More

    ಲಾಭದಲ್ಲಿದೆ ಚಿಕ್ಕೋಡಿ ಪಿಕೆಪಿಎಸ್

    ಚಿಕ್ಕೋಡಿ, ಬೆಳಗಾವಿ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 110 ವರ್ಷಗಳ ಇತಿಹಾಸ ಹೊಂದಿದ್ದು, ಡಿಸಿಸಿ ಬ್ಯಾಂಕಿನ ಸಂಸ್ಥಾಪಕ ಸದಸ್ಯರಲ್ಲಿ 6 ಜನ ಚಿಕ್ಕೋಡಿಯವರಾಗಿರುವುದು ಹೆಮ್ಮೆಯ ವಿಷಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು. ಶನಿವಾರ ಚಿಕ್ಕೋಡಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 110ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ಕಳೆದ ಆರ್ಥಿಕ ವರ್ಷದಲ್ಲಿ 38.22 ಲಕ್ಷ ರೂ. ಲಾಭಗಳಿಸಿದ್ದು ಸದಸ್ಯರಿಗೆ ಶೇ. 12 ಲಾಭಾಂಶ ವಿತರಿಸಲಿದೆ ಎಂದರು.

    ಕಬ್ಬು ವಾಣಿಜ್ಯ ಬೆಳೆಯಾಗಿದ್ದು, ರೈತರು ಹೊಸ ಕೃಷಿ ನೀತಿ ಅಳವಡಿಸಿಕೊಳ್ಳಬೇಕು. ಹನಿ ನೀರಾವರಿ ಅಳವಡಿಸುವ ಮೂಲಕ ಕೃಷಿ ಮಾಡಬೇಕೆಂದರು. ಆಯುಷ್ಮಾನ್ ಭಾರತದಡಿ 5 ಲಕ್ಷದವರೆಗೆ ಆರೋಗ್ಯ ವಿಮೆ ಸೌಲಭ್ಯ, ಕಿಸಾನ್ ಸಮ್ಮಾನ್ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಸಂಸ್ಥೆಯ ಅಧ್ಯಕ್ಷ ಸದಾಶಿವ ಲಕ್ಷ್ಮಣ ಬನ್ನಟ್ಟಿ ಮಾತನಾಡಿ, ಸಂಸ್ಥೆಯು ಷೇರು ಬಂಡವಾಳ 110.46 ಲಕ್ಷ ರೂ.,ಕಾಯ್ದಿಟ್ಟ ನಿಧಿ 88.80 ಕೋಟಿ ರೂ., 30 ಲಕ್ಷ ರೂ. ಠೇವು, 13.93 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದ್ದು, 33.22 ಲಕ್ಷ ರೂ. ಲಾಭಗಳಿಸಿದೆ. ಅ ಸ್ಥಾನ ಪಡೆದು ಸದಸ್ಯರಿಗೆ ಶೇ. 12 ಲಾಭಾಂಶ ಹಂಚಿಕೆ ಮಾಡಲಾಗಿದೆ ಎಂದರು.

    ಸಂಘದ ಉಪಾಧ್ಯಕ್ಷ ಗಣಪತಿ ಕಲ್ಲಪ್ಪ ಕಾಂಬಳೆ, ಚಂದ್ರಶೇಖರ ಕುಲಕರ್ಣಿ, ಶ್ರೀಕಾಂತ ಚನ್ನವರ, ಸ್ವರೂಪ ಲಗಾರೆ, ಶೋಭಾ ಮಲಾಬಾದೆ, ಉಷಾಕಿರಣ ಝಳಕೆ, ಲಕ್ಕಪ್ಪ ಗುಡಸೆ, ರೇಖಾ ಮೇದಾರ, ಪ್ರಕಾಶ ಕಟ್ಟಿಕರ ಸರ್ವ ಸದಸ್ಯರು ಇದ್ದರು. ಮುಖ್ಯ ಕಾರ್ಯನಿರ್ವಾಹಕ ಮಲ್ಲಿಕಾರ್ಜುನ ಮಲಾಬಾದೆ ವಾರ್ಷಿಕ ವರದಿ ಓದಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts