More

    ರೈಲು ಬೋಗಿಯಂತೆ ಕಂಗೊಳಿಸಿದ ಶಾಲೆ

    ಧಾರವಾಡ: ಕರೊನಾ ಹಾವಳಿಯಿಂದ ಬಂದ್ ಆಗಿರುವ ಶಾಲೆಗಳು ಕೆಲ ದಿನಗಳಲ್ಲೇ ಆರಂಭವಾಗಬಹುದು ಎಂಬ ಆಶಯದೊಂದಿಗೆ ಸ್ವಚ್ಛತಾ ಕಾರ್ಯ ನಡೆದಿದೆ. ಈ ಸಂದರ್ಭದಲ್ಲಿ ಇಲ್ಲಿನ ಸರ್ಕಾರಿ ಶಾಲೆಯೊಂದು ವಿನೂತನ ರೀತಿಯಲ್ಲಿ ಸಿದ್ಧವಾಗಿ ಎಲ್ಲರ ಗಮನ ಸೆಳೆದಿದೆ.

    ಹೆಬ್ಬಳ್ಳಿ ರಸ್ತೆ ದುರ್ಗಾ ಕಾಲನಿ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗೆ ರೈಲು ಬೋಗಿ ಮಾದರಿಯಲ್ಲಿ ಬಣ್ಣ ಹಚ್ಚಿ, ಆಕರ್ಷಕಗೊಳಿಸಲಾಗಿದೆ.

    2004ರಲ್ಲಿ ಸ್ಥಾಪನೆಯಾದ ಶಾಲೆಯಲ್ಲಿ ಅಂಗನವಾಡಿಯಿಂದ 5 ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿದೆ. ಶಾಲೆಯ 3 ಕೊಠಡಿ ಗೋಡೆಗಳಿಗೆ ನಗರದ ಚಿತ್ರಕಲಾ ಶಿಕ್ಷಕರು, ಕಲಾವಿದರು ರೈಲು ಬೋಗಿ ಮಾದರಿಯ ಚಿತ್ರ ಬರೆದು ಬಣ್ಣ ಬಳೆದಿದ್ದಾರೆ. ಒಂದು ಬದಿಯಿಂದ ರೈಲಿನ ಇಂಜಿನ್ ಚಿತ್ರದಿಂದ ಪ್ರಾರಂಭಗೊಂಡು, ಬೋಗಿಗಳು, ಕಿಟಕಿಗಳನ್ನು ಬಿಡಿಸಿದ್ದು ಥೇಟ್ ರೈಲು ಗಾಡಿಯಂತೆ ಕಾಣುತ್ತಿದೆ. ಇದರ ಜತೆಗೆ ಶಾಲಾ ಕಾಂಪೌಂಡ್ ಮೇಲೆ ಮಕ್ಕಳು ಯೋಗಾಸನ ಮಾಡುವ ಚಿತ್ರಗಳನ್ನೂ ಬಿಡಿಸಿದ್ದಾರೆ.

    ಶಾಲೆಗಳು ಸದಾ ಶುಚಿತ್ವ, ಕಲಿಕೆಗೆ ಪೂರಕವಾಗಿರುವಂತೆ ನೋಡಿಕೊಳ್ಳಲು ಅಧಿಕಾರಿಗಳು ಶಿಕ್ಷಕರಿಗೆ ಸೂಚಿಸಿದಂತೆ ಸಾರ್ವಜನಿಕರ ಸಹಕಾರದಲ್ಲಿ ಶಾಲೆ ರೂಪ ಬದಲಿಸಲಾಗಿದೆ. ಈ ಕಾರ್ಯಕ್ಕೆ ನಗರದ ವ್ಯಾಪಾರಸ್ಥ ರವಿ ಯಲಿಗಾರ ಹಾಗೂ ತಂಡದವರು ಕೈ ಜೋಡಿಸಿದ್ದಾರೆ. ಹೀಗೆ ಜನರ ಸಹಕಾರದಲ್ಲಿ ಸರ್ಕಾರಿ ಶಾಲೆ ಹೊಸ ರೂಪ ಪಡೆದಿದೆ.

    ಅಧಿಕಾರಿಗಳ ಸೂಚನೆಯಂತೆ ಶಾಲೆಯನ್ನು ಅಂದವಾಗಿಡುವ ಕೆಲಸ ಮಾಡಿದ್ದೇವೆ. ನಮ್ಮ ಕಾರ್ಯ ವಿನೂತನವಾಗಿರಲಿ ಎಂಬ ಕಾರಣಕ್ಕೆ ರೈಲು ಬೋಗಿ ಮಾದರಿಯಲ್ಲಿ ಬಣ್ಣ ಹಚ್ಚಲಾಗಿದೆ. ರವಿ ಯಲಿಗಾರ ಹಾಗೂ ಅವರ ಗೆಳೆಯರು ಬಣ್ಣ ಕೊಡಿಸಿ ಉಪಕರಿಸಿದ್ದಾರೆ. ಇದೀಗ ನಮ್ಮ ಶಾಲೆ ಎಲ್ಲರ ಗಮನ ಸೆಳೆಯುತ್ತಿದ್ದು, ಬೇರೆ ಶಾಲೆಯವರು ಬಂದ ವೀಕ್ಷಿಸುತ್ತಿದ್ದಾರೆ. |ಎನ್.ಬಿ. ದ್ಯಾಪುರ, ಶಾಲೆ ಶಿಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts