More

    ಲಿಂಗಾಯತರ ಕಡೆಗಣನೆ ಕಲಬುರಗಿ ಘಟನೆಯೇ ಸಾಕ್ಷಿ ಎಂದ ಎಂಪಿ ಡಾ.ಜಾಧವ ಪಿಕೆ ವಿರುದ್ಧ ವಾಗ್ದಾಳಿ


    ವಿಜಯವಾಣಿ ಸುದ್ದಿಜಾಲ ಕಲಬುರಗಿ
    ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ವೀರಶೈವ-ಲಿಂಗಾಯತರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪ ಸತ್ಯವಾಗಿದೆ. ಅದಕ್ಕೆ ಸಾಕ್ಷಿ ಎಂಬAತೆ ಕಲಬುರಗಿ ಮಹಾನಗರ ಪಾಲಿಕೆಯ ಲಿಂಗಾಯತ ನೌಕರರ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗ ಹಲ್ಲೆ ನಡೆಸಿದರೂ ಇದುವರೆಗೂ ಬಂಧಿಸಿಲ್ಲವಲ್ಲ ಎಂದು ಲೋಕಸಭಾ ಸದಸ್ಯ ಡಾ.ಉಮೇಶ ಜಾಧವ ಹೇಳಿದರು.
    ನಗರದಲ್ಲಿ ಪತ್ರಕರ್ತರ ಜತೆಗೆ ಮಾತನಾಡಿ, ಹಲ್ಲೆ ನಡೆದು ತಿಂಗಳಾಗುತ್ತಾ ಬಂದಿದೆ. ಇಷ್ಟಿದ್ದರೂ ಆರೋಪಿಯ ಬಂಧಿಸಿಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸರ್ಕಾರ ಲಿಂಗಾಯತರನ್ನು ಕಡೆಗಣಿಸುತ್ತಿದೆ. ಹೊರತು ಅವರಿಗೆ  ಗೌರವದಿಂದ ನಡೆಸಿಕೊಳ್ಳುತ್ತಿಲ್ಲ ಎಂದು ತಿಳಿಸಿದರು.
    ಹಿರಿಯ ಶಾಸಕರಾದ ಶಾಮನೂರ ಶಿವಶಂಕರಪ್ಪ ಅವರು ವೀರಶೈವ-ಲಿಂಗಾಯತರನ್ನು ಕಡೆಗಣಿಸಲಾಗುತ್ತಿದೆ ಎಂದು ಹೇಳಿದ್ದರಲ್ಲಿ ಎರಡು ಮಾತಿಲ್ಲ. ಅವರ ಹೇಳಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ನಿರ್ಲಕ್ಷÈ ಮಾಡಿದರೆ ಅದರ ಪ್ರತಿಫಲ ಸರ್ಕಾರವೇ ಉಣ್ಣಲಿದೆ. ಅಪಾಯ ಎದುರಿಸಲಿದೆ ಎಂದು ತಿಳಿಸಿದರು.
    ಸರ್ಕಾರದಲ್ಲಿ ಎರಡ್ಮೂರು ಅಧಿಕಾರ ಕೇಂದ್ರಗಳಿವೆ. ಒಬ್ಬೊಬ್ಬರದು ಒಂದೊAದು ತೆರನಾದ ಆಡಳಿತ ವೈಖರಿಯಾಗಿದೆ.  ಅದರಲ್ಲೂ `ಸರ್ಕಾರದಲ್ಲಿರುವ ಕಲಬುರಗಿಯ ಸ್ಪೇಷಲ್ ಬೇಬಿ’ ಹಿಡಿತ ಬೇರೆ ಇದೆ. ಹೀಗಾಗಿ ಈ ಸರ್ಕಾರದಲ್ಲಿ ಯಾವ ನಿರ್ಧಾರ ಯಾರು ಕೈಗೊಳ್ಳುತ್ತಾರೋ ಗೊತ್ತಿಲ್ಲ. ನಡೆಯಂತೂ ವಿಚಿತ್ರವಾಗಿದೆ. ಎಲ್ಲರಿಗೂ ಬೇಸರ ತರಿಸಿದೆ ಎಂದು ಹೇಳಿದರು.
    ಒಟ್ಟಾರೆ, ಕಾಂಗ್ರೆಸ್ ಆಡಳಿತ ಜನರಲ್ಲಿ ಬೇಸರ ತರಿಸಿದೆ. ಲಿಂಗಾಯತರನ್ನು ಕಡೆಗಣಿಸಲಾಗುತ್ತಿದೆ. ಶಾಮನೂರ ಅವರು ಹಿರಿಯರು,  ಅವರ ಮನಸ್ಸಿಗೆ ನೋವಾಗುವಂತೆ ಯಾವ ಸಚಿವರು ವರ್ತಿಸಿದ್ದಾರೆ ಎಂದು ಪ್ರಶ್ನಿಸಿದರು. ಅದು ಜನರಿಗೆ ಗೊತ್ತಾಗಬೇಕು. ರಾಜ್ಯದ ಆಡಳಿತ ಹದಗೆಟ್ಟು ಹೋಗಿದೆ. ಕಾಂಗ್ರೆಸ್‌ಗೆ ಜನರು ಬರುವ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಡಾ.ಜಾಧವ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts