More

    ನಿರ್ವಹಣೆ ಇಲ್ಲದೆ ಬಳಲುತ್ತಿದೆ ಪಶು ಆಸ್ಪತ್ರೆ

    ಶಿವಕುಮಾರ ಶಶಿಮಠ ಗಜೇಂದ್ರಗಡ

    ಪಟ್ಟಣದಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ನೀಡುವ ಸರ್ಕಾರಿ ಪಶು ಆಸ್ಪತ್ರೆ ಸೂಕ್ತ ನಿರ್ವಹಣೆ ಇಲ್ಲದ್ದರಿಂದ ಬಳಲುತ್ತಿದೆ. ಆಸ್ಪತ್ರೆ ವ್ಯಾಪ್ತಿಯ 14 ಗ್ರಾಮಗಳ ಸಾವಿರಾರು ಜಾನುವಾರುಗಳ ಆರೋಗ್ಯ ರಕ್ಷಣೆ ಕೇಂದ್ರವಾಗಿದೆ.

    ನಿರ್ವಹಣೆ ಕೊರತೆಯಿಂದ ಆಸ್ಪತ್ರೆ ಆವರಣದಲ್ಲಿ ಮಳೆ ನೀರು ನಿಲ್ಲುತ್ತಿದ್ದು, ಕೆಸರು ಗದ್ದೆಯಂತಾಗಿದೆ. ಅದರಲ್ಲಿಯೇ ರೈತರು ಜಾನá-ವಾರá-ಗಳಿಗೆ ಚಿಕಿತ್ಸೆ ಕೊಡಿಸá-ತ್ತಿದ್ದಾರೆ. ಗಜೇಂದ್ರಗಡದ ಪಶುಆಸ್ಪತ್ರೆಗೆ ಗಜೇಂದ್ರಗಡ, ಮಾಟರಂಗಿ, ಮ್ಯಾಕಲಝುರಿ, ನಾಗರಸಿಕೊಪ್ಪ, ರಾಮಾಪುರ, ವದೇಗೋಳ, ವೀರಾಪುರ, ಜಿಗೇರಿ, ಕುಂಟೋಜಿ, ಚಿಲಝುರಿ, ಗೋಗೇರಿ, ಗೌಡಗೇರಿ, ಬೆಣಚಮಟ್ಟಿ, ಹಿರೇಕೊಪ್ಪ ಒಳಪಡುತ್ತವೆ. ಒಟ್ಟು 737 ಆಕಳುಗಳು, 1,469 ಎಮ್ಮೆ, 18,411 ಕುರಿ, 4,299 ಮೇಕೆ , 1039 ಹಂದಿಗಳು ಇವೆ.

    5 ವರ್ಷಗಳ ಹಿಂದೆ ನಿರ್ವಿುಸಿದ ಪಶು ಆಸ್ಪತ್ರೆ ಹೊರಗೆ ಅವೈಜ್ಞಾನಿಕ ಕಾಂಪೌಂಡ್ ನಿರ್ವಿುಸಲಾಗಿತ್ತು. ರೈತರ ಆಗ್ರಹದ ಮೇರೆಗೆ ಕಾಂಪೌಂಡ್ ಒಡೆದು ಹಾಕಿದ್ದು, ಅದನ್ನು ಈವರೆಗೂ ಮರು ನಿರ್ಮಾಣ ಮಾಡಿಲ್ಲ. ಆರೋಗ್ಯ ಸಮಸ್ಯೆ ಎದá-ರಾದ ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ಮೂರು ಸಲ ಅಲೆದಾಡಬೇಕಿದೆ. ವೈದ್ಯರ ಕೊರತೆಯಿಂದ ಸಹಾಯಕರೇ ದನಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹೀಗಾಗಿ ಬೇಗ ಸಿಬ್ಬಂದಿ ನೇಮಕ ಮಾಡಬೇಕು ಎನ್ನುತ್ತಾರೆ ಕುಂಟೋಜಿ ಗ್ರಾಮದ ರೈತ ಯಮನಪ್ಪ ಅಬ್ಬಿಗೇರಿ.

    ಸಿಬ್ಬಂದಿ ಕೊರತೆ: ಪಶು ಆಸ್ಪತ್ರೆಯಲ್ಲಿ ಒಬ್ಬ ಸಹಾಯಕ ನಿರ್ದೇಶಕ, ಒಬ್ಬ ಮುಖ್ಯ ಪಶು ವೈದ್ಯಾಧಿಕಾರಿ, ಒಬ್ಬ ಪಶು ವೈದ್ಯಕೀಯ ಸಹಾಯಕ, ಒಬ್ಬ ಜಾನುವಾರು ಅಧಿಕಾರಿ, ಇಬ್ಬರು ಡಿ ದರ್ಜೆ ನೌಕರರು, ಒಬ್ಬ ಎಫ್​ಡಿಸಿ, ಒಬ್ಬ ಕಂಪ್ಯೂಟರ್ ಆಪರೇಟರ್ ಸೇರಿ ಒಟ್ಟು 8 ಜನ ಸಿಬ್ಬಂದಿ ಇರಬೇಕು. ಅದರಲ್ಲಿ ಒಬ್ಬ ಮುಖ್ಯ ಪಶು ವೈದ್ಯಾಧಿಕಾರಿ ಹಾಗೂ ಒಬ್ಬ ಡಿ ದರ್ಜೆ ನೌಕರ ಬಿಟ್ಟರೆ ಉಳಿದೆಲ್ಲ ಹುದ್ದೆ ಖಾಲಿ ಇವೆ.

    ಗಜೇಂದ್ರಗಡ ಪಶು ಆಸ್ಪತ್ರೆಯ ಮುಂದೆ ಕಾಂಕ್ರಿಟ್ ಹಾಕಿಸಲು ಇಲಾಖೆಯಲ್ಲಿ ಅನುದಾನವಿಲ್ಲ. ಪುರಸಭೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲಿ ಕಾಂಕ್ರಿಟ್ ಮಾಡಲಾಗುತ್ತದೆ. ಜಿಲ್ಲೆಯ ಪಶು ಆಸ್ಪತ್ರೆಗಳಲ್ಲಿ 384 ಸಿಬ್ಬಂದಿ ಇರಬೇಕು. ಅದರಲ್ಲಿ 112 ಸಿಬ್ಬಂದಿ ಇದ್ದಾರೆ. ಇಲಾಖೆ, ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
    ಎಚ್. ಬಿ. ಹುಲಗಣ್ಣವರ ಜಿಲ್ಲಾ ಉಪ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts