More

    ಲಕ್ಷಣಗಳಿಲ್ಲದವರಿಗೆ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ

    ಗೌರಿಬಿದನೂರು: ತಾಲೂಕಿನ ವಾಟದಹೊಸಹಳ್ಳಿಯ ಕಸ್ತೂರಿಬಾಯಿ ವಸತಿ ಶಾಲೆಯಲ್ಲಿ ತೆರೆದಿರುವ ಕರೊನಾ ಕೇರ್ ಸೆಂಟರ್‌ಗೆ ಶನಿವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಆರ್.ಲತಾ, ವ್ಯವಸ್ಥೆ ಹಾಗೂ ಟಾಸ್‌‌ಕೆೆರ್ಸ್‌ನ ಕಾರ್ಯವೈಖರಿ ಪರಿಶೀಲನೆ ನಡೆಸಿದರು.

    ಗುಣಲಕ್ಷಣಗಳಿಲ್ಲ ಸೋಂಕಿತರಿಗೆ ಚಿಕಿತ್ಸೆ ನೀಡಲು ಕೇರ್ ಸೆಂಟರ್‌ಗಳನ್ನು ತೆರೆಯಲಾಗಿದ್ದು, ಅಗತ್ಯ ಸೌಲಭ್ಯ ಒದಗಿಸಲಾಗುತ್ತಿದೆ, ಸೋಂಕು ನಿಯಂತ್ರಣ ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ಟಾಸ್‌‌ಕೆೆರ್ಸ್ ರಚನೆ ಮಾಡಲಾಗಿದೆ, ಅರಿವು ಮೂಡಿಸುವ ಜತೆಗೆ ನಿಯಮ ಉಲ್ಲಂಸುವವರಿಗೆ ದಂಡ ವಿಧಿಸುವಂತೆ ಸೂಚಿಸಿದರು.

    ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು ಜನರ ಕಷ್ಟಗಳಿಗೆ ಸ್ಪಂದಿಸಬೇಕು. ಸಮಸ್ಯೆಗಳಿದ್ದರೆ ಜಿಲ್ಲಾಡಳಿತದ ಗಮನಕ್ಕೆ ತರುವಂತೆ ನೋಡಲ್ ಅಧಿಕಾರಿ ತೇಜ್ ಆನಂದರೆಡ್ಡಿ ತಿಳಿಸಿದರು.

    ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್, ತಹಸೀಲ್ದಾರ್ ಎಂ.ರಾಜಣ್ಣ, ತಾಪಂ ಇಒ ಎನ್. ಮುನಿರಾಜು, ಸಿಪಿಐ ಎಸ್. ರವಿ, ಪಿಎಸ್‌ಐ ಮೋಹನ್, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶೇಷಾದ್ರಿ, ರಾಜಸ್ವ ನಿರೀಕ್ಷಕ ಪ್ರಸಾದ್ ಸಮಾಜ ಕಲ್ಯಾಣ ಇಲಾಖೆ ನಿಲಯ ಪಾಲಕ ಅಂಜಿನಪ್ಪ ಇತರರಿದ್ದರು.

    ಸೌಲಭ್ಯಗಳ ಪರಿಶೀಲನೆ: ಗುಡಿಬಂಡೆ ತಾಲೂಕಿನ ಕೋವಿಡ್ ಕೇರ್ ಸೆಂಟರ್ ಹಾಗೂ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿದ ಡಿಸಿ ಅಗತ್ಯ ಸೌಲಭ್ಯಗಳ ಪರಿಶೀಲನೆ ನಡೆಸಿದರು. ತಾಲೂಕಿನಲ್ಲಿ ಇದುವರೆಗೂ 19 ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿದೆ. ಮುಂಜಾಗ್ರತಾ ಕ್ರಮವಾಗಿ ಕೇರ್ ಸೆಂಟರ್‌ಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts