More

    ರೈತ ಸಂಘಕ್ಕೆ ಆಣದೂರೆ ಜಿಲ್ಲಾಧ್ಯಕ್ಷ

    ಬೀದರ್: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ ಬಣ) ಬೀದರ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಹಿರಿಯ ರೈತ ಮುಖಂಡ ಸಿದ್ರಾಮಪ್ಪ ಆಣದೂರೆ ಭಾಲ್ಕಿ ಅವರನ್ನು ನೇಮಕ ಮಾಡಲಾಗಿದೆ.
    ವಿಶ್ವನಾಥ ಪಾಟೀಲ್ ಕೌಠಾ(ಜಿಲ್ಲಾ ಗೌರವಾಧ್ಯಕ್ಷ), ಶ್ರೀಮಂತ ಬಿರಾದಾರ (ಕಾರ್ಯಾಧ್ಯಕ್ಷ), ದಯಾನಂದ ಸ್ವಾಮಿ ಸಿರ್ಸೆ (ಪ್ರಧಾನ ಕಾರ್ಯದರ್ಶಿ ) ಅವರನ್ನು ನೇಮಿಸಲಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳನ್ನು ಸಂಘಟಿಸಿ, ಹೋಬಳಿ, ಗ್ರಾಮ ಪಂಚಾಯಿತಿ, ಗ್ರಾಮ ಸಮಿತಿಗಳನ್ನು ರಚಿಸಬೇಕು. ಸಂಘದ ತತ್ವ, ಸಿದ್ಧಾಂತಗಳಿಗೆ ಯಾವುದೇ ಕಾರಣಕ್ಕೂ ಚ್ಯುತಿ ಬಾರದಂತೆ, ಭ್ರಷ್ಟಾಚಾರ ಮುಕ್ತರಾಗಿ ರೈತರ ಹಿತಕ್ಕಾಗಿ ಕೆಲಸ ಮಾಡಬೇಕು ಎಂದು ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಅವರು ಆಣದೂರೆ ಅವರಿಗೆ ಬರೆದಿರುವ ಪತ್ರದಲ್ಲಿ ಸೂಚಿಸಿದ್ದಾರೆ.
    ಈ ಮಧ್ಯೆ ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘದ ನೂತನ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ರೈತ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಸ್ವಾಮಿ ಅವರು ರಾಜೀನಾಮೆ ಸಲ್ಲಿಸಿದರೂ ರಾಜ್ಯ ಸಮಿತಿ (ಬಡಗಲಪುರ ನಾಗೇಂದ್ರಪ್ಪ ಬಣ) ಅಂಗೀಕಾರ ಮಾಡದೆ ವಿಳಂಬ ಧೋರಣೆ ಅನುಸರಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಭಾಲ್ಕಿಯಲ್ಲಿ ಎಲ್ಲ ತಾಲೂಕಿನ ಪದಾಧಿಕಾರಿಗಳು ಹಾಗೂ ರೈತ ಮುಖಂಡರ ಸಮ್ಮುಖದಲ್ಲಿ ತುರ್ತ ಸಭೆ ನಡೆಸಿ ಎಲ್ಲರ ಸಮ್ಮತದೊಂದಿಗೆ ಬಡಗಲಪುರ ನಾಗೇಂದ್ರಪ್ಪ ಬಣದ ರೈತ ಸಂಘ ಬಿಟ್ಟು ಕೋಡಿಹಳ್ಳಿ ಚಂದ್ರಶೇಖರ ಅವರ ಬಣಕ್ಕೆ ಸೇರಲಾಗಿದೆ ಎಂದು ಹೇಳಿದರು.
    ಮಲ್ಲಿಕಾರ್ಜುನ ಸ್ವಾಮಿ ಅವರು 7 ವರ್ಷಗಳಿಂದ ಸತತ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸ್ವತಃ ರಾಜೀನಾಮೆ ನೀಡಿ ಹೊಸಬರಿಗೆ ಅವಕಾಶ ನೀಡುವ ಬಗ್ಗೆ ಘೋಷಣೆ ಮಾಡಿದ್ದರು. ಆದರೆ ರಾಜೀನಾಮೆ ನೀಡಿದ ನಂತರ ಜಿಗುಪ್ಸೆಯಿಂದ ಹುದ್ದೆಗೆ ಅಂಟಿಕೊಂಡರು. ದುರಾಸೆ ಮತ್ತು ಸ್ವಾರ್ಥಕಾಗಿ ಒಳಗೊಳಗೆ ರಾಜ್ಯ ಸಮಿತಿಗೆ ಸಂಪರ್ಕಿಸಿ ಹಂಗಾಮಿ ಜಿಲ್ಲಾಧ್ಯಕ್ಷರಾಗಿ ಮುಂದುವರೆದರು. ಇದೆಲ್ಲದರಿಂದ ನಾವು ಬೇಸತ್ತು ಕೋಡಿಹಳ್ಳಿ ಬಣಕ್ಕೆ ಹೋಗಿದ್ದೇವೆ ಎಂದರು.
    ಪ್ರಮುಖರಾದ ಶ್ರೀಮಂತ ಬಿರಾದಾರ, ದಯಾನಂದ ಸ್ವಾಮಿ ಸಿಸರ್ಿ, ಚಂದ್ರಶೇಖರ ಜಮಖಂಡಿ, ಶೇಷಾರಾವ ಕಣಜಿ, ಸತೀಷ ನನ್ನೂರೆ, ಪ್ರವೀಣ ಕುಲಕರ್ಣಿ, ಬಾಬುರಾವ ಜೊಳದಾಪಕಾ, ಪ್ರಕಾಶ ಬಾವಗೆ, ಸುಭಾಷ ರಗಟೆ, ವೈಜಿನಾಥ ನೌಬಾದೆ, ಗುರಲಿಂಗಪ್ಪ ಮೇಲದೊಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts