More

    ಲಾಕ್​ಡೌನ್ ಪ್ರದೇಶದಲ್ಲಿ ಜನ-ವಾಹನ ದಟ್ಟಣೆ

    ಹುಬ್ಬಳ್ಳಿ: ಕೇಶ್ವಾಪುರದ ಆಜಾದ್ ಕಾಲನಿ, ಶಾಂತಿನಗರದ ಸೀಲ್​ಡೌನ್ ಪ್ರದೇಶ ಹೊರತುಪಡಿಸಿ ಇನ್ನುಳಿದ ಲಾಕ್​ಡೌನ್ ಪ್ರದೇಶದಲ್ಲಿ ಜನಸಂಚಾರ ಮಂಗಳವಾರದಂದು ಸಾಮಾನ್ಯವಾಗಿತ್ತು.

    ಸರ್ಕಾರಿ ಕಚೇರಿಗಳಲ್ಲಿಯೂ ಜನ ಸಂದಣಿ ಜಾಸ್ತಿ ಇತ್ತು. ಮಿನಿ ವಿಧಾನಸೌಧದಲ್ಲಿರುವ ಉಪ ನೋಂದಣಿ ಕಚೇರಿಯಲ್ಲಿ ಮದುವೆ, ಆಸ್ತಿ ನೋಂದಣಿ ಕಾರ್ಯಗಳಿಗೆ ಆಗಮಿಸಿದ್ದವರು ಪರಸ್ಪರ ಅಂತರ ಕಾಯ್ದುಕೊಂಡು ಸರದಿಯಲ್ಲಿ ಕೂತಿದ್ದರು. ಮುಂಚಿತವಾಗಿ ಹೆಸರು ನೋಂದಾಯಿಸಿ, ಕಚೇರಿಯವರು ನೀಡಿದ್ದ ಸಮಯಕ್ಕೆ ಜನರು ಉಪ ನೋಂದಣಿ ಕಚೇರಿಗೆ ಆಗಮಿಸುತ್ತಿದ್ದರು.

    ದುರ್ಗದಬೈಲ್​ನಲ್ಲಿ ವಿವಿಧ ವಸ್ತು, ಬಟ್ಟೆಗಳ ಖರೀದಿಗೆ ಆಗಮಿಸಿದ್ದ ಜನರು ಮಾಸ್ಕ್ ಧರಿಸಿದ್ದರಾದರೂ, ಪರಸ್ಪರ ಅಂತರ ಮರೆತಿದ್ದರು. ಬಹುತೇಕ ಅಂಗಡಿಗಳ ಮುಂಭಾಗದಲ್ಲಿ ಸ್ಯಾನಿಟೈಸರ್ ಇಡದಿರುವುದು ಕಂಡುಬಂದಿತು.

    ರಸ್ತೆ ಬದಿ ಬಟ್ಟೆ, ಪ್ಲಾಸ್ಟಿಕ್ ಉಪಕರಣ ಹಾಗೂ ಇತರ ವಸ್ತುಗಳ ಖರೀದಿಗೆ ಜನ ಮುಗಿಬಿದ್ದಿದ್ದರು. ಎಂ.ಜಿ. ಮಾರ್ಕೆಟ್ ಹಾಗೂ ಜನತಾ ಬಜಾರ್​ನಲ್ಲಿ ಬೆರಳೆಣಿಕೆ ಅಂಗಡಿಗಳಷ್ಟೇ ತೆರೆದಿದ್ದವು. ಚನ್ನಮ್ಮ ವೃತ್ತ, ಸ್ಟೇಷನ್ ರಸ್ತೆ, ಸವೋದಯ ವೃತ್ತ, ಕುಸುಗಲ್ ರಸ್ತೆ, ದುರ್ಗದಬೈಲ್, ಕೊಯಿನ್ ರಸ್ತೆ, ಕೊಪ್ಪಿಕರ ರಸ್ತೆ, ಜವಳಿ ಸಾಲ, ದಾಜಿಬಾನಪೇಟೆ ಮತ್ತಿತರೆಡೆ ಜನ ಹಾಗೂ ವಾಹನ ದಟ್ಟಣೆ ಇತ್ತು.

    ಸೀಲ್​ಡೌನ್ ಪ್ರದೇಶಗಳಾದ ಆಜಾದ್ ಕಾಲನಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಜನರು ರಸ್ತೆಗೆ ಇಳಿದಿದ್ದರು. ಶಾಂತಿನಗರದ ಸೀಲ್​ಡೌನ್ ಪ್ರದೇಶದಲ್ಲಿ ಜನಸಂಚಾರ ಇಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts