More

    ಲಕ್ಷ್ಮೀ ಕಟಾಕ್ಷಕ್ಕೆ ಸಿಎಸ್​ಆರ್ ಫಂಡ್ ಮೊರೆ

    ಮರಿದೇವ ಹೂಗಾರ ಹುಬ್ಬಳ್ಳಿ

    ಇಲ್ಲಿನ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಕಿಮ್್ಸ) ಹಣಕಾಸು ಬಿಕ್ಕಟ್ಟು ಕಾಯಂ ಸಮಸ್ಯೆ. ಸರ್ಕಾರದ ಮೊರೆ ಹೋಗುವುದು ಬಿಟ್ಟರೆ ಬೇರೆ ದಾರಿಯಿಲ್ಲ. ಅದರೊಂದಿಗೆ, ಕಿಮ್್ಸ ಆಡಳಿತ ಮಂಡಳಿ ಬೇರೆಯದ್ದೇ ದಾರಿ ಕಂಡುಕೊಳ್ಳಲು ಉತ್ಸುಕವಾಗಿದೆ. ‘ಲಕ್ಷ್ಮೀ’ ಕೃಪಾಕಟಾಕ್ಷ ಪಡೆಯಲು, ಕಾಪೋರೆಟ್ ವಲಯದ ಸಿಎಸ್​ಆರ್ ಅನುದಾನಕ್ಕೆ ಮೊರೆ ಹೋಗಲು ನಿರ್ಧರಿಸಿದೆ.

    1200 ಬೆಡ್​ಗಳಿರುವ ಕಿಮ್ಸ್​ನಲ್ಲಿ ನಿತ್ಯ 1600ಕ್ಕೂ ಹೆಚ್ಚು ಹೊರ ರೋಗಿಗಳು, 500ಕ್ಕೂ ಹೆಚ್ಚು ಒಳ ರೋಗಿಗಳು ಚಿಕಿತ್ಸೆಗೆ ದಾಖಲಾಗುತ್ತಾರೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕ್ಯಾನ್ಸರ್ ವಿಭಾಗ, ತಾಯಿ ಮತ್ತು ಮಗು ಆಸ್ಪತ್ರೆ, ಹೃದ್ರೋಗ ಕೇಂದ್ರ ಹೀಗೆ ಕೆಲ ಪ್ರತ್ಯೇಕ ಚಿಕಿತ್ಸಾ ವಿಭಾಗಗಳಿವೆ. ಅವುಗಳ ನಿರ್ವಹಣೆಗೆ ರಾಜ್ಯ ಸರ್ಕಾರ ತನ್ನ ಬಜೆಟ್​ನಲ್ಲಿ 140 ಕೋಟಿ ರೂ.ಗೂ ಹೆಚ್ಚು ಅನುದಾನ ಮೀಸಲಿಡುತ್ತದೆ. ಆದರೆ, 120 ಕೋಟಿ ರೂ.ಗೂ ಅಧಿಕ ಹಣ ವೇತನಕ್ಕಾಗಿಯೇ ಖರ್ಚಾಗುತ್ತಿದೆ. ಆಯಾ ಕಾಲಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುವ ಅನುದಾನ ಕಿಮ್್ಸ ನಿರ್ವಹಣೆಗೆ ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದೆ.

    ಕಿಮ್್ಸ ಆರಂಭದಿಂದ ಇದುವರೆಗೆ ಇಲ್ಲಿ ಎಂಬಿಬಿಎಸ್, ಸ್ನಾತಕೋತ್ತರ ಪದವಿ ಕಲಿತು ಹೊರ ಹೋಗಿರುವ ವೈದ್ಯಕೀಯ ವಿದ್ಯಾರ್ಥಿಗಳು ವಿದೇಶದಲ್ಲೂ ನೆಲೆಸಿದ್ದಾರೆ. ಅವರಲ್ಲಿ ಕೆಲವರು ಸ್ಥಾಪಿಸಿರುವ ಸಂಘ-ಸಂಸ್ಥೆಗಳಿಂದ ಅನುದಾನ ನೀಡಲು ಸಿದ್ಧರಿದ್ದಾರೆ. ಈ ಮಧ್ಯೆ ಹೊಸ ವಲಯದ ಹುಡುಕಾಟ ನಡೆದಿದೆ. ಅದೂ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿರುವ ಉದ್ಯಮಿಗಳ ಬಳಿ ಹೋಗಿ ಸಿಎಸ್​ಆರ್ ಅನುದಾನ ತರಲು ಸಿದ್ಧತೆ ನಡೆದಿದೆ. ಆಗಲಾದರೂ ಕಿಮ್್ಸ ನಿರ್ವಹಣೆ ಸಲೀಸಾಗಬಹುದು ಎಂಬುದು ತಜ್ಞ ವೈದ್ಯರ ಅಭಿಪ್ರಾಯ. ಆದರೆ, ಕಾಪೋರೇಟ್ ವಲಯ ಇದಕ್ಕೆ ಸಿದ್ಧವಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

    ಕೇಂದ್ರ ಸಚಿವ ನಿಸ್ಸೀಮರು: ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ ಅವರು ಸಿಎಸ್​ಆರ್ ಅನುದಾನ ತರುವಲ್ಲಿ ನಿಸ್ಸೀಮರು. ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಅವರು ಸಿಎಸ್​ಆರ್ ನೆರವಿನಿಂದಲೇ ಮಾಡಿಸಿದ್ದಾರೆ. ಕಿಮ್್ಸ ಆಡಳಿತ ಮಂಡಳಿಯವರು ಸಹ ಕೇಂದ್ರ ಸಚಿವರನ್ನು ಒಮ್ಮೆ ಭೇಟಿಯಾಗಿ ಸಿಎಸ್​ಆರ್ ನೆರವು ಕೊಡಿಸುವಂತೆ ಕೋರಿಕೊಳ್ಳುವ ಚಿಂತನೆ ನಡೆಸಿದೆ.

    ಕಾಪೋರೇಟ್ ವಲಯ ಕಿಮ್್ಸ ಅಭಿವೃದ್ಧಿಗೆ ಸಿಎಸ್​ಆರ್ ಅನುದಾನದ ಸಹಾಯ ಹಸ್ತ ಚಾಚಲಿದೆ. ಆದರೆ, ಅವಳಿ ನಗರದ ಉದ್ಯಮಿಗಳಿಂದಲೇ ದೊಡ್ಡ ಪ್ರಮಾಣದಲ್ಲಿ ಅನುದಾನ ಸಿಗುತ್ತದೆ ಎನ್ನಲಾಗದು. ಉದ್ಯಮಿಗಳು ಸಿಎಸ್​ಆರ್ ಅನುದಾನ ನೀಡಿದರೆ ನಿಸ್ಸಂಶಯವಾಗಿ ಕಿಮ್್ಸ ಮತ್ತಷ್ಟು ಅಭಿವೃದ್ಧಿಯಾಗುತ್ತದೆ.
    | ಶಶಿಧರ ಶೆಟ್ಟರ್ ಹುಬ್ಬಳ್ಳಿ ಟೈ ಅಧ್ಯಕ್ಷ

    ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಮತ್ತೊಮ್ಮೆ ಭೇಟಿಯಾಗಿ ಸಿಎಸ್​ಆರ್ ಅನುದಾನ ಕೊಡಿಸಲು ಕೋರುತ್ತೇವೆ. ಇಲ್ಲಿನ ಉದ್ಯಮಿಗಳ ನೆರವನ್ನೂ ಕೇಳುತ್ತೇವೆ. ಕಿಮ್್ಸ ಅಭಿವೃದ್ಧಿಯಾದರೆ ಉತ್ತರ ಕರ್ನಾಟಕದ ಜನರಿಗೆ ಮತ್ತಷ್ಟು ಅನುಕೂಲವಾಗಲಿದೆ.
    | ಡಾ. ರಾಮಲಿಂಗಪ್ಪ ಅಂಟರತಾನಿ ಕಿಮ್್ಸ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts