More

    ಲಕ್ಷ್ಮೀನರಸಿಂಹಸ್ವಾಮಿ ವಾರ್ಷಿಕೋತ್ಸವ ಸಂಪನ್ನ

    ಕೊರಟಗೆರೆ: ತಾಲೂಕಿನ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಆವರಣದಲ್ಲಿ ಮಂಗಳವಾರ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ 4ನೇ ವಾಷಿಕೋತ್ಸವ ವಿಜೃಂಭಣೆಯಿಂದ ನೆರವೇರಿತು.

    ಮಠದ ಆವರಣದಲ್ಲಿ ಸಭಾಭವನ, ಅಣ್ಣಪೂಣೇಶ್ವರಿ ದಾಸೋಹ ನಿಲಯ ಉದ್ಘಾಟಿಸಿದ ಮಧುಗಿರಿ ಶಾಸಕ ಎಂ.ವಿ ವೀರಭದ್ರಯ್ಯ, ಮಠವೆನ್ನುವುದು ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ, ಅದು ಒಂದು ಸಮುದಾಯದ
    ಆಶ್ರಯ ಪಡೆದು ಎಲ್ಲ ಸಮುದಾಯಗಳಿಗೆ ಆಶ್ರಯ ನೀಡುತ್ತದೆ ಎಂದರು. ಶ್ರೀಮಠ ಕೆಲವೇ ವರ್ಷಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದು, ಡಾ. ಹನುಮಂತನಾಥ ಸ್ವಾಮೀಜಿ ಅವರ ಸಮಾಜ ಕಾರ್ಯ ಮೆಚ್ಚುವಂತಹ ವಿಷಯ ಎಂದರು.

    ಒಬಿಸಿ ಮೀಸಲಾತಿ ಹೋರಾಟಕ್ಕಾಗಿ ನಾವು ಕುಂಚಿಗರು ಎಂದು ಹೇಳುತ್ತೇವೆ. ಆದರೆ, ಮಠಕ್ಕೆ ಎಲ್ಲ ಸಮುದಾಯದ ಭಕ್ತರು ಇದ್ದಾರೆ ಎಂದು ಮಠದ ಗೌರವಾಧ್ಯಕ್ಷ ಎನ್. ದೇವರಾಜಯ್ಯ ತಿಳಿಸಿದರು.
    ಜಿಪಂ ಸದಸ್ಯ ಶಿವರಾಮಯ್ಯ, ಜಿಲ್ಲಾ ಜೆಡಿಎಸ್ ಕಾಯದರ್ಶಿ ಎಚ್.ಕೆ ಮಹಾಲಿಂಗಪ್ಪ, ಕೌಶಲಾಭಿವೃದ್ಧಿ ನಿಗಮ ವಾಜಿ ಅಧ್ಯಕ್ಷ ಮುರಳೀಧರ್ ಹಾಲಪ್ಪ, ಜಿಪಂ ವಾಜಿ ಸದಸ್ಯ ಲಕ್ಷ್ಮೀಪತಿ ಮಾತನಾಡಿದರು.
    ರಾಜ್ಯ ಕುಂಚಿಟಿಗರ ಸಂದ ಅಧ್ಯಕ್ಷ ವಿನಯ್ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ಮಲ್ಲಮ್ಮ, ಮಡಕಶಿರಾ ತಾಲೂಕು ಸಂಘದ ಅಧ್ಯಕ್ಷ ಅನಂತರಾಜು, ನಿವೃತ್ತ ಡಿವೈಎಸ್‌ಪಿ ರಾವಾಂಜನಪ್ಪ, ದೇವಾಲಯ ಸಮಿತಿಯ ನರಸಿಂಹಮೂರ್ತಿ, ತಾಪಂ ವಾಜಿ ಅಧ್ಯಕ್ಷ ಆರ್.ಎಸ್.ರಾಜಣ್ಣ, , ಮುಖಂಡರಾದ ಗುಂಡಿನಪಾಳ್ಯ ಕಾಮರಾಜು, ಎ.ಪಿ ಲಕ್ಷ್ಮೀಪ್ರಸಾದ ಇತರರಿದ್ದರು.
    ರಾಜ್ಯಾದ್ಯಂತ ಶಾಖಾ ಮಠಗಳ ಸ್ಥಾಪನೆ
    ರಾಜ್ಯದಲ್ಲಿ 15ಕ್ಕೂ ಹೆಚ್ಚು ಕುಂಚಿಟಿಗ ಮಹಾಸಂಸ್ಥಾನ ಮಠದ ಶಾಖಾಮಠಗಳ ಸ್ಥಾಪಿಸಲಿದ್ದು, ತಾಲೂಕಿನ ಮಠದ ಆವರಣದಲ್ಲಿ ಕುಂಚಿಟಿಗರ ಕಾಶಿ ಸ್ಥಾಪಿಸಲಾಗುತ್ತದೆ. 4 ಕೋಟಿ ರೂ.ಗಳ ವೆಚ್ಚದಲ್ಲಿ ಕುಂಚಿಟಿಗ ಇಂಟರ್‌ನ್ಯಾಷನಲ್ ಶಾಲೆ, ವಾಚನಾಲಯ, ಸಂಸ್ಕೃತ ಶಾಲೆ, ಅನಾಥಾಶ್ರಮ ನಿರ್ಮಿಸಲಾಗುತ್ತಿದೆ. ಸಮುದಾಯದ ಅಭಿವೃದ್ಧಿಗಾಗಿ ಹೋರಾಟ ವಾಡುವುದಾಗಿ ಕುಂಚಿಟಿಗ ಮಹಾಸಂಸ್ಥನ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥಸ್ವಾಮೀಜಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts