಆಸ್ಪತ್ರೆ ಮತ್ತು ಗೃಹಬಳಕೆಗೆ ನಿರಂತರ ವಿದ್ಯುತ್ ಪೂರೈಸುವಲ್ಲಿ ನಿರತವಾಗಿದ್ದು, ವಿಶೇಷವಾಗಿ ಲೈನ್ಮನ್ಗಳ ಕಾರ್ಯ ಪ್ರಶಂಸನೀಯವಾಗಿದೆ.
    ಅಧುನಿಕ ಜೀವನದಲ್ಲಿ ವಿದ್ಯುತ್ ಇಲ್ಲದ ಜಗತ್ತು ಮತ್ತು ಜನಜೀವನ ಊಹಿಸಲು ಅಸಾಧ್ಯ. ಸ್ಮಾಟರ್್ಫೋನ್, ಟೆಲಿವಿಷನ್, ಕಂಪ್ಯೂಟರ್, ಎಸಿ, ಏರ್ಕೂಲರ್, ಲ್ಯಾಪ್ಟಾಪ್, ಫ್ಯಾನ್, ಫ್ರೀಜರ್ ಹೀಗೆ ವಿದ್ಯುತ್ ಚಾಲಿತ ವಸ್ತುಗಳು ದೈನಂದಿನ ಜೀವನದ ಅಗತ್ಯತೆ ತಿಳಿಸುತ್ತವೆ.
    ಲಾಕ್ಡೌನ್ನಿಂದಾಗಿ ಜನರು ಮನೆಯಲ್ಲೇ ಉಳಿಯಬೇಕಾದ ಸ್ಥಿತಿ ಇದೆ. ಯಾವುದೇ ಕೆಲಸ ಕಾರ್ಯಗಳಿಲ್ಲದೆ ಮನೆಯಲ್ಲಿ ಕಾಲ ಕಳೆಯುತ್ತಿರುವ ಜನರಿಗೆ ನಿರಂತರ ವಿದ್ಯುತ್ ಪೂರೈಸಿ ದೈನಂದಿನ ಜೀವನಕ್ಕೆ ಧಕ್ಕೆಯಾಗದಂತೆ ಜೆಸ್ಕಾಂ ಅವಿರತ ಕಾರ್ಯನಿರ್ವಹಿಸುತ್ತಿದೆ.
    ಸರ್ಕಾರವು ಕೃಷಿ ಚಟುವಟಿಕೆಗೆ ಲಾಕ್ಡೌನ್ನಿಂದ ಸಡಿಲಿಕೆ ನೀಡಿದ್ದರಿಂದ ಜಮೀನುಗಳಲ್ಲಿ ನೀರೆತ್ತುವ ಯಂತ್ರಗಳಿಗೆ ವಿದ್ಯುತ್ ಪೂರೈಸದಿದ್ದರೆ ಅನ್ನದಾತನ ಹಿಡಿಶಾಪ ತಪ್ಪಿದ್ದಲ್ಲ. ಇದನ್ನರಿತ ಜೆಸ್ಕಾಂ ಸಿಬ್ಬಂದಿ 24 ಗಂಟೆ ಸೇವೆಗೆ ಅಣಿಯಾಗಿದ್ದಾರೆ. ಜೋರಾಗಿ ಗಾಳಿ, ಮಳೆ, ಗುಡುಗು, ಸಿಡಿಲು ಮಿಂಚಿನಿಂದ ಹಲವು ಕಡೆ ಗಿಡ, ಮರ, ಕಂಬಗಳು ಉರುಳಿದ್ದು, ವಿದ್ಯುತ್ ಅಡಚಣೆ ಉಂಟಾದಾಗ ತ್ವರಿತವಾಗಿ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿ ವಿದ್ಯುತ್ ಪೂರೈಕೆಗೆ ಪಡುವ ಕಷ್ಟ ಹೇಳತೀರದು. ಲಾಕ್ಡೌನ್ ಸಂದರ್ಭದಲ್ಲೂ ಲೈನ್ಮನ್ಗಳ ಸೇವಾ ಮನೋಭಾವಕ್ಕೆ ಜನಮೆಚ್ಚುಗೆ ವ್ಯಕ್ತವಾಗುತ್ತಿದೆ.ಕಾರಿಗೆ ಸಂಸದ ಡಾ.ಉಮೇಶ ಜಾಧವ್, ಶಾಸಕ ಎಂ.ವೈ. ಪಾಟೀಲ್ ಶುಕ್ರವಾರ ಮನವಿಪತ್ರ ಸಲ್ಲಿಸಿದರು. ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts