More

    ರೋಟರಿ ಸಂಸ್ಥೆಯಿಂದ ಸಮಾಜಮುಖಿ ಕೆಲಸ

    ವಿಜಯಪುರ: ಕೇವಲ ಎರಡು-ಮೂರು ಸದಸ್ಯರಿಂದ ಆರಂಭವಾಗಿದ್ದ ರೋಟರಿ ಸಂಸ್ಥೆ ಈಗ ಹೆಮ್ಮರವಾಗಿ ಬೆಳೆದು ನಿಂತಿದೆ. ಇಂದು 238 ರಾಷ್ಟ್ರಗಳಲ್ಲಿ ರೋಟರಿ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಸಾಕಷ್ಟು ಜನರ ಜೀವನಕ್ಕೆ ನೆರವಾಗಿದೆ ಎಂದು ರೋಟರಿ ಸಂಸ್ಥೆ ಪದಗ್ರಹಣ ಸಮಾರಂಭದ ಅಧಿಕಾರಿ ಡಾ. ಎಸ್.ಎಸ್. ನಾಗಠಾಣ ಹೇಳಿದರು.

    ನಗರದ ಖಾಸಗಿ ಹೋಟೆಲ್‌ನಲ್ಲಿ ಇತ್ತೀಚೆಗೆ ನಡೆದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿ, ರೋಟರಿ ಸಂಸ್ಥೆ ವರ್ಷವಿಡಿ ಶೈಕ್ಷಣಿಕ, ಸಾಮಾಜಿಕ, ವೈದ್ಯಕೀಯ ಸೇವೆ, ವೃತ್ತಿ ನಿರತರನ್ನು ಗುರುತಿಸುವ ಕೆಲಸಮಾಡುತ್ತಿದೆ. ವಿವಿಧ ಸ್ತರಗಳಿಂದ ಒಂದೇ ವೇದಿಕೆಯಡಿ ಸೇರಿದ ಸಮಾನ ಮನಸ್ಕರಿಂದ ಈ ಕೆಲಸ ನಡೆಯುತ್ತಿದ್ದು, ಈ ಸಲದ ಪದಾಧಿಕಾರಿಗಳು ಸಮಾಜಕ್ಕಾಗಿ ತಮ್ಮ ಸೇವೆ ಸಲ್ಲಿಸಲಿದ್ದಾರೆ ಎಂದರು.

    ಡಾ. ವಾಸುದೇವ ಬೆಂಡಿಗೇರಿ ಮಾತನಾಡಿ, ರೋಟರಿ ಸಂಸ್ಥೆಯಲ್ಲಿ ಫ್ರೆಂಡ್‌ಶಿಪ್-ೆಲೋಶಿಪ್ ತತ್ವದಡಿಯಲ್ಲಿ ಎಲ್ಲರೂ ಸಂತೋಷದಿಂದ ಇದ್ದು, ಇತರರನ್ನು ಸಂತೋಷದಿಂದ ಇಡಲು ಪ್ರಯತ್ನಿಸಬೇಕು. ಬಡವರು, ನಿರ್ಗತಿಕರಿಗೆ ಹೆಚ್ಚಿನ ಸೇವೆ ಒದಗಿಸಬೇಕು. ಒಟ್ಟಾರೆ ಸಮಾಜದಲ್ಲಿ ಉತ್ತಮ ಸೌಹಾರ್ದತೆ ನಿರ್ಮಿಸಬೇಕು ಎಂದರು.

    ನೂತನವಾಗಿ ಆಯ್ಕೆಯಾದ ಜಿ. ಎಸ್. ಕುಲಕರ್ಣಿ ಮಾತನಾಡಿದರು. ವಲಯ ಸಮನ್ವಯಾಧಿಕಾರಿ ಎಸ್.ಎಂ. ಪವಾರ, ಕಾರ್ಯದರ್ಶಿ ಚಂದ್ರಶೇಖರ ಸಿಂಧೂರ, ಪದಾಧಿಕಾರಿಗಳಾದ ಕೃಷ್ಣಾ ಗುನ್ಹಾಳಕರ, ರುದ್ರಗೌಡ ಪಾಟೀಲ, ರಾಕೇಶ ಜೋಶಿ, ರವೀಂದ್ರ ಬೆಳ್ಳಿ, ಇಮಾಮ ಹುಲ್ಲೂರ, ಗುರಲಿಂಗಪ್ಪ ಅಂಗಡಿ, ರಾಜೇಂದ್ರ ಜೋಶಿ, ಆನಂದ ಗುಜರಿ, ಲಕ್ಷ್ಮಣ ನಗಾಣೆ, ಶ್ವೇತಾ ಗುನ್ಹಾಳಕರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts