More

    ಲಿಂಪಿಸ್ಕಿನ್ ಆರ್ಭಟಕ್ಕೆ ಜಾನುವಾರು ತತ್ತರ


    ಕೃಷ್ಣ ಕುಲಕರ್ಣಿ ಕಲಬುರಗಿ
    ಚೀನಿ ವೈರಸ್ ಕರೊನಾ ಆರ್ಭಟದ ಜತೆಗೆ ಜಿಲ್ಲೆಗೆ ಇನ್ನೊಂದು ಸೋಂಕು ಲಗ್ಗೆಯಿಟ್ಟಿದೆ. ಇದು ಜನರಿಗೆ ಅಂಟುವ ವೈರಸ್ ಅಲ್ಲ, ಜಾನುವಾರುಗಳಿಗೆ ಕಾಡುವ ಸೋಂಕು. ಕಲ್ಯಾಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಲಿಂಪಿಸ್ಕಿನ್ (ಮುದ್ದೆ ಚರ್ಮರೋಗ) ಹರಡಿದ್ದು, ಜಾನುವಾರುಗಳು ತೀವ್ರ ಯಾತನೆ ಅನುಭವಿಸುತ್ತಿವೆ. ಕೆಲವು ಈಗಲೇ ಅಸುನೀಗಿವೆ.
    ಜಿಲ್ಲೆಯಲ್ಲಿ 2012ರ ಗಣತಿ ಪ್ರಕಾರ 4,73,117 ದನ, 91,254 ಎಮ್ಮೆಗಳಿವೆ. ಇದೀಗ ಈ ಜಾನುವಾರುಗಳಿಗೆ ಲಿಂಪಿಸ್ಕಿನ್ ಎಂಬ ಸಾಂಕ್ರಾಮಿಕ ಕಾಯಿಲೆ ಕಾಡುತ್ತಿದೆ. ಪಶು ಇಲಾಖೆ (ಭಾನುವಾರ) ವರದಿ ಪ್ರಕಾರ, ಜಿಲ್ಲೆಯಲ್ಲಿ ಇದುವರೆಗೆ 7000 ಜಾನುವಾರುಗಳಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.
    ತಾಲೂಕುವಾರು ಅಂಕಿ- ಸಂಖ್ಯೆಗಳ ಪ್ರಕಾರ ಸೇಡಂನಲ್ಲಿ 3,421 ಜಾನುವಾರುಗಳು ವೈರಸ್ನಿಂದ ಬಳಲುತ್ತಿವೆ. ಚಿಂಚೋಳಿ 2024, ಕಲಬುರಗಿ 457, ಜೇವಗಿ 296, ಚಿತ್ತಾಪುರ 264, ಆಳಂದ 216, ಅಫಜಲಪುರದಲ್ಲಿ 73 ಜಾನುವಾರುಗಳು ಲಿಂಪಿಸ್ಕಿನ್ನಿಂದ ಬಳಲುತ್ತಿವೆ.
    ಕ್ಯಾಪ್ರಿವಾಕ್ಸ್ ಎಂಬ ವೈರಸ್ನಿಂದ ಜಾನುವಾರುಗಳಿಗೆ ಲಿಂಪಿಸ್ಕಿನ್ ತಗಲುತ್ತಿದೆ. ಮಿಶ್ರತಳಿಗಳು ಹಾಗೂ ಹೆಚ್ಚು ಹಾಲು ಕೊಡುವ ಆಕಳು ಮತ್ತು ಕರುಗಳಿಗೆ ಹೆಚ್ಚಾಗಿ ಬಾಧಿಸುತ್ತದೆ. ಅತಿ ವೇಗವಾಗಿ ಒಂದರಿಂದ ಇನ್ನೊಂದು ಜಾನುವಾರುಗೆ ಹರಡುವುದರಿಂದ ರೈತರಲ್ಲಿ ಆತಂಕ ಸೃಷ್ಟಿಯಾಗಿದೆ. ಎರಡ್ಮೂರು ದಿನ ಸಾಧಾರಣ ಜ್ವರ, ನಂತರ ಜಾನುವಾರುಗಳ ಚರ್ಮದ ಮೇಲೆ ಚಿಕ್ಕ ಗಡ್ಡೆಗಳಾಗುತ್ತವೆ. ಬಳಿಕ ಗಂಟು ಕಟ್ಟಿ ಹುಣ್ಣು ಬೀಳುವುದು ಈ ಸೋಂಕಿನ ಪ್ರಮುಖ ಲಕ್ಷಣಗಳು.
    ಜಿಲ್ಲೆಯ 214 ಪಶು ವೈದ್ಯ ಸಂಸ್ಥೆಗಳ ಪೈಕಿ 1 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, 29 ಪಶು ಆಸ್ಪತ್ರೆ, 109 ಪಶು ಚಿಕಿತ್ಸಾಲಯ, 68 ಪ್ರಾಥಮಿಕ ಪಶು ಚಿಕಿತ್ಸಾಲಯ, 7 ಸಂಚಾರಿ ಪಶು ಚಿಕಿತ್ಸಾಲಯಗಳಿವೆ. ಲಿಂಪಿಸ್ಕಿನ್ ವೈರಸ್ನಿಂದ ಬಳಲುತ್ತಿರುವ ಜಾನುವಾರುಗಳಿಗೆ ಈ ಎಲ್ಲ ಕಡೆ ಚಿಕಿತ್ಸೆ ನೀಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಪಶು ಇಲಾಖೆ ತಂಡ ವೈರಸ್ಗೆ ಔಷಧ ತಯಾರಿಸಲು ಶ್ರಮಿಸುತ್ತಿದ್ದು, ಶೀಘ್ರದಲ್ಲೇ ವ್ಯಾಕ್ಸಿನ್ ಬರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಪಶು ಆರೋಗ್ಯ ಶಿಬಿರ ನಡೆಸಲು ಸೂಚನೆ
    ರೋಗ ಹೆಚ್ಚು ಕಂಡುಬರುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಹೆಚ್ಚು ಪ್ರಕರಣಗಳಿರುವ ಗ್ರಾಮಗಳಲ್ಲಿ ಪಶು ಆರೋಗ್ಯ ಶಿಬಿರ ನಡೆಸಿ ರೋಗ ಹತೋಟಿಗೆ ತರಲು ಶ್ರಮಿಸಬೇಕು ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಕಲ್ಯಾಣ ಕನರ್ಾಟಕದ ಪಶು ಸಂಗೋಪನೆ ಇಲಾಖೆ ಎಲ್ಲ ಅಧಿಕಾರಿಗಳು ಮತ್ತು ಪಶು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts