More

    ರೈತರು ಸಸಿ ಬೆಳೆಸಲೂ ಮುಂದಾಗಲಿ

    ಬೆಳಗಾವಿ: ರೈತರು ಕೃಷಿ ಬೆಳೆಗಳಿಗೆ ಮಾತ್ರ ಸೀಮಿತಗೊಳ್ಳದೆ ವಿವಿಧ ತಳಿಯ ಸಸಿ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಕೆಎಲ್‌ಇ ಸಂಸ್ಥೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಶ್ರೀದೇವಿ ಅಂಗಡಿ ಹೇಳಿದರು. ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ 93ನೇ ಐಸಿಎಆರ್ ಸಂಸ್ಥಾಪನಾ ದಿನದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲುಷಿತಗೊಳ್ಳುತ್ತಿರುವ ಪರಿಸರ ಶುದ್ಧಗೊಳಿಸಲು ರೈತರು ತಮ್ಮ ಜಮೀನುಗಳಲ್ಲಿ ಹೆಚ್ಚು ಗಿಡ-ಮರ ಬೆಳೆಸಬೇಕು ಎಂದರು. ಐಸಿಎಆರ್ ಹಾಗೂ ಡಿಎಆರ್‌ಇ ನಿರ್ದೇಶಕ ಡಾ. ತ್ರಿಲೋಚನ್ ಮಹಾಪಾತ್ರ ಮಾತನಾಡಿ, ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ರೈತರು ತಮ್ಮ ಜಮೀನು ಬದುಗಳಲ್ಲಿ ಗಿಡ ಬೆಳೆಸಬೇಕು. ಜತೆಗೆ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದರು. ವಿಜ್ಞಾನಿಗಳಾದ ಡಾ.ಎಸ್.ಎಸ್. ಹಿರೇಮಠ, ಎಸ್.ಎಂ.ವಾರದ, ಪ್ರವೀಣ ಯಡಹಳ್ಳಿ, ಡಾ.ನಾಗೇಶ ಹುಯಿಲಗೋಳ, ಕ್ಷೇತ್ರ ವ್ಯವಸ್ಥಾಪಕ ಶಂಕರಗೌಡ ಪಾಟೀಲ ಹಾಗೂ ರೈತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts