More

    ರೈತ ವಿರೋಧಿ ಕಾಯ್ದೆ ಅನುಷ್ಠಾನ ಬೇಡ

    ಕಾರವಾರ: ವಿವಿಧ ವಿರೋಧ ಪಕ್ಷಗಳು, ರೈತ ಸಂಘಟನೆಗಳು ಕೇಂದ್ರ, ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ವಿರೋಧಿಸಿ ಕರೆ ನೀಡಿದ್ದ ಕರ್ನಾಟಕ ಬಂದ್​ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಳಿಯಾಳ ಹೊರತುಪಡಿಸಿ ಉಳಿದೆಲ್ಲೂ ಬಂದ್​ಗೆ ಬೆಂಬಲ ದೊರಕಿಲ್ಲ. ಎಂದಿನಂತೆ ಅಂಗಡಿ ಮುಂಗಟ್ಟು ತೆರೆದಿದ್ದು, ಜನಜೀವನ ಸಹಜವಾಗಿತ್ತು ಎಲ್ಲ ತಾಲೂಕುಗಳಲ್ಲಿ ವಿವಿಧ ಪಕ್ಷ ಹಾಗೂ ಸಂಘಟನೆಗಳ ಪ್ರಮುಖರು ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸುವುದಕಷ್ಟೇ ಬಂದ್ ಸೀಮಿತವಾಗಿತ್ತು.

    ಕಾರವಾರದ ಜಿಲ್ಲಾ ರಂಗಮಂದಿರದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಲಾಯಿತು. ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳಿಗೆ ಬರೆದ ಪತ್ರವನ್ನು ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ. ಮೂಲಕ ಸಲ್ಲಿಸಲಾಯಿತು.ಯಮುನಾ ಗಾಂವಕರ್, ರಾಘು ನಾಯ್ಕ, ಎಲಿಷಾ ಎಲಕಪಾಟಿ, ಅಲ್ತಾಫ್ ಶೇಖ್, ಮಂಜುಳಾ ಕಾಣಕೋಣಕರ್, ತಾರಾ ನಾಯ್ಕ, ವಿಶಾಲ, ರಮೇಶ ಮುದ್ಗೇಕರ್, ಪ್ರಶಾಂತ ಲಾಂಜೇಕರ್ ಇದ್ದರು.

    ಶಿರಸಿಯಲ್ಲಿ ರೈತಪರ ಸಂಘಟನೆಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮಾರಿಕಾಂಬಾ ದೇವಾಲಯದ ಬಳಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಹಳೇ ಬಸ್ ನಿಲ್ದಾಣದ ವೃತ್ತದಲ್ಲಿ ಜಮಾವಣೆಗೊಂಡರು. ಎಪಿಎಂಸಿ ಕಾಯ್ದೆ ಹಾಗೂ ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಾಸ್ ಪಡೆಯುವಂತೆ ಆಗ್ರಹಿಸಿದರು. ರೈತ ಸಂಘದ ಮುಖಂಡ ರಾಘವೇಂದ್ರ ನಾಯ್ಕ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ರವೀಂದ್ರ ನಾಯ್ಕ, ಶಿವಾಜಿ ಬನವಾಸಿ, ವೀರಭದ್ರ ನಾಯ್ಕ ಹಾಗೂ ಇತರರಿದ್ದರು.

    ಯಲ್ಲಾಪುರದಲ್ಲಿ ಕರ್ನಾಟಕ ಬಂದ್ ಬೆಂಬಲಿಸಿ ಸಿಐಟಿ, ಬ್ಲಾಕ್ ಕಾಂಗ್ರೆಸ್ ವತಿಯಿಂದ ತಹಸೀಲ್ದಾರ್ ಕಚೇರಿ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು. ನಂತರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಿಐಟಿಯು ತಾಲೂಕು ಘಟಕದ ಅಧ್ಯಕ್ಷೆ ಲಲಿತಾ ಹೆಗಡೆ ಕಾರ್ಯದರ್ಶಿ ಲಕ್ಷ್ಮೀ ಸಿದ್ದಿ, ಸಂಚಾಲಕಿ ಗೌರಿ ಮರಾಠಿ, ನಾಗವೇಣಿ ಮರಾಠಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ. ಎನ್. ಗಾಂವ್ಕಾರ, ಕಾಂಗ್ರೆಸ್ ಪ್ರಮುಖರಾದ ಪ್ರಶಾಂತ ಸಭಾಹಿತ, ಸರಸ್ವತಿ ಗುನಗಾ, ಕೈಸರ್ ಸೈಯ್ಯದ್ ಅಲಿ, ಸೀತಾ ಸಿದ್ದಿ ಇತರರಿದ್ದರು.

    ಮುಂಡಗೋಡ ಪಟ್ಟಣದಲ್ಲಿ ರೈತರು ಪರಿವೀಕ್ಷಣಾ ಮಂದಿರದಿಂದ ಮೆರವಣಿಗೆ ಹೊರಟು ಶಿವಾಜಿ ಸರ್ಕಲ್​ನಲ್ಲಿ ವಾಹನ ಸಂಚಾರ ತಡೆ ನಡೆಸಿದರು. ಸರ್ಕಾರಗಳ ವಿರುದ್ಧ ಘೊಷಣೆ ಕೂಗಿದರು. ನಂತರ ತಹಸೀಲ್ದಾರ್ ಶ್ರೀಧರ ಮುಂದಲಮನಿ ಅವರ ಮೂಲಕ ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಈ ವೇಳೆ ರೈತ ಪರ ಸಂಘಟನೆಗಳು, ದಲಿತ ಪರ ಸಂಘಟನೆಗಳು, ವಿವಿಧ ಸಂಘಟನೆಗಳ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಇದ್ದರು.

    ಸಿದ್ದಾಪುರದಲ್ಲಿ ತಾಲೂಕು ರೈತ ಸಂಘ ಹಸಿರು ಸೇನೆ, ಕಾಂಗ್ರೆಸ್ ಹಾಗೂ ವಿವಿಧ ಸಂಘಟನೆಯವರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ ಮಂಜುಳಾ ಎಸ್.ಭಜಂತ್ರಿ ಅವರಿಗೆ ಮನವಿ ಸಲ್ಲಿಸಿದರು. ತಾಲೂಕು ರೈತ ಸಂಘ ಹಸಿರು ಸೇನೆ ಅಧ್ಯಕ್ಷ ವೀರಭದ್ರ ನಾಯ್ಕ ಮಳವಳ್ಳಿ,ತಾಲೂಕು ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಸಂತ ನಾಯ್ಕ, ತಾಲೂಕು ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಸೀಮಾ ಎಂ.ಹೆಗಡೆ ಕಲ್ಮನೆ, ವಿ.ಎನ್. ನಾಯ್ಕ ಬೇಡ್ಕಣಿ, ತಾಪಂ ಸದಸ್ಯ ನಾಸೀರ್ ಖಾನ್, ಸಾರ್ವಜನಿಕ ಹಿತರಕ್ಷಣಾ ಹೋರಾಟ ವೇದಿಕೆ ಅಧ್ಯಕ್ಷ ಕೆ.ಟಿ. ನಾಯ್ಕ ಹೆಗ್ಗೇರಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಎಚ್.ಕೆ. ಶಿವಾನಂದ, ಕರ್ನಾಟಕ ನಾಡ ರಕ್ಷಣಾ ವೇದಿಕೆಯ ಆಕಾಶ ಕೊಂಡ್ಲಿ, ರೈತ ಸಂಘದ ತಾಲೂಕ ಸಂಘಟನಾ ಕಾರ್ಯದರ್ಶಿ ಸುರೇಶ ನಾಯ್ಕ ತೆಂಗಿನಮನೆ, ಆರ್.ಕೆ. ನಾಯ್ಕ, ಮೈದಿನ ಸಾಬ್, ಸಿ.ಆರ್. ನಾಯ್ಕ ವಿನಾಯಕ ನಾಯ್ಕ ಕಾನ್ಮನೆ ಇತರರಿದ್ದರು.

    ಹೊನ್ನಾವರದ ಶರಾವತಿ ಸರ್ಕಲ್​ನಲ್ಲಿ ಒಟ್ಟುಗೂಡಿದ ರೈತ ಸಂಘ, ಸಿಐಟಿಯು, ಕರ್ನಾಟಕ ರಕ್ಷಣಾ ವೇದಿಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ವಿವಿಧ ಸಂಘಟನೆಗಳ ಸದಸ್ಯರು ಸರ್ಕಾರದ ವಿರುದ್ದ ಘೊಷಣೆ ಕೂಗಿದರು. ನಂತರ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಮಾಜಿ ಶಾಸಕ ಜೆ.ಡಿ.ನಾಯ್ಕ, ರೈತ ಸಂಘದ ಅಧ್ಯಕ್ಷ ತಿಮ್ಮಪ್ಪ ಗೌಡ, ಜೆಡಿಎಸ್ ಮುಖಂಡರಾದ ಜಿ.ಎನ್.ಗೌಡ, ಟಿ.ಟಿ.ನಾಯ್ಕ, ಮಂಕಿ ಆಟೋ ಚಾಲಕರ ಸಂಘದ ಅಧ್ಯಕ್ಷ ರಾಜು ನಾಯ್ಕ, ಕರವೇ ತಾಲೂಕು ಅಧ್ಯಕ್ಷ ಮಂಜುನಾಥ ಗೌಡ, ರೈತ ಸಂಘದ ಕಾರ್ಯದರ್ಶಿ ಗಣೇಶ ಭಂಡಾರಿ, ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಕಲ್ಯಾಣಿ ಗೌಡ, ಗೋವಿಂದ ಮುಕ್ರಿ, ವಿವಿಧ ಸಂಘಟನೆಗಳ ಪ್ರಮುಖರಾದ ಅಣ್ಣಪ್ಪಗೌಡ ಇತರರು ಇದ್ದರು.

    ಕುಮಟಾದಲ್ಲಿ ತಾಲೂಕು ಜೆಡಿಎಸ್ ವತಿಯಿಂದ ತಹಸೀಲ್ದಾರ್ ಮೇಘರಾಜ ನಾಯ್ಕ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ತಾಲೂಕು ಅಧ್ಯಕ್ಷ ಸಿ.ಜಿ.ಹೆಗಡೆ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗಜಾನನ ನಾಯ್ಕ ಅಳ್ವೇಕೋಡಿ, ಮುಖಂಡರಾದ ಸೂರಜ ನಾಯ್ಕ, ಜಿ.ಕೆ.ಪಟಗಾರ, ತಿಮ್ಮಪ್ಪ ಮುಕ್ರಿ, ಮಂಜುಜೈನ್ ಇನ್ನಿತರರು ಇದ್ದರು.

    ಅಂಕೋಲಾದಲ್ಲಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದಿಂದ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಉದಯ ಕುಂಬಾರ ಅವರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಶಾಂತಾರಾಮ ನಾಯಕ, ಕಾಂಗ್ರೆಸ್ ಮುಖಂಡರಾದ ರಮಾನಂದ ನಾಯಕ, ಸುಜಾತಾ ಗಾಂವಕರ, ಉದಯ ಡಿ ನಾಯ್ಕ, ಮಂಜುನಾಥ ಡಿ ನಾಯ್ಕ, ಮೋಹಿನಿ ನಾಯ್ಕ, ಶಾಂತಿ ಆಗೇರ, ಲೀಲಾವತಿ ನಾಯ್ಕ ಇದ್ದರು.

    ರೈತರ ಭೂಮಿಯ ಹಕ್ಕು ಕಸಿದುಕೊಳ್ಳಲು ಸರ್ಕಾರಗಳು ಹೊರಟಿದೆ. ಆದರೆ ಕಾಂಗ್ರೆಸ್ ರೈತರ ಪರ ಇದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿಯನ್ನು ಖಂಡಿಸುತ್ತೇವೆ. ಅಲ್ಲದೆ, ಇದು ಕೇವಲ ಸಾಂಕೇತಿಕ ಪ್ರತಿಭಟನೆ ಆಗಿದ್ದು, ಸರ್ಕಾರದ ಕೂಗು ಮುಟ್ಟಿಸಲು ನಿರಂತರವಾಗಿ ಹೋರಾಟ ಮಾಡಬೇಕು.
    | ಭೀಮಣ್ಣ ನಾಯ್ಕ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts