More

    ರೈಲು ನಿಲ್ದಾಣ ಭಣಭಣ

    ಹುಬ್ಬಳ್ಳಿ: ಕರೊನಾ ವೈರಸ್ ಹರಡುವ ಆತಂಕ ರೈಲ್ವೆ ಪ್ರಯಾಣಿಕರ ಮೇಲೆಯೂ ಬೀರಿದ್ದು, ರೈಲು ನಿಲ್ದಾಣಗಳು, ರೈಲುಗಳು ಪ್ರಯಾಣಿಕರಿಲ್ಲದೆ ಬಿಕೊ ಎನ್ನುತ್ತಿವೆ.

    ಕಳೆದ 4-5 ದಿನಗಳ ಹಿಂದೆಯಷ್ಟೇ ಪ್ರಯಾಣಿಕರಿಂದಾಗಿ ಸದಾ ದಟ್ಟಣೆಯಿಂದ ಕೂಡಿರುತ್ತಿದ್ದ ರೈಲು ನಿಲ್ದಾಣಗಳಲ್ಲಿ ಈಗ ಕಾಣಿಸುತ್ತಿರುವುದು ಬೆರಳೆಣಿಕೆ ಪ್ರಯಾಣಿಕರಷ್ಟೇ. ವಾರ, 15 ದಿನ ಮುಂಚಿತವಾಗಿ ಕಾಯ್ದಿರಿಸಿದ್ದ ಬಹುತೇಕ ಟಿಕೆಟ್​ಗಳನ್ನು ಪ್ರಯಾಣಿಕರು ರದ್ದುಗೊಳಿಸಿದ್ದಾರೆ.

    ಮುಂಗಡ ಟಿಕೆಟ್ ಕಾಯ್ದಿರಿಸುವವರ ಸಂಖ್ಯೆ ಸಾಕಷ್ಟು ಇಳಿಕೆಯಾಗಿದೆ. ನಿಲ್ದಾಣಗಳಲ್ಲಿಯೂ ಪ್ರಯಾಣಿಕರಿಲ್ಲದೇ ಹಲವಾರು ಟಿಕೆಟ್ ಕೌಂಟರ್​ಗಳನ್ನು ಮುಚ್ಚಲಾಗಿದೆ.

    ಹುಬ್ಬಳ್ಳಿ ನಿಲ್ದಾಣದಲ್ಲಿಯಂತೂ ಬುಧವಾರ ಕಂಡುಬಂದಿದ್ದು ಬೆರಳೆಣಿಕೆ ಪ್ರಯಾಣಿಕರು. ಪ್ಲಾಟ್​ಫಾಮರ್್​ಗಳೂ ಖಾಲಿ ಖಾಲಿ. ನಿಲ್ದಾಣದ ಹೊರಗಿನ ಪ್ರಿಪೇಯ್್ಡ ಆಟೋ ಕೇಂದ್ರಕ್ಕೂ ಕರೊನಾ ವೈರಸ್ ಬಿಸಿ ತಟ್ಟಿದೆ. ನಿತ್ಯ 150 ರಿಂದ 200 ಆಟೋಗಳು ಈ ಪ್ರಿಪೇಯ್್ಡ ಆಟೋ ಕೇಂದ್ರದಿಂದ ಸಂಚರಿಸುತ್ತಿದ್ದವು. ಈಗ ನಿತ್ಯ 50-80 ಆಟೋಗಳು ಸಂಚರಿಸುವುದು ದುಸ್ತವಾಗಿದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ. 4-5 ದಿನಗಳಿಂದ ಕಂಡುಬರುತ್ತಿರುವ ಪ್ರಯಾಣಿಕರ ಇಳಿಮುಖದಿಂದಾಗಿ ನೈಋತ್ಯ ರೈಲ್ವೆ ವಲಯ ಕೆಲ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ.

    ರೈಲು ಸಂಚಾರ ರದ್ದು

    ಏ. 1ರವರೆಗೆ ಯಶವಂತಪುರ- ವಾಸ್ಕೋಡಾಗಾಮಾ – ಯಶವಂತಪುರ ಎಕ್ಸ್​ಪ್ರೆಸ್ ಸ್ಪೆಷಲ್ ಮತ್ತು ವಿಜಯಪುರ- ಮಂಗಳೂರು ಜಂಕ್ಷನ್- ವಿಜಯಪುರ ಡೈಲಿ ಎಕ್ಸ್​ಪ್ರೆಸ್ ರೈಲು, ಮಾ. 31ರವರೆಗೆ ಚೆನ್ನೈ- ಶಿವಮೊಗ್ಗ- ಚೆನ್ನೈ ಬೈ ವೀಕ್ಲಿ ಎಕ್ಸ್​ಪ್ರೆಸ್ ಸ್ಪೆಷಲ್ ಮತ್ತು ಯಶವಂತಪುರ-ವಿಜಯಪುರ- ಯಶವಂತಪುರ ಡೈಲಿ ಎಕ್ಸ್​ಪ್ರೆಸ್ ರೈಲು, ಮಾ. 27ರವರೆಗೆ ಹಬೀಬಗಂಜ್-ಧಾರವಾಡ ಎಕ್ಸ್​ಪ್ರೆಸ್ ಸ್ಪೆಷಲ್ ಮತ್ತು ಮಾ. 28ರವರೆಗೆ ಧಾರವಾಡ- ಹಬಿಬಗಂಜ್ ಎಕ್ಸ್​ಪ್ರೆಸ್ ಸ್ಪೇಷಲ್ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

    ಕರೊನಾ ವೈರಸ್ ಆತಂಕದಿಂದಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ರೈಲ್ವೆ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಹೀಗಾಗಿ ಕೆಲ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.
    | ಇ. ವಿಜಯಾ, ನೈಋತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts