More

    ರೈತರ ಮೇಲೆ ಲಾಠಿ ಪ್ರಹಾರಕ್ಕೆ ವಿರೋಧ ; ರೈತ ಸಂ, ಸಿಐಟಿಯು ಮತ್ತು ಸಿಪಿಐ(ಎಂ) ಪ್ರತಿಭಟನೆ

    ತುಮಕೂರು : ಹರಿಯಾಣ ಕರ್ನಾಲ್‌ನಲ್ಲಿ ರೈತರ ಮೇಲೆ ಪೊಲೀಸರು ನಡೆಸಿರುವ ಲಾಠಿ ಪ್ರಹಾರ ವಿರೋಧಿಸಿ ಭಾನುವಾರ ನಗರದ ಬಿಜಿಎಸ್ ವೃತ್ತದಲ್ಲಿ ಕರ್ನಾಟಕ ಪ್ರಾಂತ ರೈತ ಸಂ, ಸಿಐಟಿಯು ಮತ್ತು ಸಿಪಿಐ(ಎಂ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

    ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರು, ಹರಿಯಾಣದಲ್ಲಿ ಬಿಜೆಪಿ ಸರ್ಕಾರ ನಡೆಸುವ ಪ್ರತಿ ಸಾರ್ವಜನಿಕ ಕಾರ್ಯಕ್ರಮ ವಿರೋಧಿಸುತ್ತಿದ್ದಾರೆ. ಅಲ್ಲಿನ ಸಿಎಂ ರೈತರ ವಿರುದ್ಧ ಅಪಪ್ರಚಾರ ವಾಡುತ್ತಿರುವುದನ್ನು ರೈತರು ಪ್ರಶ್ನಿಸಿದ ಕಾರಣ ಪೊಲಿಸರನ್ನು ಬಿಟ್ಟು ಲಾಠಿ ಚಾರ್ಜ್ ವಾಡಿಸಲಾಗಿದೆ ಎಂದು ಪ್ರಾಂತ ರೈತ ಸಂದ ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ ಆರೋಪಿಸಿದರು.

    ಕೃಷಿ ಕಾನೂನುಗಳ ವಿರುದ್ದ ನಡೆಯುತ್ತಿರುವ ಆಂದೋಲನದ ಭಾಗವಾಗಿ ರೈತರು ಸರ್ಕಾರದ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಏಕಾಏಕಿ ಪೊಲೀಸರು ನಡೆಸಿದ ದಾಳಿಯಲ್ಲಿ ಅನೇಕ ರೈತರು ಗಾಯಗೂಂಡಿದ್ದಾರೆ. ಕೆಲವರಿಗೆ ರಕ್ತ ಬರುವ ಹಾಗೆ ದಾಳಿ ವಾಡಲಾಗಿದ್ದು, ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ಹೊಣೆ ಎಂದು ಮುಖಂಡ ಬಿ.ಉಮೇಶ್ ಹೇಳಿದರು.

    ದೇಶದಲ್ಲಿ ಕಾರ್ಮಿಕ ವರ್ಗ ಅನೇಕ ಹೋರಾಟಗಳಿಂದ ಗಳಿಸಿದ ಹಕ್ಕುಗಳನ್ನು ಕಿತ್ತುಕೊಳ್ಳುವ ಹುನ್ನಾರ ನಡೆಯುತ್ತಿದೆ. ಸುವಾರು 29 ಕಾರ್ಮಿಕ ಕಾನೂನುಗಳನ್ನು ಬದಲಾಯಿಸಿ ಕೇವಲ 4 ಸಂಹಿತೆಗಳಾಗಿ ಪರಿವರ್ತಿಸಲಾಗಿದೆ. ಬಹಳ ವರ್ಷಗಳಿಂದ ಬಾಕಿ ಉಳಿದಿರುವ ಬಗರ್‌ಹುಕುಂ ಸಾಗವಳಿದಾರರಿಗೆ ಸಾಗುವಳಿ ಚೀಟಿ ನೀಡಲು ಸಾಧ್ಯವಾಗಿಲ್ಲ ವೆಂದು ಸಿಪಿಐ ಎಂ ಮುಖಂಡ ಎನ್.ಕೆ.ಸುಬ್ರಮಣ್ಯ ಕಿಡಿ ಕಾರಿದರು.

    ಸಿಐಟಿಯು ಖಜಾಂಚಿ ಲೋಕೇಶ್ ಮಾತನಾಡಿದರು. ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರಾದ ಸೈಯದ್‌ಮುಜೀಬ್, ನರಸಿಂಹಮೂರ್ತಿ, ದೊಡ್ಡನಂಜಪ್ಪ, ಕೋದಂಡಪ್ಪ, ಬಸವರಾಜು, ಗಿರೀಶ್, ಒಬೆದುಲ್ಲಾ, ರುದ್ರೇಶ್, ದೊಡ್ಡರಂಗಯ್ಯ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts