More

    ರೈಲು ನಿಲ್ದಾಣ ರಸ್ತೆಯಲ್ಲಿ ಬೇಕಾಬಿಟ್ಟಿ ವಾಹನಗಳ ನಿಲುಗಡೆ

    ರಾಣೆಬೆನ್ನೂರ: ನಗರದ ಸಂಗಮ್ ವೃತ್ತದಿಂದ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಅಕ್ಕಪಕ್ಕದಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುತ್ತಿರುವುದರಿಂದ ಇತರ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ.

    ಈ ರಸ್ತೆಗೆ ಹೊಂದಿಕೊಂಡು ಬ್ಯಾಂಕ್, ಕಲ್ಯಾಣ ಮಂಟಪ, ದೇವಸ್ಥಾನಗಳಿವೆ. ಹೀಗಾಗಿ ನಿತ್ಯವೂ ನೂರಾರು ಜನರು ಈ ರಸ್ತೆ ಮಾರ್ಗವಾಗಿ ಓಡಾಡುತ್ತಾರೆ. ಅಲ್ಲದೆ, ರೈಲು ಬಂದಾಗ ಪ್ರಯಾಣಿಕರ ಓಡಾಟದಿಂದಾಗಿ ರಸ್ತೆಯಲ್ಲಿ ವಾಹನಗಳ ಸಂಚಾರ ಇನ್ನೂ ಅಧಿಕವಾಗುತ್ತದೆ.

    ಬೈಕ್ ಹಾಗೂ ಕಾರು ಚಾಲಕರು ರಸ್ತೆಯ ವಿಭಜಕಕ್ಕೆ ಹೊಂದಿಕೊಂಡು ಬೆಳೆದಿರುವ ಗಿಡಗಳ ನೆರಳಲ್ಲಿ ವಾಹನಗಳನ್ನು ರ್ಪಾಂಗ್ ಮಾಡುತ್ತಿದ್ದಾರೆ. ಹೀಗಾಗಿ ಆಟೋರಿಕ್ಷಾ ಹೋಗಲು ಸಹ ತೊಂದರೆ ಅನುಭವಿಸುವಂತಾಗಿದೆ. ಕಲ್ಯಾಣ ಮಂಟಪದಲ್ಲಿ ಮದುವೆ ಹಾಗೂ ಇತರ ಸಮಾರಂಭವಿದ್ದಾಗ ಬೈಕ್ ಓಡಾಡುವುದು ಕಷ್ಟವಾಗಿದೆ.

    ರಸ್ತೆ ಮಧ್ಯೆ ವಾಹನಗಳನ್ನು ರ್ಪಾಂಗ್ ಮಾಡುತ್ತಿರುವ ಕುರಿತು ಕ್ರಮ ಕೈಗೊಳ್ಳುವಂತೆ ನಿವಾಸಿಗಳು ಪೊಲೀಸರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಚಾರ ಠಾಣೆ ಪೊಲೀಸರು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇತರ ವಾಹನಗಳ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಪ್ರಜ್ಞಾವಂತರು ಆಗ್ರಹಿಸಿದ್ದಾರೆ.

    ರೈಲು ನಿಲ್ದಾಣದ ರಸ್ತೆಯಲ್ಲಿ ವಾಹನಗಳನ್ನು ರಸ್ತೆ ಮಧ್ಯೆದಲ್ಲಿಯೇ ರ್ಪಾಂಗ್ ಮಾಡುವುದರಿಂದ ಪಾದಚಾರಿಗಳಿಗೆ ಹಾಗೂ ಇತರ ವಾಹನ ಓಡಾಟಕ್ಕೆ ತೊಂದರೆ ಆಗುತ್ತಿದೆ. ಈ ಬಗ್ಗೆ ಸಂಚಾರ ಠಾಣೆ ಪೊಲೀಸರು ಸೂಕ್ತ ಕ್ರಮ ಕೈಗೊಂಡು ರಸ್ತೆ ಮಧ್ಯೆದಲ್ಲಿ ರ್ಪಾಂಗ್ ಮಾಡುತ್ತಿರುವವರಿಗೆ ದಂಡ ವಿಧಿಸಬೇಕು.

    | ಸಂತೋಷ ಎಂ. ಸ್ಥಳೀಯ ನಿವಾಸಿ

    ರೈಲ್ವೆ ನಿಲ್ದಾಣದ ರಸ್ತೆಯ ಅಕ್ಕಪಕ್ಕದಲ್ಲಿ ವಾಹನ ರ್ಪಾಂಗ್ ಮಾಡದಂತೆ ಈಗಾಗಲೇ ಒಂದು ಬಾರಿ ಸೂಚನೆ ನೀಡಲಾಗಿದೆ. ಆದರೂ ಜನತೆ ಎಚ್ಚೆತ್ತುಕೊಂಡಿಲ್ಲ. ಆ ಭಾಗದಲ್ಲಿ ಕೂಡಲೆ ಸಿಬ್ಬಂದಿ ನೇಮಕ ಮಾಡಿ, ರಸ್ತೆ ಮೇಲೆ ವಾಹನ ರ್ಪಾಂಗ್ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.

    | ಪ್ರಕಾಶ ಶಿಡ್ಲಣ್ಣವರ ಸಂಚಾರ ಠಾಣೆ ಪಿಎಸ್​ಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts