More

    ರೈತರ ಸ್ವಾವಲಂಬಿ ಬದುಕಿಗೆ ಸಹಕಾರ ಕ್ಷೇತ್ರ ಉಸಿರು; ಸಣ್ಣಪುಟ್ಟ ಕೃಷಿಕರು ಉತ್ತಮ ಬದುಕು ರೂಪಿಸಿಕೊಳ್ಳಲು ಸಹಕಾರಿ

    ಸೊರಬ: ರೈತ ಸಮುದಾಯದ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಸ್ಥಾಪನೆಗೊಂಡ ಸಹಕಾರ ಕ್ಷೇತ್ರ ಇಂದು ವೇಗವಾಗಿ ಬೆಳೆಯತ್ತಿರುವುದು ಸ್ವಾವಲಂಬಿ ಬದುಕಿಗೆ ಉಸಿರಾಗಿದೆ ಎಂದು ಹಿರಿಯ ಸಹಕಾರಿ ಧುರೀಣ, ರಾಜ್ಯ ಅಡಕೆ ಬೆಳೆಗಾರರ ಮಹಾ ಮಂಡಳದ ಅಧ್ಯಕ್ಷ ಎಚ್.ಎಸ್.ಮಂಜಪ್ಪ ಹೇಳಿದರು.
    ಪಟ್ಟಣದಲ್ಲಿ ಮಂಗಳವಾರ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ಸಹಯೋಗದಲ್ಲಿ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
    ಸಹಕಾರ ಕ್ಷೇತ್ರವನ್ನು ಗಟ್ಟಿಗೊಳಿಸದಿದ್ದರೆ ಬಹುಸಂಖ್ಯಾತ ಕೆಳ ಮತ್ತು ಮಧ್ಯಮ ವರ್ಗದ ರೈತರ ಬದುಕು ಶೋಚನೀಯ ಸ್ಥಿತಿಯಲ್ಲಿರುತ್ತಿತ್ತು. ಸಹಕಾರ ಕ್ಷೇತ್ರಗಳಿಂದಲೇ ಇಂದು ಸಣ್ಣಪುಟ್ಟ ರೈತರು ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಉದ್ಯಮ ಮತ್ತು ಸಂಘಗಳನ್ನು ಬಲಿಷ್ಠಗೊಳಿಸುವತ್ತ ಎಲ್ಲರೂ ಪ್ರಯತ್ನ ನಡೆಸಬೇಕು ಎಂದು ತಿಳಿಸಿದರು.
    4 ತಿಂಗಳಲ್ಲಿ 150 ಕೋಟಿ ರೂ. ಲಾಭ: ಕಳೆದ ವರ್ಷ ಶಿಮುಲ್ 16 ಕೋಟಿ ರೂ. ನಷ್ಟದಲ್ಲಿತ್ತು. ನಾನು ಅಧ್ಯಕ್ಷನಾದ 4 ತಿಂಗಳಲ್ಲಿ 150 ಕೋಟಿ ರೂ. ಲಾಭದಲ್ಲಿದೆ ಎಂದು ಶಿಮುಲ್ ಅಧ್ಯಕ್ಷ ಶ್ರೀಪಾದ ಹೆಗಡೆ ಹೇಳಿದರು. ಜಿಲ್ಲಾ ಸಹಕಾರ ಸಂಘವು ತಾಲೂಕಿನಲ್ಲಿ 172 ಕೋಟಿ ರೂ. ಸಾಲ ನೀಡಿದೆ. ತಾಲೂಕಿನಲ್ಲಿ 150 ಹಾಲು ಉತ್ಪಾದಕ ಸಂಘಗಳಿದ್ದು ಪ್ರೋತ್ಸಾಹ ಧನ ಹೆಚ್ಚಳ ಮಾಡಿದ ನಂತರ ಪ್ರತಿ ತಿಂಗಳಿಗೆ 5 ಕೋಟಿ ರೂ. ಹೈನುಗಾರಿಕೆಯಿಂದ ಲಾಭ ಪಡೆಯುತ್ತಿದ್ದಾರೆ. ಮುಂದಿನ ದಿನದಲ್ಲಿ ಹಾಲಿನ ಬೆಲೆ ಹೆಚ್ಚಳವಾಗಲಿದೆ ಎಂದರು. ಸಹಕಾರ ಸಂಘಗಳಲ್ಲಿ ಕೆಲಸ ಮಾಡುವ ಕಾರ್ಯದರ್ಶಿಗಳು ಹಾಗೂ ಅಧ್ಯಕ್ಷರು ಸಹಕಾರಿ ಕಾನೂನುಗಳನ್ನು ಸರಿಯಾಗಿ ತಿಳಿದುಕೊಂಡು ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವ ಮೂಲಕ ಸಂಘಗಳನ್ನು ಲಾಭದತ್ತ ಕೊಂಡೊಯ್ಯಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts