More

    ಲಗೇಜ್ ಆಟೋದಲ್ಲಿ ಪುಸ್ತಕಗಳ ಸಾಗಣೆ ; ತುಮಕೂರು ಕೇಂದ್ರ ಗ್ರಂಥಾಲಯದಲ್ಲಿ ಅಕ್ರಮದ ವಾಸನೆ

    ತುಮಕೂರು: ನಗರದ ಕೇಂದ್ರ ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತರಿಸಿದ್ದ ಪುಸ್ತಕಗಳನ್ನು ಗುರುವಾರ ಲಗೇಜ್ ಆಟೋದಲ್ಲಿ ಸಾವಿರಾರು ಪುಸ್ತಕಗಳನ್ನು ಹೊರ ಸಾಗಿಸಲಾಗಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

    ಗ್ರಂಥಾಲಯದಲ್ಲಿ ಓದುತ್ತ ಕುಳಿತಿದ್ದ ವಿದ್ಯಾರ್ಥಿಗಳು ಪುಸ್ತಕಗಳನ್ನು ಎಲ್ಲಿಗೆ ಕೊಂಡೊಯ್ಯಲಾಗುತ್ತಿದೆ, ಯಾವ ಕಾರಣಕ್ಕೆ ಎಂದು ಪ್ರಶ್ನಿಸಿದಾಗಲೂ ಸೂಕ್ತ ಮಾಹಿತಿ ನೀಡಿದೆ ಪುಸ್ತಕಗಳನ್ನು ಗ್ರಂಥಾಲಯದಿಂದ ಹೊರ ಸಾಗಿಸಿರುವುದರ ಹಿಂದೆ ಅಕ್ರಮ ನಡೆದಿರುವ ಶಂಕೆಯನ್ನು ಓದುಗರು ವ್ಯಕ್ತಪಡಿಸಿದ್ದು, ಈ ಬಗ್ಗೆ ತನಿಖೆಗೂ ಒತ್ತಾಯಿಸಿದ್ದಾರೆ.

    ತುಮಕೂರು ನಗರ ಕೇಂದ್ರ ಗ್ರಂಥಾಲಯದಿಂದ ಗುರುವಾರ ಹೊರಗೆ ಸಾಗಿಸಲಾದ ಪುಸ್ತಕಗಳನ್ನು ಕಟ್ಟಿನಲ್ಲಿಯೇ ಇಡಲಾಗಿತ್ತು, ಓದುಗರಿಗೂ ನೀಡದೇ ಗ್ರಂಥಾಲಯದಲ್ಲಿಯೇ ಇಡಲಾಗಿದ್ದ ಪುಸ್ತಕಗಳನ್ನು ಸಾಗಿಸಲಾಗಿದ್ದಾದರೂ ಎಲ್ಲಿಗೆ ಎಂಬ ಅನುಮಾನ ಮೂಡಿಸಿದೆ. ೆಟೋ ತೆಗೆದ ಓದುಗರಿಗೆ ಗ್ರಂಥಾಲಯ ಸಿಬ್ಬಂದಿ ಬೆದರಿಕೆ ಹಾಕಿರುವುದು ಅನುಮಾನಕ್ಕೆ ಪುಷ್ಠಿ ನೀಡಿದೆ.

    ಪುಸ್ತಕ ಸಾಗಿಸುವಾಗ ಅನುಮಾನಗೊಂಡ ವಿದ್ಯಾರ್ಥಿಗಳು, ಕುತೂಹಲಕ್ಕೆ ಎಲ್ಲಿಗೆ, ಯಾಕೆ ಸಾಗಿಸುತ್ತಿದ್ದಿರಾ ಎಂಬ ಪ್ರಶ್ನೆಗೆ ಗ್ರಂಥಾಲಯ ಸಿಬ್ಬಂದಿ ಉತ್ತರಿಸಲಿಲ್ಲ, ಫೋಟೋ ಕ್ಲಿಕ್ಕಿಸಲು ಸಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಗ್ರಂಥಾಲಯದಲ್ಲಿ ಸ್ಫರ್ಧಾತ್ಮಕ ಪರೀಕ್ಷೆಗೆ ಅಗತ್ಯವಾದ ಪುಸ್ತಕಗಳ ಕೊರತೆಯಿದ್ದರೂ ಹೊರತೆಗಿಯದೇ ಇದ್ದ ಗ್ರಂಥಾಲಯ ಇಲಾಖೆ ಸಿಬ್ಬಂದಿ ಏಕಾಏಕಿ ಸಾವಿರಾರು ಪುಸ್ತಕಗಳನ್ನು ಹೊರಕಳುಹಿಸಿದ್ದು ಅನುಮಾನ ಮೂಡಿಸಿದೆ.

    ಕರೊನಾ ಇದ್ದ ಕಾರಣಕ್ಕೆ ಕಳೆದ ವರ್ಷ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ. ಹಾಗಾಗಿ, ಮುಂಗಡವಾಗಿ ನೀಡಿದ್ದ ಪುಸ್ತಕಗಳನ್ನು ಗುತ್ತಿಗೆದಾರ ವಾಪಸ್ ತೆಗೆದುಕೊಂಡು ಹೋಗಿದ್ದಾರೆ ಎನ್ನಿಸುತ್ತದೆ, ಈ ಬಗ್ಗೆ ನಮ್ಮ ಸಿಬ್ಬಂದಿಯನ್ನು ಕೇಳಿ ತಿಳಿದುಕೊಂಡು ಮಾಹಿತಿ ನೀಡುತ್ತೇನೆ.
    ಮಂಜುಳಾ, ಸಹಾಯಕಿ ನಿರ್ದೇಶಕಿ ನಗರ ಕೇಂದ್ರ ಗ್ರಂಥಾಲಯ

    ಗುರುವಾರ ಗ್ರಂಥಾಲಯದಿಂದ ಸಾವಿರಾರು ಪುಸ್ತಕಗಳನ್ನು ತರಾತುರಿಯಲ್ಲಿ ಹೊರಗೆಲ್ಲೊ ಸಾಗಿಸಲಾಯಿತು, ಅನುಮಾನಗೊಂಡು ಅಲ್ಲಿದ್ದವರೆಲ್ಲಾ ಪ್ರಶ್ನಿಸಿದರೂ ಸೂಕ್ತ ಉತ್ತರ ನೀಡಲಿಲ್ಲ, ಖಾಸಗಿ ವಾಹನದಲ್ಲಿ ಸರ್ಕಾರಿ ಗ್ರಂಥಾಲಯದ ಸಾವಿರಾರು ಪುಸ್ತಕಗಳನ್ನು ತೆಗೆದುಕೊಂಡು ಹೋದ ಫೋಟೋ, ವಿಡಿಯೋ ತೆಗೆಯಲು ಅವಕಾಶ ನೀಡಲಿಲ್ಲ. ಪುಸ್ತಕಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿರುವ ಶಂಕೆಯಿದ್ದು ಉನ್ನತ ಮಟ್ಟದ ತನಿಖೆ ನಡೆಸಬೇಕು.
    ನಿತ್ಯ ಓದುಗ ಕೇಂದ್ರ ಗ್ರಂಥಾಲಯ, ತುಮಕೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts