More

    ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸಾವು

     ಹಾಸನ:  ಚಲಿಸುತ್ತಿದ್ದ ಬೈಕಿಗೆ ಎದುರಿನಿಂದ ವೇಗವಾಗಿ ಬಂದ ಲಾರಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮಂಗಳವಾರ ರಾತ್ರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
    ಅರಕಲಗೂಡು ತಾಲೂಕು, ದೊಡ್ಡಮಗ್ಗೆ ಹೋಬಳಿಯ ಇಳ್ಳಳ್ಳಿ ಗ್ರಾಮದ ರಾಜಯ್ಯ (38) ಮೃತ ವ್ಯಕ್ತಿ.
    ರಾಮನಾಥಪುರದ ಕೆಎಸ್‌ಆರ್‌ಟಿಸಿ ಘಟಕದಲ್ಲಿ ಚಾಲಕ ಕಂ ನಿರ್ವಾಹಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜಯ್ಯ ಕುಟುಂಬಸಮೇತ ಹಾಸನ ನಗರದಲ್ಲಿ ವಾಸವಾಗಿದ್ದರು. ಆ.7ರಂದು ತಾಯಿ ಅನಾರೋಗ್ಯದ ಕಾರಣ ಊರಿಗೆ ಬಂದು ತಾಯಿಗೆ ಚಿಕಿತ್ಸೆ ಕೊಡಿಸಿ ಮಂಗಳವಾರ ಬೈಕಿನಲ್ಲಿ ಹಾಸನಕ್ಕೆ ವಾಪಸ್ಸಾಗುತ್ತಿದ್ದರು. ಗೊರೂರು ಬಳಿ ಬರುತ್ತಿದ್ದಾಗ ಊರಿನಿಂದ ಕರೆ ಮಾಡಿ ವಾಪಸ್ ಗ್ರಾಮಕ್ಕೆ ಬರಲೆಂದು ತಿಳಿಸಿದ್ದರಿಂದ ಮತ್ತೆ ಇಳ್ಳಳ್ಳಿ ಗ್ರಾಮದ ಕಡೆಗೆ ಬೈಕ್ ತಿರುಗಿಸಿದ್ದಾರೆ. ಅಂಕನಾಯಕನಹಳ್ಳಿ ಕೆರೆಯ ಏರಿಯ ಮೇಲಿನ ರಸ್ತೆಯಲ್ಲಿ ಹೋಗುತ್ತಿದ್ದಾಗ ಅರಕಲಗೂಡು ಕಡೆಯಿಂದ ವೇಗವಾಗಿ ಬಂದ ಲಾರಿ ರಾಜಯ್ಯರವರ ಬೈಕಿಗೆ ಡಿಕ್ಕಿ ಹೊಡೆದಿದೆ. ರಸ್ತೆಯ ಮೇಲೆ ಬಿದ್ದ ರಾಜಯ್ಯ ಅವರ ತಲೆಗೆ ಗಂಭೀರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತ ಮಾಡಿದ ಲಾರಿ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಮೃತರ ಪತ್ನಿ ಪುಷ್ಪಲತಾ ಅವರು ಅರಕಲಗೂಡು ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts