More

    ರೈತರ ಪಂಪ್ ಸೆಟ್ ಗಳಿಗೆ ವಿದ್ಯುಚ್ಛಕ್ತಿ ಅಭಾವ, ಸಹಾಯಧನ ಕೊರತೆ, ಸರ್ಕಾರದ ವಿರುದ್ದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಆಕ್ರೋಶ

    ವಿಜಯಪುರ: ರಾಜ್ಯದಲ್ಲಿ ರೈತರ ನೀರಾವರಿ ಪಂಪ್ ಸೆಟ್ ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸಬೇಕು. ಬಾಕಿ ಇರುವ 4 ಸಾವಿರ ಕೋಟಿ ರೂ.ಅನುದಾನ ಕಲ್ಪಿಸಬೇಕು. ಸಾಲ ಮಾಡಿ ಸಾಗುವಳಿ ಮಾಡುತ್ತಿರುವ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕೆಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಎಂ.ಬಿ. ಪಾಟೀಲ ಆಗ್ರಹಿಸಿದರು.

    ರಾಜ್ಯದಲ್ಲಿ ನೀರಾವರಿ ಪಂಪ್ ಸೆಟ್ ಗಳಿಗೆ ಬೇಕಾದ ವಿದ್ಯುಚ್ಛಕ್ತಿಯ
    ಸಹಾಯಧನ ಅಂದಾಜು 16 ಸಾವಿರ ಕೋಟಿ ರೂ. ಅಂದರೆ
    21333 ಮಿಲಿಯನ್ ಯುನಿಟ್ಸ್ ಸಿಗಬೇಕು. ಸರ್ಕಾರದಿಂದ ಈಗ ದೊರಕಿದ್ದು 12 ಸಾವಿರ ಕೋಟಿ ರೂ. ಅಂದರೆ 16
    ಸಾವಿರ ಮಿಲಿಯನ್ ಯುನಿಟ್ಸ್ ದೊರಕಿದೆ. ಅಂದರೆ ಇನ್ನೂ 4000 ಕೋಟಿ ರೂ. ಅನುದಾನದ ಕೊರತೆ ಇದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

    ಹುಬ್ಬಳ್ಳಿ ಹೆಸ್ಕಾಂ ವ್ಯಾಪ್ತಿಗೆ ಅಂದಾಜು 6400 ಮಿಲಿಯನ್ ಯುನಿಟ್ಸ್ ಬೇಕು. ಹಂಚಿಕೆಯಾಗಿದ್ದು 5500 ಮಿಲಿಯನ್ ಯುನಿಟ್ಸ್ ಮಾತ್ರ. ಅಂದರೆ ಸುಮಾರು 900 ಮಿಲಿಯನ್ ಯುನಿಟ್ಸ್ ವಿದ್ಯುತ್ ಕೊರತೆ ಇದೆ ಎಂದರು.

    ಇನ್ನು ವಿಜಯಪುರ ಜಿಲ್ಲೆಯಲ್ಲಿ ಏಪ್ರೀಲ್ 2022 ರಿಂದ ಜುಲೈ 2022 ರವರೆಗೆ 400.625 ಮಿಲಿಯನ್ ಯುನಿಟ್ಸ್ ಹಂಚಿಕೆಯಾಗಿದೆ. 512.686 ಮಿಲಿಯನ್ ಯುನಿಟ್ ಬಳಕೆಯಾಗಿದೆ‌. ಹಂಚಿಕೆಗಿಂತ ಹೆಚ್ಚಿಗೆ ಬಳಕೆಯಾಗುತ್ತಿರುವ ವಿದ್ಯುಚ್ಛಕ್ತಿ 111 ಮಿಲಿಯನ್ ಯುನಿಟ್ ಇದೆ ಎಂದರು.

    ನಮ್ಮ ಸರ್ಕಾರ 2013-18 ರ ಅವಧಿಯಲ್ಲಿ ರೈತರಿಗೆ ವಿದ್ಯುಚ್ಛಕ್ತಿ ಬಳಕೆಗೆ ಎಷ್ಟೇ ಇದ್ದರೂ ಅನುದಾನ ಒದಗಿಸಿದ್ದೇವೆ. ಈಗ ನೀರಾವರಿ ಪಂಪ್ ಸೆಟ್ ಗಳಿಗೆ ಸರ್ಕಾರ ಸಹಾಯಧನ ಫೀಡರ್ ವಾರು ಹಂಚಿಕೆ ಮಾಡಿದೆ. ಮತ್ತು ಹಂಚಿಕೆಯ ಪ್ರಮಾಣ ಮೀರದಂತೆ ಕಟ್ಟುನಿಟ್ಟಾಗಿ ಅಧಿಕಾರಿಗಳಿಗೆ ಆದೇಶಿಸಲಾಗಿದೆ‌. ಅದಲ್ಲದೇ ಹಂಚಿಕೆಗಿಂತ ಹೆಚ್ಚುವರಿಯಾಗಿ ಬಳಕೆಯಾದ ಪ್ರಮಾಣ ಮತ್ತು ಅವಧಿ ಸರಿದೂಗಿಸಲು ಕಡಿತಗೊಳಿಸುವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

    ಅವಧಿ ಕಡಿತ:
    ಈಗಾಗಲೇ ಸಮಯ ಬದಲಿಸಲಾಗಿದೆ.ಮುಂದಿನ ದಿನಗಳಲ್ಲಿ ತ್ರಿಫೇಸ್ ವಿದ್ಯುತ್ ಅನ್ನು ಏಳು ತಾಸು ಬದಲಾಗಿ ಕಡಿಮೆ ಅವಧಿಗೆ ಪೂರೈಸಲು ಕ್ರಮ ವಹಿಸುತ್ತಿರುವ ಮಾಹಿತಿ ಇದೆ ಎಂದರು.
    ಇದರಿಂದ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಸಾಲಮಾಡಿ ಸಾಗುವಳಿ ಮಾಡುತ್ತಿರುಚ ರೈತರಿಗೆ ವಿದ್ಯುತ್ ನೀಡದೇ ಹೋದಲ್ಲಿ ರೈತರು ಬೀದಿಗೆ ಬೀಳಬೇಕಾಗುತ್ತದೆ. ಹೀಗಾಗಿ ಈಗಾಗಲೇ ರೈತರು ಪ್ರತಿಭಟನೆಗೆ ಇಳಿಯುತ್ತಿದ್ದಾರೆ.
    ಈ ಎಲ್ಲ ಅವಾಂತರಗಳಿಗೆ ರಾಜ್ಯ ಸರ್ಕಾರ ಅನುದಾನ ಒದಗಿಸುವುದೇ ಕಾರಣ ಎಂದರು‌.

    ಅನುದಾನದ ಕೊರತೆಯಿಂದಾಗಿ ಅಧಿಕಾರಿಗಳು ಸಹ ಅಸಹಾಯಕ ರಾಗಿದ್ದಾರೆ. ಹೀಗಾಗಿ ರೈತರು ಅಧಿಕಾರಿಗಳ ಅಸಹಾಯಕತೆ ಕೂಡ ಅರ್ಥ ಮಾಡಿಕೊಳ್ಳಬೇಕು. ತಮ್ಮ ಪ್ರತಿಭಟನೆ ಏನಿದ್ದರೂ ರಾಜ್ಯ ಸರ್ಕಾರದ ವಿರುದ್ದ ಇರಲಿ ವಿನಃ ಅಧಿಕಾರಿಗಳ ವಿರುದ್ಧ ಅಲ್ಲ ಎಂದು ಎಂ‌.ಬಿ. ಪಾಟೀಲ ವಿನಂತಿಸಿದರು.

    ನೀರಾವರಿ ಪ್ರಗತಿ:
    ಇನ್ನು ವಿಜಯಪುರ ಜಿಲ್ಲೆ ನೀರಾವರಿ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಕಂಡಿದೆ. ಶೇ.66 ರಷ್ಟು ಲೋಡ್ ಗ್ರೋಥ್ ಆಗಿದೆ. ವಿದ್ಯುತ್ ಜಾಲದ ಸಾಮರ್ಥ್ಯವನ್ನು ಹೆಚ್ಚುವರಿಯಾಗಿ 60 ಮಿಲಿಯನ್ ವ್ಯಾಟ್ ಅಭಿವೃದ್ಧಿ ಪಡಿಸಲಾಗಿದೆ. ಅದರಂಗೆ ತಿಕೋಟಾ ಮತ್ತು ಇನ್ನುಳಿದ ತಾಲೂಕಿನಲ್ಲಿಯೂ ಲೋಡ್ ಗ್ರೋಥ್ ಕಂಡು ಬಂದಿದೆ. ಇದನ್ನು ಪರಿಗಣಿಸದೇ ವಿದ್ಯುಚ್ಛಕ್ತಿ ಹಂಚಿಕೆ ಮಾಡಲಾಗಿದೆ. ಇದೊಂದು ಅವೈಜ್ಞಾನಿಕ ವಿಧಾನ. ಇದರಿಂದ ಭವಿಷ್ಯದಲ್ಲಿ ರೈತರು ಸಂಕಷ್ಟಕ್ಕೆ ಈಡಾಗಲಿದ್ದಾರೆ ಎಂದು ಎಂ.ಬಿ. ಪಾಟೀಲ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts