More

    ಲಿಂಗನಮಕ್ಕಿಯಿಂದ ನೀರು ಬಿಡುವ ಮುನ್ಸೂಚನೆ

    ಹೊನ್ನಾವರ: ಶರಾವತಿ ನದಿಗೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಕಟ್ಟಲಾಗಿರುವ ಲಿಂಗನಮಕ್ಕಿ ಅಣೆಕಟ್ಟೆ ಭರ್ತಿಯ ಹಂತ ತಲುಪಿದ್ದು, ನೀರು ಬಿಡುವ ಪ್ರಾಥಮಿಕ ಮುನ್ಸೂಚನೆ ನೀಡಲಾಗಿದೆ. ಗರಿಷ್ಠ 1819 ಅಡಿ ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಶನಿವಾರದ ವರದಿಯಂತೆ 1801.35 ಅಡಿ ನೀರು ತುಂಬಿದೆ. 30397 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಮಳೆ ಮುಂದುವರಿದು, ಒಳಹರಿವು ಇದೇ ರೀತಿ ಇದ್ದಲ್ಲಿ ಅಣೆಕಟ್ಟೆ ಗರಿಷ್ಠ ಮಟ್ಟ ನೀರು ತಲುಪುವ ಸಾಧ್ಯತೆ ಇದೆ.
    ಗುಡ್ಡ ಕುಸಿತದ ಭೀತಿ- ಸ್ಥಳಾಂತರ: ಹೊನ್ನಾವರ ಕೆಳಗಿನೂರು ಭಾಗದ ಅಪ್ಸರಕೊಂಡ ಭಾಗದಲ್ಲಿ ಮನೆಗಳ ಮೇಲೆ ಗುಡ್ಡ ಕುಸಿತ ಉಂಟಾಗುವ ಸಾಧ್ಯತೆ ಇರುವುದರಿಂದ 63 ಮನೆಗಳ 270 ಜನರನ್ನು ಗುಡ್ಡದ ಮೇಲಿನ ಅಪ್ಸರಕೊಂಡ ಮಠದಲ್ಲಿ ತಾಲೂಕು ಆಡಳಿತದಿಂದ ಕಾಳಜಿ ಕೇಂದ್ರ ತೆರೆದು ಸ್ಥಳಾಂತರ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts